ಬಾಬಾ ಸಾಹೇಬ್ ಅಂಬೇಡ್ಕರ್ ಅವರು ದೇಹತ್ಯಾಗ ಮಾಡಿದ ದಿನವನ್ನು ‘ಮಹಾ ಪರಿನಿಬ್ಬಾಣ ದಿನ’ವನ್ನಾಗಿ ಆಚರಿಸಲಾಗುತ್ತದೆ. ಹೀಗಾಗಿ ಡಾ. ಬಿ ಆರ್ ಅಂಬೇಡ್ಕರ್ ಅವರನ್ನು ನೆನಪಿಸಿಕೊಳ್ಳುವ ದಿನವೆಂದು ದಲಿತಪರ ಸಂಘಟನೆಗಳು ಅಂಬೇಡ್ಕರ್ ಹಾಗೂ ಅವರ ವಿಚಾರಗಳನ್ನು ನೆನಪಿಸಿಕೊಂಡರು.
ಗದಗ ಪಟ್ಟಣದ ನಗರಸಭೆ ಆವರಣದಲ್ಲಿರುವ ಡಾ. ಬಿ ಆರ್ ಅಂಬೇಡ್ಕರ್ ಅವರ ಮೂರ್ತಿಗೆ ಮಾಲಾರ್ಪಣೆ ಮಾಡುವುದರ ಮೂಲಕ ದಲಿತಪರ ಸಂಘಟನೆಯ ಮುಖಂಡರು ಮಹಾ ಪರಿನಿಬ್ಬಾಣ ದಿನ ಆಚರಿಸಿದರು.
“ಡಾ ಬಿ ಆರ್ ಅಂಬೇಡ್ಕರ್ ಅವರು ಸಮಾಜ ಸುಧಾರಕರಾಗಿ, ಮಹಿಳೆಯರು, ಅಲ್ಪಸಂಖ್ಯಾತರು, ದಲಿತರು ಸೇರಿದಂತೆ ಅಸ್ಪೃಶ್ಯತೆ, ಅಸಮಾನತೆಯ ವಿರುದ್ಧವಾಗಿ ದಿಟ್ಟ ಹೋರಾಟ ಮಾಡಿದರು. ಅನ್ಯಾಯಕ್ಕೆ ಒಳಗಾದ ಸಮಾಜದ ಕಟ್ಟ ಕಡೆಯ ವ್ಯಕ್ತಿಗೆ ನ್ಯಾಯ ದೊರಕಿಸುವಂತೆ ಮಾಡಿದ ಅಂಬೇಡ್ಕರ್ ಅವರು ಈ ದೇಶ ಕಂಡ ಮಹಾನ್ ವ್ಯಕ್ತಿ. ಸಂವಿಧಾನ ರಚಿಸುವುದರ ಮೂಲಕ ಎಲ್ಲರಿಗೂ ಸಮಾನತೆ ನೀಡಿದವರು ಅಂಬೇಡ್ಕರ್” ಎಂದು ದಲಿತ ಮುಖಂಡರು ಹೇಳಿದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಜಾತಿ ತಾರತಮ್ಯ ಹೋಗಲಾಡಿಸಲು ಸಂಘಟಿತರಾಗಬೇಕು: ಡಿ ಎಸ್ ಶರಣಬಸವ
ಈ ಪರಿನಿಬ್ಬಾಣ ಕಾರ್ಯಕ್ರಮದಲ್ಲಿ ಜಿಲ್ಲಾ ಸಂಚಾಲಕ ದುರಗಪ್ಪ, ಲ ಹರಿಜನ, ದಲಿತ ಮುಖಂಡರಾದ ಸತೀಶ್ ಹುಲಿ, ಲಕ್ಷ್ಮಣ ತಗಡಿನಮನಿ, ಕೃಷ್ಣಪ್ಪ ಮಾ ಪೂಜಾರ, ರಾಮು ಪಿ ಬಳ್ಳಾರಿ, ಪ್ರಕಾಶ್ ಹೊಸಹಳ್ಳಿ, ಸೋಮಪ್ಪ ಹೈತಾಪುರ, ಮರಿಯಪ್ಪ ಎಂ ಮಾದರ, ಬಾಲರಾಜ್ ಅರಬರ್, ನಾಗರಾಜ್ ಗೋಕಾವಿ, ಹಣಮಂತ ಪೂಜಾರ್, ಬಸವರಾಜ್ ಕಡೆಮನಿ ಸೇರಿದಂತೆ ಇತರರು ಇದ್ದರು.
