ಗದಗ | ಮಠ ತ್ಯಜಿಸಿ ರಾಜಕೀಯಕ್ಕೆ ಇಳಿಯಲಿ; ದಿಂಗಾಲೇಶ್ವರ ಸ್ವಾಮೀಜಿ ವಿರುದ್ಧ ಸೂಳಿಬಾವಿ ಕಿಡಿ

Date:

Advertisements

ದಿಂಗಾಲೇಶ್ವರ ಸ್ವಾಮೀಜಿ ಒಬ್ಬ ತಂತ್ರಗಾರ ರಾಜಕಾರಣಿಗೆ ಸಮನಾದವರು. ತಂತ್ರ–ಕುತಂತ್ರ ಮಾಡುವುದರಲ್ಲಿ ಎತ್ತಿದ ಕೈ. ಬ್ಲಾಕ್‌ಮೇಲ್‌ ಮಾಡುವುದರಲ್ಲೂ ನಿಸ್ಸೀಮ. ಹಾಗಾಗಿ, ಅವರು ಮಠ ತ್ಯಜಿಸಿ, ತಮ್ಮ ವ್ಯಕ್ತಿತ್ವಕ್ಕೆ ಅನುಗುಣವಾಗಿ ಯಾವುದಾದರೂ ರಾಜಕೀಯ ಪಕ್ಷ ಸೇರಿಕೊಳ್ಳಬೇಕು. ಇಲ್ಲವಾದರೆ ಭಕ್ತರೇ ಅವರನ್ನು ತ್ಯಜಿಸುತ್ತಾರೆ ಎಂದು ಸಾಹಿತಿ ಬಸವರಾಜ ಸೂಳಿಬಾವಿ ತಿಳಿಸಿದರು.

ಗದಗ ನಗರದಲ್ಲಿ ಸೋಮವಾರ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ, “ಧಾರವಾಡ ಲೋಕಸಭಾ ಕ್ಷೇತ್ರದಿಂದ ಪಕ್ಷೇತರನಾಗಿ ಸ್ಪರ್ಧಿಸುತ್ತೇನೆ. ನನ್ನ ವಿರೋಧ ಇರುವುದು ಪ್ರಲ್ಹಾದ ಜೋಶಿ ವಿರುದ್ಧವೇ ಹೊರತು, ಬಿಜೆಪಿ ಮೇಲಲ್ಲ ಎನ್ನುತ್ತಾರೆ. ಜೋಶಿ ಅವರಿಂದ ಲಿಂಗಾಯತರಿಗೆ ಅನ್ಯಾಯವಾಗಿದೆ ಎನ್ನುತ್ತಾರೆ. ಆದರೆ, ಯಾವ ರೀತಿ ಅನ್ಯಾಯ ಆಗಿದೆ? ಎಲ್ಲೆಲ್ಲಿ ಅನ್ಯಾಯ ಆಗಿದೆ? ಎಂಬ ವಿಷಯಗಳನ್ನು ಸ್ಪಷ್ಟಪಡಿಸುವುದಿಲ್ಲ. ಅಂಕಿ ಸಂಖ್ಯೆಗಳ ಸಹಿತವಾಗಿ ಆರೋಪ ಮಾಡಿದರೆ ಅದಕ್ಕೊಂದು ಅರ್ಥ ಇರುತ್ತದೆ” ಎಂದರು.

“ಹಿಂದೂ ಧರ್ಮದ ಅಡಿ ಎಲ್ಲ ಧರ್ಮಗಳನ್ನು ಆಪೋಶನ ತೆಗೆದುಕೊಳ್ಳುವ ಪ್ರಯತ್ನವನ್ನು ಬಿಜೆಪಿ ನಿರಂತರವಾಗಿ ಮಾಡುತ್ತಿದೆ. ರಾಜ್ಯದಲ್ಲಿ ಪ್ರತ್ಯೇಕ ಲಿಂಗಾಯತ ಧರ್ಮದ ಹೋರಾಟ ನಡೆದಾಗ ಇದೇ ಕಾರಣಕ್ಕೆ ಬಿಜೆಪಿ ಅದನ್ನು ಬೆಂಬಲಿಸಲಿಲ್ಲ. ಅಷ್ಟೇ ಏಕೆ, ದಿಂಗಾಲೇಶ್ವರ ಸ್ವಾಮೀಜಿ ಕೂಡ ಇದನ್ನು ವಿರೋಧಿಸಿದ್ದರು. ಅಂತಹವರು ಇವತ್ತು ಲಿಂಗಾಯತರಿಗೆ ಅನ್ಯಾಯವಾಗಿದೆಯೆಂದು ಹೇಳುತ್ತಿದ್ದಾರೆ. ಇದೇ ಮೊದಲ ಬಾರಿಗೆ ಅವರ ಬಾಯಿಂದ ಲಿಂಗಾಯತ ಎಂಬ ಪದ ಹೊರಬಂದಿದೆ” ಎಂದು ಆಶ್ಚರ್ಯ ವ್ಯಕ್ತಪಡಿಸಿದರು.

Advertisements

“ಲಿಂಗಾಯತ ಪರಂಪರೆ ಹತ್ತಿಕ್ಕುವ, ನಾಶಗೊಳಿಸುವ ಪ್ರಯತ್ನದ ವಿರುದ್ಧ ಹೋರಾಟ ನಡೆಸುವುದಾದರೆ ಅದಕ್ಕೊಂದು ಅರ್ಥ ಇದೆ. ಆದರೆ, ಅವರು ಆ ಮಾತನ್ನು ಹೇಳುತ್ತಿಲ್ಲ. ಜೋಶಿ ವಿರುದ್ಧ ಸ್ಪರ್ಧೆ ಮಾಡುತ್ತೇನೆ ಎನ್ನುತ್ತಾರೆ. ಈ ಸ್ಪರ್ಧೆಯ ಹಿಂದೆ ಅನೇಕ ತಂತ್ರಗಾರಿಕೆ ಅಡಗಿದೆ” ಎಂಬ ಅನುಮಾನ ವ್ಯಕ್ತಪಡಿಸಿದರು.

“ದಿಂಗಾಲೇಶ್ವರ ಸ್ವಾಮೀಜಿ ತಂತ್ರಗಳ ಮೂಲಕವೇ ಮೂರುಸಾವಿರ ಮಠಕ್ಕೆ ಪೀಠಾಧೀಶರಾಗಲು ಹೊರಟ್ಟಿದ್ದರು. ಹುಬ್ಬಳ್ಳಿಯ ‌ರಾಜಕಾರಣಿಗಳು ಪಕ್ಷಾತೀತವಾಗಿ ಇದನ್ನು ವಿರೋಧಿಸಿದ್ದರು. ಅವರಲ್ಲಿ ಜೋಶಿ ಕೂಡ ಒಬ್ಬರು. ಆಗ ವಿರೋಧ ಮಾಡಿದವರ ವಿರುದ್ಧ ಸ್ಪರ್ಧೆ ಮಾಡುವುದು ಇವರ ಈಗಿನ ಉದ್ದೇಶ. ಅವರ ವಿರುದ್ಧ ಚುನಾವಣೆಗೆ ಸ್ಪರ್ಧಿಸಿದರೆ ಕಾಂಗ್ರೆಸ್‌ ಬೆಂಬಲಿಸುತ್ತದೆ. ಜೋಶಿ ಕೂಡ ಹೊಂದಾಣಿಕೆಗೆ ಬರಬಹುದೆಂಬ ತಂತ್ರಗಾರಿಕೆ ಇದರ ಹಿಂದೆ ಅಡಗಿದೆ. ಮೂರುಸಾವಿರ ಮಠದ ಪೀಠಾಧೀಶರಾಗಲು ಇದ್ದ ವಿರೋಧ ತಣ್ಣಗೆ ಮಾಡಲು, ಇವತ್ತಿನ ರಾಜಕಾರಣವನ್ನು ಬಳಸಿಕೊಳ್ಳುತ್ತಿದ್ದಾರೆಯೇ ಹೊರತು, ಜೋಶಿ ಅವರ ಮೇಲೆ ತಾತ್ವಿಕ ವಿರೋಧಗಳು ಏನಿಲ್ಲ” ಎಂದು ಹೇಳಿದರು.

ಈ ಸುದ್ದಿ ಓದಿದ್ದೀರಾ? ಗದಗ | ಹೊಳೆ ಮಣ್ಣೂರಲ್ಲಿ ಮನರೇಗಾ ಕೂಲಿ ಕಾರ್ಮಿಕರೊಂದಿಗೆ ಅಂಬೇಡ್ಕರ್ ಜಯಂತಿ ಆಚರಣೆ 

“ಒಂದು ಊರಿನ ಸೌಹಾರ್ದ ಉಳಿಸಿಕೊಂಡು ಹೋಗಲು ಸಾಧ್ಯವಾಗಿಲ್ಲ. ಜನರ ವೈಮನಸ್ಸನ್ನು ಬಗೆಹರಿಸುವ ಪ್ರಯತ್ನ ಮಾಡಿಲ್ಲ. ಬದಲಾಗಿ ಅವರನ್ನು ವ್ಯವಸ್ಥಿತವಾಗಿ ಹಣಿಯುವ ಕೆಲಸ ಮಾಡಿದ್ದಾರೆ. ಇವರ ವಿರುದ್ಧ ಅನೇಕ ಪ್ರಕರಣಗಳಿದ್ದು, ಬಂಧಿಸುವಂತೆ ನಿರಂತರ ಹೋರಾಟ ಮಾಡಿದ್ದೇವೆ. ಸ್ವಾಮಿತ್ವಕ್ಕೆ ಬೇರೆ ಅರ್ಥ ಇದೆ. ಆದರೆ, ಸ್ವಾಮಿ ಅನ್ನಿಸಿಕೊಳ್ಳುವ ಯಾವ ಅರ್ಹತೆಯೂ ಇವರಿಗೆ ಇಲ್ಲ. ರಾಜಕಾರಣದ ಎಲ್ಲ ಗುಣಗಳೂ ಇವರಲ್ಲಿದ್ದು, ಮಠ ಬಿಟ್ಟು ನೇರವಾಗಿ ರಾಜಕಾರಣಕ್ಕೆ ಇಳಿಯಲಿ. ಅದುಬಿಟ್ಟು, ಮಠವನ್ನು, ಸ್ವಾಮಿತ್ವವನ್ನು ಬೆದರುಬೊಂಬೆ ರೀತಿ ಇನ್ನೊಬ್ಬರ ವಿರುದ್ಧ ಬಳಸಿಕೊಳ್ಳುವುದು ಸರಿಯಾದ ಕ್ರಮವಲ್ಲ” ಎಂದು ದೂರಿದರು.

ಪತ್ರಿಕಾಗೋಷ್ಟಿಯಲ್ಲಿ ಮುತ್ತು ಬಿಳಿಯಲಿ, ಶೇಖಣ್ಣ ಕವಳಿಕಾಯಿ ಇದ್ದರು.

ಈದಿನ 1
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

ಬೀದರ್‌ | ಬೆಳೆ ಹಾನಿ : ಹೆಕ್ಟೇರ್‌ಗೆ ₹50 ಸಾವಿರ ಪರಿಹಾರಕ್ಕೆ ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಬೆಳೆ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ....

Download Eedina App Android / iOS

X