ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲ್ಲೂಕಿನ ದೊಡ್ಡೂರ ಗ್ರಾಮದಲ್ಲಿ ಗದಗ ಜಿಲ್ಲಾ ಪಂಚಾಯತ ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ನಡೆಸಿದ ಮಿಶ್ರ ತಳಿ ಆಕಳು, ಕರುಗಳ ಪ್ರದರ್ಶನ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ದೊಡ್ಡೂರ ಗ್ರಾಮ ಪಂಚಾಯತಿಯ ಸದಸ್ಯ ಚಂದ್ರಶೇಖರ ಈಳಿಗೇರ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ಹೈನುಗಾರಿಕೆ ಹೆಚ್ಚಾಗುತ್ತಿದೆ. ಹಿಂದೆ ಸಾಕಷ್ಟು ಜನರು ತಮ್ಮ ಮಕ್ಕಳಿಗೆ ಪೌಷ್ಟಿಕವಾಗಿ ಬೆಳೆಯಲು ಹಾಲು, ಬೆಣ್ಣೆ, ತುಪ್ಪ, ಮೊಸರು ಕೊಡುತ್ತಿದ್ದರು. ಇಂದು ಹೈನುಗಾರಿಕೆ ಹಾಲು ಕುಡಿಸಲು ಆಕಳುಗಳನ್ನು ಹೆಚ್ಚು ಸಾಕುತ್ತಿದ್ದರು. ಆದರೆ ಇಂದು ಉದ್ಯಮವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಸಂದರ್ಭದಲ್ಲಿ ಮುಖ್ಯ ಅತಿಥಿಗಳು ಪಶು ವೈದ್ಯಾಧಿಕಾರಿ ಡಾ. ಏಕನಾಥ ಮುದೊಳ್ಕರ, ದರ್ಶನ ಟಿ,ರಾಠೋಡ ಹಾಗೂ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಇಂದ್ರವ್ವ ಲಮಾಣಿ ವಹಿಸಿದ್ದರು.
ಗ್ರಾ. ಪ ಸದಸ್ಯ ನಿಂಗಪ್ಪ ಬಂಕಾಪೂರ, ಯುವ ಮುಖಂಡ ಕೃಷ್ಣಣ್ಣ ಲಮಾಣಿ, ರವಿ ಭಜಕನ್ನವರ, ಲಕ್ಷ್ಮಣ ಲಮಾಣಿ ಹಾಗೂ ಪಂಚಾಯತಿ ಸಿಬ್ಬಂದಿಗಳು ಊರಿನ ಹಿರಿಯರು ಅನೇಕರು ಉಪಸ್ಥಿತರಿದ್ದರು.
ವರದಿ : ಮಲ್ಲೇಶ ಮಣ್ಣಮ್ಮನವರ ಸಿಟಿಜನ್ ಜರ್ನಲಿಸ್ಟ್ ಲಕ್ಷ್ಮೇಶ್ವರ