ಗದಗ ನಗರದಲ್ಲಿ ಹೊಸದಾಗಿ ಸೇವೆ ಆರಂಭಿಸಿರುವ ಡಬಲ್ ಡೆಕ್ಕರ್ ಅಂಬಾರಿ ಬಸ್ ಸೇವೆಗೆ ಪ್ರವಾಸೋದ್ಯಮ ಮತ್ತು ಗದಗ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ ಪಾಟೀಲ್ ಮಂಗಳವಾರ (ಜ.31) ಚಾಲನೆ ನೀಡಿದರು.
ಸದರಿ ಬಸ್‍ನ ಟಿಕೆಟ್ ದರ ವಿದ್ಯಾರ್ಥಿಗಳಿಗೆ ರೂ.100 ಹಾಗೂ ಸಾರ್ವಜನಿಕರಿಗೆ ರೂ.120 ಇರುತ್ತದೆ. ಅಂಬಾರಿ ಬಸ್‍ನ ಸಮಯ ಬೆಳಿಗ್ಗೆ 9.30ರಿಂದ ಸಂಜೆ 6ಗಂಟೆಯವರೆಗೆ ಇರುತ್ತದೆ. ಅಂಬಾರಿ ವಾಹನ ಚಲಿಸುವ ಮಾರ್ಗ ಹೊಸ ಬಸ್ ನಿಲ್ದಾಣದಿಂದ – ಬಸವೇಶ್ವರ ಮೂರ್ತಿ ಪುತ್ಥಳಿ ಮ್ಯೂಸಿಯಂ – ಭೀಷ್ಮ ಕೆರೆಯ ಬೋಟಿಂಗ್ – ಹೊಸ ಜಿಲ್ಲಾಧಿಕಾರಗಳ ಕಚೇರಿ- ಬಿಂಕದಕಟ್ಟಿ ಪ್ರಾಣಿ ಸಂಗ್ರಹಾಲಯ ಅಥವಾ ಸಾಲುಮರದ ತಿಮ್ಮಕ್ಕ ಪಾರ್ಕ- ಮರಳಿ ಅದೇ ಮಾರ್ಗವಾಗಿ ಹೊಸ ಬಸ್ ನಿಲ್ದಾಣಕ್ಕೆ ಬಂದು ಸೇರುತ್ತದೆ.
ಈ ಸಂದರ್ಭದಲ್ಲಿ ರಾಜ್ಯ ಖನಿಜ, ಖನಿಜ ಸಂಪತ್ತು ನಿಗಮದ ಅಧ್ಯಕ್ಷರು ಹಾಗೂ ರೋಣ ಶಾಸಕರಾದ ಜಿ.ಎಸ್.ಪಾಟೀಲ, ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್, ಯುವಜನ ಸಬಲೀಕರಣ ಇಲಾಖೆ ಹಾಗೂ ಕ್ರೀಡಾ ಇಲಾಖೆ ಅಧಿಕಾರಿ ಶರಣು ಗೋಗೇರಿ, ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ಕೊಟ್ರೇಶ ವಿಭೂತಿ, ಜಿ.ಪಂ. ಮಾಜಿ ಅಧ್ಯಕ್ಷ ವಾಸಣ್ಣ ಕುರಡಗಿ, ಗಣ್ಯರುಗಳಾದ ಬಿ.ಬಿ.ಅಸೂಟಿ, ಎಸ್.ಎನ್. ಬಳ್ಳಾರಿ, ಪ್ರಭು ಬುರಬುರೆ, ಅಶೋಕ ಮಂದಾಲಿ, ಶಾಲಾ ವಿದ್ಯಾರ್ಥಿಗಳು ಹಾಜರಿದ್ದರು.