ರೋಣ ತಾಲೂಕನ್ನು ರಾಜ್ಯ ಸರ್ಕಾರ ಬರಗಾಲ ಪೀಡಿತ ಎಂದು ಘೋಷಣೆ ಮಾಡಿದೆ. ಆದರೆ, ಈ ವರೆಗೆ ಬರ ನಿರ್ವಹಣಾ ಕ್ರಮಗಳನ್ನು ಕೈಗೊಂಡಿಲ್ಲ. ಶೀಘ್ರವಾಗಿ ಅಗತ್ಯದ ಕ್ರಮಕ್ಕೆ ಒತ್ತಾಯಿಸಿ ಅಖಂಡ ಕರ್ನಾಟಕ ರಾಜ್ಯ ರೈತ ಸಂಘ ತಹಸೀಲ್ದಾರ್ ರೇಣುಕವ್ವ ಅವರಿಗೆ (ನ.21) ಮನವಿ ಸಲ್ಲಿಸಿದೆ.
ಬೆಳೆಹಾನಿಯಿಂದ ಸಂಕಷ್ಟಕ್ಕೆ ಸಿಲುಕಿರುವ ರೈತರಿಗೆ ಬರ ಪರಿಹಾರದ ಮೊತ್ತ ಜಮೆಯಾಗಿಲ್ಲ. ರಾಜ್ಯ ಮತ್ತು ಕೇಂದ್ರ ಸರ್ಕಾರ ಬರ ಪರಿಹಾರ ಘೋಷಣೆ ಮಾಡಿಲ್ಲ. ಆದ್ದರಿಂದ, ನಾವು ಹೋರಾಟಕ್ಕೆ ಇಳಿಯುವುದು ಅನಿವಾರ್ಯವಾಗಲಿದೆ ಎಂದು ಮನವಿಯಲ್ಲಿ ಎಚ್ಚರಿಸಿದ್ದಾರೆ.
ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಸೋಮಶೇಖರ ಕೊತಂಬರಿ, ತಾಲೂಕು ಅಧ್ಯಕ್ಷ ಪ್ರಕಾಶ ಮಾಸಣಗಿ, ಪ್ರಮುಖರಾದ ವೀರಪ್ಪ ನಿಂಬಣ್ಣನವರ, ರವೀಂದ್ರಗೌಡ ಪಾಟೀಲ, ಶಂಭನಗೌಡ ಪಾಟೀಲ, ಅರ್ಬಾಜ್ ಇನಾಂದಾರ್, ರೋಶನ್, ಶಾನ್ನು, ಚನ್ನವೀರಯ್ಯ ಪೂಜಾರ, ಮಲಕಪ್ಪ ಕೊತಂಬರಿ, ಎಂ.ಎಂ.ಮುಲ್ಲಾ, ಪಿ.ಕೆ.ಪಾಟೀಲ ಮತ್ತಿತರರು ಇದ್ದರು.