ರಸ್ತೆಯುದ್ಧಕ್ಕೂ ತಗ್ಗು ಗುಂಡಿಗಳಿಂದ ಕೂಡಿದ್ದು, ಮಳೆಯಾದರೆ ರಸ್ತೆಗಳು ಕಸರುಗದ್ದೆಯಂತಾಗಿ ಮಾರ್ಪಟ್ಟು, ರೈತರು ತಮ್ಮ ಜಮೀನುಗುಗಳಿಗೆ ಹೋಗಲು ಸಾಕಷ್ಟು ತೊಂದರೆಯಾಗುತ್ತಿದೆ ಎಂದು ಸ್ಥಳೀಯರು ಗ್ರಮ ಪಂಚಾಯಿತಿ ಹಾಗೂ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ದೊಡ್ಡೂರ ಗ್ರಾಮದಿಂದ ಹೆಸರೂರಿಗೆ ಸಂಪರ್ಕ ಕಲ್ಪಿಸುವ ರಸ್ತೆಯು ಸಂಪೂರ್ಣ ಹಾಳಾಗಿದ್ದು, ರಸ್ತೆಯುದ್ಧಕ್ಕೂ ತಗ್ಗು ಗುಂಡಿಗಳೇ ತುಂಬಿವೆ.
ಸ್ಥಳೀಯ ರೈತರು ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “ದೊಡ್ಡೂರ ಗ್ರಾಮದ ರೈತರ ನೂರಾರು ಎಕರೆ ಜಮೀನುಗಳಿಗೆ ಹೋಗಲು ಇದೇ ರಸ್ತೆಯನ್ನು ಬಳಕೆ ಮಾಡುತ್ತಾರೆ. ಮಳೆಯಿಂದ ಇಡೀ ರಸ್ತೆ ಕೆಸರು ಗದ್ದೆಯಂತಾಗಿದೆ. ನೀರು ತುಂಬಿದೆ. ಎತ್ತು, ಚಕ್ಕಡಿಗಳು ಕೆಸರಿನಲ್ಲಿ ಸಿಕ್ಕಿಕೊಂಡು ರೈತರು ಜಮೀನಿನ ಬಳಿ ಹೋಗಲು ಆಗುತ್ತಿಲ್ಲ. ಇದರಿಂದ ರೈತರು ತಮ್ಮ ಹೊಲಗಳಿಗೆ ಹೋಗಿ ಕೆಲಸ ಮಾಡದಂತಾಗಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ಉಳ್ಳಟ್ಟಿ, ದೊಡ್ಡೂರ ಹಾಗೂ ಯಲ್ಲಾಪೂರ ಗ್ರಾಮಗಳಲ್ಲಿ ನಡೆದ ʼಜಿಲ್ಲಾಧಿಕಾರಿಗಳ ನಡೆ, ಹಳ್ಳಿ ಕಡೆʼ ಕಾರ್ಯಕ್ರಮದಲ್ಲಿ ನಾವು ಮನವಿ ಮಾಡಿದ್ದರೂ, ಸಮಸ್ಯೆ ಬಗೆಹರಿಸಿಲ್ಲ” ಎಂದು ರೈತರು ಅಸಮಾಧಾನ ವ್ಯಕ್ತಪಡಿದರು.
ದೊಡ್ಡೂರ ಗ್ರಾಮದ ರೈತ ಅಮರಪ್ಪ ಗುಡಗುಂಟಿ ಮಾತನಾಡಿ, “ಈ ದುಸ್ಥಿತಿ ಸರಿ ಸುಮಾರು ಎರಡು-ಎರಡುವರೆ ವರ್ಷಗಳಿಂದ ಹೀಗೆಯೇ ಇದೆ. ಈ ಕಷ್ಟ ಎಂದು ಮುಗಿಯುವುದೋ ತಿಳಿಯದಾಗಿದೆ. ಈವರೆಗೂ ಈ ಸಮಸ್ಯೆ ಸಮಸ್ಯೆಯಾಗಿಯೇ ಉಳಿದಿದೆ. ಗ್ರಾಮ ಪಂಚಾಯಿತಿ ಅಧಿಕಾರಿಗಳಾಗಲಿ, ಅಧ್ಯಕ್ಷರಾಗಲಿ, ಸದಸ್ಯರುಗಳಾಗಲಿ ಇತ್ತ ತಲೆ ಹಾಕಿಯೂ ಮಲಗಿಲ್ಲಾ ಅನ್ನೋದು ವೈಯಕ್ತಿಕವಾಗಿ ಬೇಸರ ಉಂಟಾಗಿದೆ” ಎಂದು ನೋವು ತೋಡಿಕೊಂಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ಧಾರವಾಡ | ಸ್ಮಾರ್ಟ್ ಸಿಟಿ ಅನುದಾನವಿದ್ದರೂ ಅವಳಿ ನಗರಕ್ಕಿಲ್ಲ ಸ್ಮಾರ್ಟ್ ಭಾಗ್ಯ: ರಾಜು ನಾಯಕವಾಡಿ ಆಕ್ರೋಶ
“ರಸ್ತೆ ಸಮಸ್ಯೆ ಬಗೆಹರಿಸದೆ ಹೋದಲ್ಲಿ ಸೆಪ್ಟೆಂಬರ್ 4ರಂದು ಕಾನೂನು ರೀತಿಯ ಹೋರಾಟ ಆರಂಭಿಸಿ, ಪಂಚಾಯಿತಿಗೆ ಭೀಗ ಜಡಿದು ಪ್ರತಿಭಟನೆ ಮಾಡುತ್ತೇವೆ” ಎಂದು ಎಚ್ಚರಿಕೆ ನೀಡಿದರು. ಈ ಸಂದರ್ಭದಲ್ಲಿ ಗ್ರಾಮದ ರೈತರು ಇದ್ದರು.