ಗದಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಜಿಮ್ಸ್)ಯೊಳಗೆ ‘ರೀಲ್ಸ್’ ವಿಡಿಯೋ ವೈರಲ್ ಆಗುತ್ತಿದ್ದಂತೆ 38 ಮಂದಿ ವೈದ್ಯಕೀಯ ವಿದ್ಯಾರ್ಥಿಗಳನ್ನು ಅಮಾನತುಗೊಳಿಸಿರುವುದು ವರದಿಯಾಗಿದೆ.
ವೈರಲ್ ಆಗುತ್ತಿರುವ ವೀಡಿಯೊಗಳಲ್ಲಿ ಒಂದು ವೀಡಿಯೊದಲ್ಲಿ ಮೂವರು ವಿದ್ಯಾರ್ಥಿನಿಯರು ಬಾಲಿವುಡ್ ಹಾಡಿಗೆ ನೃತ್ಯ ಮಾಡುತ್ತಿದ್ದರೆ, ಇನ್ನೊಂದು ವೀಡಿಯೊದಲ್ಲಿ 10ಕ್ಕೂ ಅಧಿಕ ವಿದ್ಯಾರ್ಥಿಗಳು ಕನ್ನಡ ಹಾಡಿನ ಸಾಹಿತ್ಯಕ್ಕೆ ಅಭಿನಯಿಸಿದ್ದಾರೆ.
ಜಿಮ್ಸ್ ನಿರ್ದೇಶಕ ಡಾ.ಬಸವರಾಜ್ ಬೊಮ್ಮನಹಳ್ಳಿ ಅವರು ವಿದ್ಯಾರ್ಥಿಗಳನ್ನು ಅಮಾನತುಗೊಳಿಸಿದ್ದು, ಮುಂದಿನ ದಿನಗಳಲ್ಲಿ ಇದೇ ಘಟನೆ ಪುನರಾವರ್ತನೆಯಾದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಈ ರೀಲ್‌ಗಳಲ್ಲಿ ಯುವ ವಿದ್ಯಾರ್ಥಿಗಳು ‘ಪ್ರೇಮಲೋಕ’ ಚಿತ್ರದ ಕನ್ನಡ ಹಾಡು ಮತ್ತು ಬಾಲಿವುಡ್ ಚಿತ್ರ ‘ಮೊಹ್ರಾ’ದ ಹಿಂದಿ ಹಾಡಿಗೆ ನೃತ್ಯ ಮಾಡಿದ್ದಾರೆ.
#Karnataka 38 medical students from #GIMS in #Gadag were suspended by the authorities after their reels shot inside the hospital goes viral, reports @raghukoppar @NewIndianXpress @XpressBengaluru @KannadaPrabha @gadag_online @IMAIndiaOrg @dineshgrao pic.twitter.com/8SyBsv1yw3
— Amit Upadhye (@AmitSUpadhye) February 10, 2024
ಈ ರೀಲ್‌ಗಳು ಜಿಮ್ಸ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ನಡೆಯುವ ಚಟುವಟಿಕೆಗಳ ಬಗ್ಗೆ ಸಾರ್ವಜನಿಕ ವಲಯದಲ್ಲಿ ಪ್ರಶ್ನೆಗಳನ್ನು ಎತ್ತಿವೆ.
ದಾಖಲಾದ ರೋಗಿಗಳ ಸ್ಥಿತಿ ಮತ್ತು ಜಿಮ್ಸ್‌ನಲ್ಲಿ ಮೇಲ್ವಿಚಾರಣೆಯ ಬಗ್ಗೆ ಅನೇಕ ನೆಟ್ಟಿಗರು ಕಳವಳ ವ್ಯಕ್ತಪಡಿಸಿದ್ದಾರೆ. ಅವರಲ್ಲಿ ಕೆಲವರು ಜಿಮ್ಸ್ ಯಾವಾಗ ವೀಡಿಯೊ ಶೂಟಿಂಗ್ ತಾಣವಾಗಿ ಮಾರ್ಪಟ್ಟಿತು? ಎಂದು ಕೇಳಿದ್ದಾರೆ.
#Karnataka 38 medical students from #GIMS in #Gadag were suspended by the authorities after their reels shot inside the hospital goes viral, reports @raghukoppar @NewIndianXpress @XpressBengaluru @KannadaPrabha @gadag_online @IMAIndiaOrg @dineshgrao pic.twitter.com/8SyBsv1yw3
— Amit Upadhye (@AmitSUpadhye) February 10, 2024
“ವೈದ್ಯಕೀಯ ವಿದ್ಯಾರ್ಥಿಗಳ ತಂಡವೊಂದು ಆಸ್ಪತ್ರೆಯಲ್ಲಿ ರೀಲ್ಸ್ ಮಾಡಿರುವ ಘಟನೆ ಶುಕ್ರವಾರ ಗಮನಕ್ಕೆ ಬಂದಿದೆ. ಈ ಗುಂಪಿನಲ್ಲಿ 15 ಹೌಸ್ ಸರ್ಜನ್‌ಗಳು ಸೇರಿದ್ದಾರೆ. ಅವರು ಮುಂದಿನ ಕೆಲವು ತಿಂಗಳುಗಳಲ್ಲಿ ಪದವಿ ಪಡೆಯಲಿದ್ದಾರೆ. ನಮ್ಮ ವಿಚಾರಣೆಯ ಸಮಯದಲ್ಲಿ, ಅವರು ತಮ್ಮ ಪದವಿಪೂರ್ವ ಆಚರಣೆಯ ಭಾಗವಾಗಿ ಇದನ್ನು ಮಾಡಿದ್ದಾರೆ” ಎಂದು ಜಿಮ್ಸ್ ನಿರ್ದೇಶಕ ಡಾ.ಬಸವರಾಜ ಬೊಮ್ಮನಹಳ್ಳಿ ತಿಳಿಸಿದ್ದಾರೆ.
“ಅವರು 5 ವರ್ಷಗಳ ಕಾಲ ಜಿಮ್ಸ್‌ನಲ್ಲಿ ಅಧ್ಯಯನ ಮಾಡಿದ್ದಾರೆ. ಸಂಸ್ಥೆಯಲ್ಲಿ ಏಪ್ರಿಲ್ 7ರಂದು ಅವರ ಕೊನೆಯ ಕಲಿಕೆಯ ದಿನವಾಗಿದೆ. ಅದಕ್ಕಾಗಿಯೇ ಅವರು ವಿಡಿಯೋವನ್ನು ಚಿತ್ರೀಕರಿಸಿದ್ದಾರೆ. ಜಿಮ್ಸ್ ಆವರಣದಲ್ಲಿ ಈ ರೀತಿ ಮಾಡಬಾರದೆಂದು ನಾವು ಅವರಿಗೆ ಹೇಳಿದ್ದೇವೆ. ನಾವು ಅವರ ವಿರುದ್ಧ ಕ್ರಮ ಕೈಗೊಂಡಿದ್ದೇವೆ” ಎಂದು ಡಾ ಬಸವರಾಜ ಬೊಮ್ಮನಹಳ್ಳಿ ವಿವರಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಗದಗ | ಜಾತಿ ಪದ್ದತಿ ನಿರ್ಮೂಲನೆ ಮಾಡುವ ಶಕ್ತಿ ಶಿಕ್ಷಣದಲ್ಲಿದೆ: ಸಚಿವ ಎಚ್ ಕೆ ಪಾಟೀಲ್
38 ಜಿಮ್ಸ್ ವಿದ್ಯಾರ್ಥಿಗಳನ್ನು ಅಮಾನತುಗೊಳಿಸಿದ ಆಡಳಿತದ ಕ್ರಮವನ್ನು ಶ್ಲಾಘಿಸಿದ ಕೆಲವು ಟ್ವಿಟರ್ ಬಳಕೆದಾರರು, ಇಂತಹ ಕೃತ್ಯಗಳನ್ನು ಆಸ್ಪತ್ರೆಗಳಲ್ಲಿ ಮಾಡಬಾರದೆಂದು ಹೇಳಿದ್ದಾರೆ.