ಗದಗ ಭೀಷ್ಮವಿಹಾರ ಧಾಮದಲ್ಲಿ ಮಂಗಳವಾರ ಜಿಲ್ಲಾ ಉಸ್ತುವಾರಿ ಸಚಿವರಾದ ಎಚ್.ಕೆ.ಪಾಟೀಲ ಅವರು ಸ್ಪೀಡ್ ಬೋಟಗೆ ಚಾಲನೆ ನೀಡಿ ಮಾತನಾಡಿದರು.
“ಈಗಾಗಲೇ ಭೀಷ್ಮವಿಹಾರ ಧಾಮದಲ್ಲಿ ಸೌರಶಕ್ತಿ ಚಾಲಿತ ಬೋಟ ಸೇರಿದಂತೆ ವಿವಿಧ ಬೋಟುಗಳು ಪ್ರವಾಸಿಗರನ್ನು ಆಕರ್ಷಿಸುತ್ತಿದೆ” ಎಂದರು.
ಸಚಿವರು ಚಾಲನೆ ನೀಡಿದ ನಂತರ ಸ್ಪೀಡ ಬೋಟ್ ಮೂಲಕ ಭೀಷ್ಮ ಕೆರೆಯ ಪರ್ಯಟನೆ ಮಾಡಿ ಸಂತಸ ವ್ಯಕ್ತಪಡಿಸಿದರು.
ಚಾಲನೆ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಸಿ.ಎನ್.ಶ್ರೀಧರ, ಜಿಲ್ಲಾಪೊಲಿಸ್ ವರಿಷ್ಠಾಧಿಕಾರಿ ಬಿ.ಎಸ್.ನೇಮಗೌಡ, ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಜಿಲ್ಲಾ ಅಧ್ಯಕ್ಷ ಬಿ.ಬಿ.ಅಸೂಟಿ ಉಪಸ್ಥಿತರಿದ್ದರು.
