ಗದಗ | ಪ್ರೊ. ಬಿ. ಕೃಷ್ಣಪ್ಪ ಸಭಾಭವನ ನಿರ್ಮಿಸಲು ಸಚಿವರು ಹೆಚ್. ಕೆ. ಪಾಟೀಲರಿಗೆ ಒತ್ತಾಯ

Date:

Advertisements

“ರಾಜ್ಯದ ಎಲ್ಲಾ ಶೋಷಿತ ಸಮುದಾಯಗಳು ಹಾಗೂ ದಲಿತ ಸಮುದಾಯಗಳ ಹಿತದೃಷ್ಟಿಯಿಂದ ಗದಗದಲ್ಲಿ ಬಹುಜನರ ವಿಮೋಚಕ, ದ.ಸಂ.ಸ. ಸಂಸ್ಥಾಪಕ ಪ್ರೊ. ಬಿ. ಕೃಷ್ಣಪ್ಪ ಸಭಾಭವನ ನಿರ್ಮಿಸಬೇಕು” ಕೆ.ಡಿ.ಎಸ್.ಎಸ್ ಜಿಲ್ಲಾಧ್ಯಕ್ಷ ಬಾಲರಾಜ ಅರಬರ ಒತ್ತಾಯಿಸಿದರು.

ಗದಗ ಪಟ್ಟಣದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ, (ಅಂಬೇಡ್ಕರವಾದ) ಜಿಲ್ಲಾ ಸಮಿತಿಯ ವತಿಯಿಂದ ದ.ಸಂ.ಸ. ಸಂಸ್ಥಾಪಕರು ಪ್ರೊ. ಬಿ. ಕೃಷ್ಣಪ್ಪ ಹೆಸರಿನಲ್ಲಿ ಸಭಾಭವನ ನಿರ್ಮಿಸುವಂತೆ ಸಚಿವರು ಹೆಚ್. ಕೆ. ಪಾಟೀಲರಿಗೆ ಮನವಿ ಸಲ್ಲಿಸಿ ಮಾತಾಡಿದರು.

“ದಲಿತ ದಮನಿತ ಸಮುದಾಯಗಳ ಪಾಲಿಗೆ ಪ್ರೊ. ಬಿ. ಕೃಷ್ಣಪ್ಪನವರು ವಿಮೋಚಕರಾಗಿದ್ದಾರೆ. ತಮ್ಮ ವಿದ್ಯಾರ್ಥಿ ಜೀವನದಲ್ಲಿ ವೈಚಾರಿಕ ಚಿಂತನೆ ಹಾಗೂ ಪ್ರಗತಿಪರ ಹೋರಾಟಗಳಲ್ಲಿ ನಿರತರಾದ ಬಿ. ಕೃಷ್ಣಪ್ಪನವರು ಅವರು ಕೊನೆಗೆ ಆಯ್ಕೆ ಮಾಡಿಕೊಂಡಿದ್ದು, ಡಾ. ಬಾಬಾಸಾಹೇಬ ಅಂಬೇಡ್ಕರವರ ಸಾಮಾಜಿಕ ಕ್ರಾಂತಿಯ ಹಾದಿ” ಎಂದು ತಿಳಿಸಿದರು. 

Advertisements

“ಕೃಷ್ಣಪ್ಪನವರು ಆರಂಭದಲ್ಲಿ ಭದ್ರಾವತಿಯಲ್ಲಿ ದಲಿತ ಸಂಘರ್ಷ ಸಮಿತಿಯನ್ನು 1974 ರಲ್ಲಿ ಸ್ಥಾಪನೆಯನ್ನು ಮಾಡಿದರು. ಮುಂದೆ ದಲಿತ ಸಂಘರ್ಷ ಸಮಿತಿ ಊರು, ಕೇರಿ ಹಟ್ಟಿಗಳಲ್ಲಿ ತೊರೆಯಾಗಿ. ಹೊಳೆಯಾಗಿ, ನದಿಯಾಗಿ ಹರಿದು ನಾಡಿನ ಸಮಸ್ತ ದಲಿತ ಸಮುದಾಯಗಳ ಮನೆ, ಮನಗಳಲ್ಲಿ ಸಮುದ್ರವಾಗಿದ್ದು ಇಂದಿಗೆ ಚರಿತ್ರೆ ಭಾಗವೇ ಆಗಿದೆ” ಎಂದರು.

“ದಲಿತರ ಮೇಲಿನ ಶತಮಾನಗಳ ದಬ್ಬಾಳಿಕೆ ದೌರ್ಜನ್ಯಗಳಿಗೆ ಪ್ರತಿರೋಧದ ಶಕ್ತಿಯಾಗಿ ಜಾತಿವಾದಿಗಳ, ಕೋಮುವಾದಿಗಳ ಎದೆಯಲ್ಲಿ ನಡುಕು ಹುಟ್ಟಿಸಿತು. ಧಮನಿತ ಸಮುದಾಯಗಳಲ್ಲಿ ಹೋರಾಟದ ಕಿಚ್ಚು ಹಚ್ಚಿದ್ದಲ್ಲದೇ ಗಂಡಾಳ್ವಿಕೆಗೆ ಒಳಗಾಗಿ ತೀವ್ರ ಲಿಂಗಭೇದಕ್ಕೆ ಒಳಗಾಗಿರುವ ಮಹಿಳಾ ಸಮುದಾಯವನ್ನು ಸಹ ಚಳುವಳಿ ತನ್ನ ಒಡಲಲ್ಲಿರಿಸಿಕೊಂಡಿತು” ಎಂದು ಹೇಳಿದರು.

ಈ ಸುದ್ದಿ ಓದಿದ್ದೀರಾ? ಹಾವೇರಿ | ವಸತಿ ನಿಲಯದಲ್ಲಿ ಸೌಕರ್ಯಗಳನ್ನು ನೀಡುತ್ತಿಲ್ಲ: ವಿದ್ಯಾರ್ಥಿಗಳು ಆರೋಪ

“ಪ್ರೊ. ಬಿ. ಕೃಷ್ಣಪ್ಪನವರ ನಾಯಕತ್ವದಲ್ಲಿ ದ.ಸಂ.ಸ. ಇಡೀ ರಾಜ್ಯಾದ್ಯಂತ ಕೋಟಿಗಟ್ಟಲೇ ಕಾರ್ಯಕರ್ತರನ್ನು ಒಗ್ಗೂಡಿಸಿಕೊಂಡು ನೊಂದ, ಶೋಷಿತ ಸಮುದಾಯಗಳಿಗೆ ವಿಮೋಚನೆ ನೀಡಿರುತ್ತದೆ. ಅಂತಾಹ ಹೋರಾಟಗಾರರಾದ ಪ್ರೊ. ಬಿ. ಕೃಷ್ಣಪ್ಪನವರು ಕರ್ನಾಟಕ ರಾಜ್ಯ ತುಂಬಾ ದ.ಸಂ.ಸ. ಚಳುವಳಿ ನಡೆಸಿ ತಮ್ಮ ಚಳುವಳಿಯನ್ನು ಗದಗನಲ್ಲಿ ದಿನಾಂಕ: 30-04-1997 ರಂದು ಮಹಾಪರಿನಿಬ್ಬಣ ಹೊಂದಿದ್ದಾರೆ. ಆದ ಕಾರಣ ಮಾನ್ಯರಾದ ತಾವು ಪ್ರೊ. ಬಿ. ಕೃಷ್ಣಪ್ಪನವರು ಸ್ಮರಣಾರ್ಥವಾಗಿ ಗದಗಿನಲ್ಲಿ ಸಭಾಭವನ ನಿರ್ಮಿಸಬೇಕು” ಎಂದು ಒತ್ತಾಯಿಸಿದರು.

ಮನವಿ ಸಂದರ್ಭದಲ್ಲಿ ಡಿ ಎಸ್ ಎಸ್ ಮುಖಂಡರು ಕೆಂಚಪ್ಪ, ನಾಗರಾಜ್ ಗೋಕಾವಿ ಇನ್ನೂ ಅನೇಕರು ಉಪಸ್ಥಿತರಿದ್ದರು.

ಈದಿನ 1
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

ಬೀದರ್‌ | ಬೆಳೆ ಹಾನಿ : ಹೆಕ್ಟೇರ್‌ಗೆ ₹50 ಸಾವಿರ ಪರಿಹಾರಕ್ಕೆ ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಬೆಳೆ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ....

Download Eedina App Android / iOS

X