ಗದಗ | ಐಸಿಡಿಎಸ್ ಅಲ್ಲದ ಯಾವುದೇ ಕೆಲಸವನ್ನು ಮಾಡುವುದಿಲ್ಲ: ಅಂಗನವಾಡಿ ಕಾರ್ಯಕರ್ತರು ಪ್ರತಿಭಟನೆ

Date:

Advertisements

“ಬಿ.ಎಲ್.ಓ ಕೆಲಸಗಳಿಗೆ ನಮ್ಮನ್ನು ನೇಮಿಸುವುದು ಸರಿಯಲ್ಲಾ. ಐಸಿಡಿಯಸ್ ಅಲ್ಲದ ಯಾವುದೇ ಕೆಲಸವನ್ನು ನಾವು ಮಾಡುವುದಿಲ್ಲ” ಎಂದು ಅಂಗನವಾಡಿ ಕಾರ್ಯಕರ್ತರ ಸಂಘದ ತಾಲೂಕು ಅಧ್ಯಕ್ಷರು ನೀಲಮ್ಮ ಹಿರೇಮಠ ಎಂದು ಹೇಳಿದರು.

ಗದಗ ಜಿಲ್ಲೆಯ ಗಜೇಂದ್ರಗಡ ಪಟ್ಟಣದ ತಹಶಿಲ್ದಾರರ ಕಚೇರಿ ಎದುರು ಅಂಗನವಾಡಿ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಸಿರಸ್ತೆದಾರರ ಮೂಲಕ ಮಾನ್ಯ ತಹಶಿಲ್ದಾರರಗೆ ಮನವಿ ಸಲ್ಲಿಸಿ ಮಾತನಾದರು.

“ಬಿ.ಎಲ್.ಓ ಅಧಿಕಾರಿಗಳು ನಮಗೆ ಅನಧಿಕೃತವಾಗಿ ಕೆಲಸಗಳನ್ನು ಹಚ್ಚುತ್ತಿದ್ದಾರೆ. ನಾವು ಅಂಗನವಾಡಿ ಕಾರ್ಯಕರ್ತರು ಐಸಿಡಿಎಸ್ ಯೋಜನೆಯ ಜಾರಿಗಾಗಿ ಸುಮಾರು 24-25 ಹಂತದ ಕಾರ್ಯಕ್ರಮಗಳನ್ನು ನಿಭಾಯಿಸಿದರೂ ಸಮಯ ಸಿಗುತ್ತಿಲ್ಲ” ಎಂದರು.

Advertisements

ಎಸ್ ಎಫ್ ಐ ನ ರಾಜ್ಯ ಉಪಾಧ್ಯಕ್ಷರು ಗಣೇಶ್ ರಾಥೋಡ್ ಮಾತನಾಡಿ, “ಐಸಿಡಿಎಸ್ ಯೋಜನೆ, ಅದರ ಉದ್ದೇಶ ತಾಯಿ ಮತ್ತು ಮಗುವಿನ ಆರೈಕೆ ಕೆಲಸ. ಅದನ್ನು ಬಿಟ್ಟು ಐಸಿಡಿಎಸ್ ಅಲ್ಲದ ಕೆಲಸಗಳಿಗೆ ಅಂಗನವಾಡಿ ಕಾರ್ಯಕರ್ತರನ್ನ ನೇಮಿಸುತ್ತಿರುವುದು ಅವೈಜ್ಞಾನಿಕ ನಿಯಮವಾಗಿದ್ದು, ಯಾವುದೇ ಕಾರಣಕ್ಕೂ ಐಸಿಡಿಎಸ್ ಅಲ್ಲದ ಕೆಲಸಗಳಿಗೆ ನೇಮಿಸಬಾರದು” ಎಂದರು.

“ಮಹಿಳೆಯರ ಮತ್ತು ಮಗುವಿನ ಆರೈಕೆ, ಪೌಷ್ಟಿಕಾಂಶ, ಘೋಷಣೆ ಯೋಜನೆಗಳ ಜಾರಿ ಹೀಗೆ ಈಗಾಗಲೇ ಅನೇಕ ಕೆಲಸಗಳಿಗೆ ಸಮಯದ ಅಭಾವವಿದೆ. ಇದಾಗ್ಯೂ ಕೆಲಸ ಬಾಕಿ ಉಳಿಯುತ್ತಿದ್ದು, ಅವುಗಳನ್ನು ಸರಿದೂಗಿಸಲು ಐಸಿಡಿಎಸ್ ಯೋಜನೆಯನ್ನು ಸಂಪೂರ್ಣ ಜಾರಿಗೊಳಿಸಬೇಕು. ಅಂಗನವಾಡಿ ಕಾರ್ಯಕರ್ತರಿಗೆ ಸರಿಯಾಗಿ ತರಬೇತಿ ಮತ್ತು ಮೂಲಭೂತ ಸೌಕರ್ಯಗಳನ್ನು ಒದಗಿಸಲು ಸರ್ಕಾರಗಳು ಮುಂದಾಗಬೇಕು. ಬೇರೆ ಬೇರೆ ಕೆಲಸಗಳಿಗೆ ನೇಮಿಸುವುದು ಸರಿಯಲ್ಲ. ಐಸಿಡಿಯಸ್ ಯೋಜನೆಗೆ ಮಾಡುವ ಮೋಸ ಆಗುತ್ತದೆ” ಎಂದರು.

ಈ ಸುದ್ದಿ ಓದಿದ್ದೀರಾ? ಕಾಲ್ತುಳಿತ | ಆರ್‌ಸಿಬಿ ಮತ್ತು ಡಿಎನ್‌ಎ ಪದಾಧಿಕಾರಿಗಳಿಗೆ ಮಧ್ಯಂತರ ಜಾಮೀನು

ಈ ಸಂದರ್ಭದಲ್ಲಿ ಎಸ್ ಎಫ್ ಐ ನ ಜಿಲ್ಲಾಧ್ಯಕ್ಷ ಚಂದ್ರು ರಾಥೋಡ್, ಸಿಐಟಿಯು ಜಿಲ್ಲಾ ಮುಖಂಡರಾದ ಮೈಬು ಹವಾಲ್ದಾರ್, ಅಂಗನವಾಡಿ ಮುಖಂಡರಾದ ಸುಮ್ನೆ ಮಾತಾಡಬೇಡ ಸುನಿತಾ, ಪವಿತ್ರ, ಸವಿತಾ ರಾಠೋಡ, ರಂಜಿತಾ ಕುಲಕರ್ಣಿ, ರತ್ನಾ ವಾಲಿ, ದೀಪಾ ಬಡಿಗೇರ್, ಸುನೀತಾ ಅಜಮೀರ್, ಶಂಕ್ರಮ್ಮ ಸಿಂಹಾಸನದ, ಗೀತಾ ಕಡಬಲಕಟ್ಟಿ, ಖಾಜಾಬಿ ಕುಸುಗಲ್, ದಾನಮ್ಮ ಹಿರೇಮಠ್, ವಿಜಯಲಕ್ಷ್ಮಿ ಪತ್ತಾರ್, ರಾಚಮ್ಮ ಗದಗಿನಮಠ,  ಮಲ್ಲಮ್ಮ ವಿಭೂತಿ, ಮಹಾದೇವಿ,  ಕಸ್ತೂರಿ ಹುಬ್ಬಳಿ, ಸಾವಿತ್ರಿ ಸುಬೇದಾರ್, ಮಂಜುಳಾ ಹಡಪದ, ಸಿದ್ರಾಮವ್ವ ಹಿರೇಮಠ, ಶಾಂತ ಸೋಬಾನದ್, ಲಕ್ಷ್ಮಿಬಾಯಿ ರಾಠೋಡ, ಶಾವಕ್ಕ ಗುರಿಕಾರ್, ಲಕ್ಷ್ಮಿ ಬಂಕದ್, ಪರವಿನ ಬಾನು ಮದಗಾರ, ಶಾರದಾ ಮಂತಾ, ಲಲಿತಾ ಮಾರನಬಸರಿ, ಪವಿತ್ರ ಚಳಗೇರಿ, ಶಾಂತ ಸೋಬಾನದ ಹಾಗೂ ಇತರರು ಹಾಜರಿದ್ದರು.

ಈದಿನ 1
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

ಬೀದರ್‌ | ಬೆಳೆ ಹಾನಿ : ಹೆಕ್ಟೇರ್‌ಗೆ ₹50 ಸಾವಿರ ಪರಿಹಾರಕ್ಕೆ ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಬೆಳೆ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ....

Download Eedina App Android / iOS

X