ಮೈಕ್ರೋ ಫೈನಾನ್ಸ್‌ನವರ ಕಿರುಕುಳಕ್ಕೆ ಬೇಸತ್ತ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಟಗೇರಿಯ ನರಸಾಪುರ ಆಶ್ರಯ ಕಾಲೋನಿಯಲ್ಲಿ ಗುರುವಾರ ನಡೆದಿದೆ.
ಕಟ್ಟಡ ಕಾರ್ಮಿಕನಾಗಿದ್ದ ಉಮೇಶ ಕಾಟವಾ(40) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಖಾಸಗಿ ಫೈನಾನ್ಸ್‌ನವರು ಕಳೆದ ಎರಡು ದಿನಗಳಿಂದ ಉಮೇಶ ಅವರ ಮನೆಗೆ ಹೋಗಿ ಸಾಲ ಮರುಪಾವತಿಸುವಂತೆ ಒತ್ತಾಯಿಸುತ್ತಿದ್ದರೆಂದು ಪೊಲೀಸರು ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಕೊಪ್ಪಳ | ಕಾಲುವೆ ನೀರಿನ ಸಮರ್ಪಕ ಬಳಕೆಗೆ ಕ್ರಮವಹಿಸಿ: ಸುಂದರೇಶ ಬಾಬು
ಉಮೇಶ ಕಟವಾ ಅವರ ಪತ್ನಿ ಖಾಸಗಿ ಫೈನಾನ್ಸ್‌ನಿಂದ ₹1.50 ಲಕ್ಷ ಸಾಲ ಪಡೆದಿದ್ದರು. ಖಾಸಗಿ ಫೈನಾನ್ಸ್‌ನವರು ಬುಧವಾರ ಮತ್ತು ಗುರುವಾರ ಮನೆಗೆ ಬಂದು ಸಾಲ ಮರುಪಾವತಿಸುವಂತೆ ಒತ್ತಾಯಿಸಿದ್ದಾರೆ. ಇದರಿಂದ ಸೂಕ್ಷ್ಮ ಪ್ರವೃತ್ತಿಯವರಾಗಿದ್ದ ಉಮೇಶ ಮನನೊಂದು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಬೆಟಗೇರಿ ಪೊಲೀಸರು ತಿಳಿಸಿದ್ದಾರೆ. ಬೆಟಗೇರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
