ಗದಗ | ‘ಕನ್ನಡದಲ್ಲಿ ಕಲಿ, ಜೊತೆಗೆ ಇಂಗ್ಲೀಷನ್ನೂ ಕಲಿ’ ಸೂತ್ರವಾಗಬೇಕು: ಸಮ್ಮೇಳನಾಧ್ಯಕ್ಷ ಜೆ ಕೆ ಜಮಾದಾರ

Date:

Advertisements

“ಪ್ರಾಥಮಿಕ ಶಿಕ್ಷಣ ಮಾತೃಭಾಷೆಯಲ್ಲಿದ್ದರೆ ಮಕ್ಕಳ ಕಲಿಕೆ ಹೆಚ್ಚು ಪರಿಣಾಮಕಾರಿಯಾಗುತ್ತದೆ. ಇಂಗ್ಲೀಷ್ ಮತ್ತು ಮಾತೃಭಾಷೆ ಎಂದರೆ ಕಿಟಕಿ ಹಾಗೂ ಬಾಗಿಲು ಇದ್ದಂತೆ. ಮಾತೃಭಾಷೆಯಲ್ಲಿ ಕಲಿತವರು ಅತ್ಯಧಿಕ ಪ್ರತಿಭಾನ್ವಿತರಾಗಿಯೂ ಹೊರಹೊಮ್ಮಿದ್ದಾರೆ. ಕನ್ನಡದಲ್ಲಿ ಕಲಿ, ಜೊತೆಗೆ ಇಂಗ್ಲೀಷನ್ನೂ ಕಲಿ ಎಂಬುದು ನಮ್ಮ ಸೂತ್ರವಾಗಬೇಕು” ಎಂದು ಸಮ್ಮೇಳನಧ್ಯಕ್ಷ ಜೆ ಕೆ ಜಮಾದಾರ ಹೇಳುದರು.

ಗದಗ ಜಿಲ್ಲೆಯ ಗದಗ ತಾಲ್ಲೂಕಿನ ಕುರ್ತಕೋಟಿ ಗ್ರಾಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಗದಗ ತಾಲ್ಲೂಕು 5ನೇ ಕನ್ನಡ ಸಾಹಿತ್ಯ ಸಮ್ಮೇಳನವುದಲ್ಲಿ ಸಮ್ಮೇಳನಾಧ್ಯಕ್ಷ ಜೆ ಕೆ ಜಮಾದಾರ ಮಾತನಾಡಿದರು.

ಸಾರ್ವಜನಿಕ ಶಿಕ್ಷಣ ವ್ಯವಸ್ಥೆ ೧೯೩೫ ರಲ್ಲಿ ರೂಪುಗೊಂಡಿತು. ಅಂದಿನಿಂದ ಇಂಗ್ಲೀಷ ಭಾಷೆಯ ಪ್ರಾಬಲ್ಯ ಪ್ರಾರಂಭವಾಯಿತು. ಅಲ್ಲಿಯವರಗೆ ನಮ್ಮ ಸಮಾಜದ ಬಹು ಜನರು ಶಿಕ್ಷಣದಿಂದ ವಂಚಿತರಾಗಿದ್ದರು. ಸಂಸ್ಕೃತದ ಆರಾಧಕರಾಗಿದ್ದ ಮೇಲ್ವರ್ಗದವರು ಇಂಗ್ಲೀಷನ್ನು ಆರಾಧಿಸತೊಡಗಿದರು. ಇದನ್ನು ಅನುಸರಿಸಿ ಉಳಿದವರೆಲ್ಲರೂ ಈ ಪರಕೀಯ ವ್ಯಾಮೋಹಕ್ಕೆ ಒಳಗಾದರರು. ಅದು ಇಂದಿಗೂ ಮುಂದುವರೆದಿದೆ. ಇದು ವಾಸ್ತವಿಕ ಕಹಿ ಸತ್ಯ” ಎಂದು ಬೇಸರ ವ್ಯಕ್ತಪಡಿಸಿದರು.

Advertisements

“ಸಮರ್ಥ ಶಿಕ್ಷಣಕ್ಕಾಗಿ ಮಾತೃಭಾಷೆಯೇ ಸೂಕ್ತ ಎಂಬುದು ವೈಜ್ಞಾನಿಕವಾಗಿ ಸಿದ್ಧವಾದ ವಿಚಾರ ಆದರೆ ಇಂಗ್ಲೀಷ್ ವ್ಯಾಮೋಹ “ಅನ್ನದ ದಾಹ ಇಂಗ್ಲೀಷ ಮೋಹ” ಈ ಚಕ್ರದಿಂದ ನಾವು ಮುಕ್ತರಾಗಬೇಕಾಗಿದೆ ಅದಕ್ಕೆ ನಮ್ಮ ಮಾತೃಭಾಷಾ ಶಾಲೆಗಳನ್ನು ಮಕ್ಕಳ ಆಕರ್ಷಕ ಕಲಿಕಾ ಕೇಂದ್ರಗಳನ್ನಾಗಿ ಮಾಡಲು ಸರಕಾರ ಹಾಗೂ ಸಮಾಜ ಸಮರ್ಪಿತವಾಗಬೇಕಾಗಿದೆ. ಎಂದು ಹೇಳಿದರು.

ಜಿಲ್ಲಾಉಸ್ತುವಾರಿ ಸಚಿವರು ಎಚ್ ಕೆ ಪಾಟೀಲ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಅವರು, “ಗದಗ ನಾಡಿನಲ್ಲಿ ಕೋಳಿವಾಡದ ಕುಮಾರವ್ಯಾಸ, ಮುಳಗುಂದದ ನಾಯಸೇನ, ನಾರಾಯಣಪುರದ ಚಾಮರಸ, ಸವಡಿಯ ದುರ್ಗಸಿಂಹ, ಹಾಸ್ಯ ಕ್ಷೇತ್ರಕ್ಕೆ ಕೊಡುಗೆ ನೀಡಿದ ಎಂ ಎಸ್ ಸುಂಕಾಪುರ, ಗಿರಡ್ಡಿ ಗೋವಿಂದ ರಾಜು, ಚನ್ನವೀರ ಕಣವಿ ಹೀಗೆ ಕನ್ನಡ ಸಾಹಿತ್ಯ ಸೃಷ್ಟಿಸಿದ ಗದಗ ನಾಡು ಎಂದು ಗರ್ವದಿಂದ, ಹೆಮ್ಮೆಯಿಂದ ಹೇಳಲು ಸಂತೋಷ ಆಗುತ್ತಿದೆ. ಎಂದರು.

“ಗದಗ ಪರಿಸರದಲ್ಲಿ ಸಂಸ್ಕೃತಿ, ಕನ್ನಡ ಸಾಹಿತ್ಯ ಎತ್ತಿ ಹಿಡಿಯಲು  ನಮ್ಮ ನಾಡಿನ ಕುರ್ತಕೋಟಿ ಗ್ರಾಮದ ಶ್ರೇಷ್ಠ ವಿಮರ್ಶಕರು ಕೀರ್ತಿನಾಥ ಕುರ್ತಾಕೋಟಿ ಅವರು ಬೇಂದ್ರೆ ಸಾಹಿತ್ಯದ ಕುರಿತು ವಿಮರ್ಶ ಲೇಖನಗಳನ್ನು ಸಾಕಷ್ಟು ಬರೆದಿದ್ದಾರೆ. ಅಂತವರು ಕುರ್ತಕೋಟಿ ಗ್ರಾಮದವರು ಎಂದು ಹೇಳಿಲು ಹೆಮ್ಮೆ ಪಡಬೇಕು” ಎಂದು ಹೇಳಿದರು.

“ಕೀರ್ತಿನಾಥ ಕುರ್ತಕೋಟಿ ಅವರ ಸಾಂಸ್ಕೃತಿಕ ಭವನಕ್ಕೆ ಒಂದು ಕೋಟಿ ರೂಪಾಯಿ ಅನುದಾನ ನೀಡಿ ಅದಕ್ಕೆ ಇಂದು ಅಡಿಗಲ್ಲು ಹಾಕಿದ್ದೇವೆ. ಈ ಸಮ್ಮೇಳನದ ಮೂಲಕ ವಸತಿ ರಹಿತರಿಗೆ ಮನೆಗಳನ್ನು ಕೇಳಿದ್ದೀರಿ, 300 ಮನೆಗಳನ್ನು ಕೊಡುವುದಾಗಿ” ಎಚ್ ಕೆ ಪಾಟೀಲರು ತಿಳಿಸಿದರು.

“ಜೆ ಕೆ ಜಮಾದಾರ ಅವರು ಶಿಕ್ಷಕರಾಗಿ, ನಾಗರೀಕ ಪತ್ರಿಕೆಯ ಪತ್ರಕರ್ತರಾಗಿ ಅಂಕಣಕಾರರಾಗಿ, ಬರಹಗಾರರಾಗಿ, ಸಂಪಾದಕೀಯ ಲೇಖಕರಾಗಿ ಸಾಕಷ್ಟು ಕೃತಿಗಳನ್ನು ರಚಿಸಿರುವ ಜಮಾದಾರ ಅವರನ್ನು ಸಮ್ಮೇಳನಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದು ಸೂಕ್ತ” ಎಂದು ಹೇಳಿದರು.

ಕಸಾಪ ಜಿಲ್ಲಾಧ್ಯಕ್ಷರು ವಿವೇಕಾನಂದ ಪಾಟೀಲ್ ಅವರು ಸಮ್ಮೇಳನದ ಪ್ರಸ್ತಾವಿಕ ಮಾತುಗಳನ್ನಾಡಿ, “ಸಾಂಸ್ಕೃತಿಕ ಶ್ರೀಮಂತಿಕೆ ಹೊಂದಿರುವ ಗದಗ ಪರಿಸರ ಕವಿರಾಜ ಮಾರ್ಗದಲ್ಲಿ ತಿರುಳ್ಗನ್ನಡ ನಾಡಿನ ರಾಜಧಾನಿ ಆಗಿತ್ತು. ಚಾಮರಸ, ನಯಸೇನ, ದುರ್ಗಸಿಂಹ ಇವರನ್ನು ಒಳಗೊಂಡು ಇನ್ನೂ ಅನೇಕರು ಕನ್ನಡ ಸಾಹಿತ್ಯ ಪರಂಪರೆ ಹೊಂದಿರುವುದನ್ನು ಕಾಣುತ್ತೇವೆ. ಗದಗ ಪರಿಸರವು ಮುಂಬೈ ಪ್ರಾಂತ್ಯಕ್ಕೆ ಸೇರ್ಪಡೆಯಾಗಿತ್ತು. ಏಕೀಕರಣ ನಂತರದಲ್ಲಿ ಕನ್ನಡ ಭಾಷೆ ಮಾತನಾಡವ ಜನರನ್ನು ಒಟ್ಟುಗೂಡಿಸುವ ನಿಟ್ಟಿನಲ್ಲಿ ಕಸಾಪ ಸಮ್ಮೇಳನಗಳು ನಡೆಸುತ್ತಿದೆ. ಈ ಮೂಲಕ ಸಾಹಿತ್ಯ ಪರಂಪರೆ, ಪರಿಸರ, ಸಂಸ್ಕೃತಿ ಶ್ರೀಮಂತಿಕೆಯನ್ನು ಇಂತಹ ಸಮ್ಮೇಳನಗಳಿಂದ ಇಂದಿನ ಮಕ್ಕಳಿಗೆ ತಿಳಿಸುವ ಪ್ರಯತ್ನವಾಗಿದೆ” ಎಂದು ಹೇಳಿದರು.

ಈ ಸಂದರ್ಭದಲ್ಲಿ ಸ್ಮರಣ ಸಂಚಿಕೆ ಬಿಡುಗಡೆ, ಕೃತಿಗಳನ್ನು ಬಿಡುಗಡೆ ಹಾಗೂ ಸಮ್ಮೇನಾಧ್ಯಕ್ಷರ ಭಾಷಣ ಪ್ರತಿ ಬಿಡುಗಡೆಗೊಳಿಸಿದರು.

ಈ ಸುದ್ದಿ ಓದಿದ್ದೀರಾ? ಧಾರವಾಡ | ಪ್ರಜಾಪ್ರಭುತ್ವ ಬುನಾದಿ ಹಾಕಿದ ಅಂಬೇಡ್ಕರ್; ಸಾಮಾಜಿಕ ಸಮಾನತೆಯ ಶಿಲ್ಪಿ: ಪ್ರೊ. ಕನಕಣಿ

ಸಮ್ಮೇಳನ ಉದ್ಘಾಟನಾ ಕಾರ್ಯಕ್ರಮದ ವೇದಿಕೆ ಮೇಲೆ ನಿಕಟಪೂರ್ವ ಅಧ್ಯಕ್ಷರು ಪರಮಾಪೂಜ್ಯ ಶ್ರೀ ಶಿವಶರಣೆ ಡಾ. ನೀಲಮ್ಮ ತಾಯಿಯವರು, ಬೂದಿಶ್ವರ ಸ್ವಾಮಿಗಳು ಮಾಜಿ ಶಾಸಕರು ಡಿ. ಆರ್. ಪಾಟೀಲ್, ಅಪ್ಪಣ್ಣ ಇನಾಮತಿ, ಗಿರೀಶ ದಬಾಲಿ ಡಾ. ಶಿವಪ್ಪ ಕುರಿ, ಅನ್ನದಾನಿ ಹಿರೇಮಠ, ಶರಣೆ ರತ್ನಕ್ಕ ಪಾಟೀಲ್ ಚಂದ್ರಶೇಖರಪ್ಪ ಚೂರಿ, ಆರ್ ಎಸ್ ಬುರಡಿ, ವೀರಯ್ಯಸ್ವಾಮಿ, ವಿ ವಿ ನಡುವಿನಮನಿ, ಆರ್ ವಿ ಶೆಟ್ಟಪ್ಪನವರ, ಡಿ ಎಸ್ ತಳವಾರ, ಶಂಕರ ಹಡಗಲಿ ಇನ್ನೂ ಅನೇಕರು ಉಪಸ್ಥಿತರಿದ್ದರು.

ಈದಿನ 1
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

ಬೀದರ್‌ | ಬೆಳೆ ಹಾನಿ : ಹೆಕ್ಟೇರ್‌ಗೆ ₹50 ಸಾವಿರ ಪರಿಹಾರಕ್ಕೆ ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಬೆಳೆ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ....

Download Eedina App Android / iOS

X