ಕುರಿಗಳಲ್ಲಿ ವಿಚಿತ್ರವಾದ ಸೋಂಕು ಕಾಣಿಸಿಕೊಂಡಿದ್ದು, ಕೇವಲ ಅರ್ಧ ಗಂಟೆಯಲ್ಲಿಯೇ 20ಕ್ಕೂ ಹೆಚ್ಚು ಕುರಿಗಳು ಸಾವನ್ನಪ್ಪಿರುವ ಘಟನೆ ಗದಗ ಜಿಲ್ಲೆಯ ಮುಂಡರಗಿ ತಾಲೂಕಿನಲ್ಲಿ ನಡೆದಿದೆ. ಕುರಿಗಳು ಅಂಥ್ರಾಕ್ಸ್ ಸೋಂಕಿಗೆ ತುತ್ತಾಗಿ ಸಾಯುತ್ತಿರಬಹುದು ಎಂದು ಶಂಕಿಸಲಾಗಿದೆ.
ಮುಂಡರಗಿ ತಾಲೂಕಿನ ಕೆರಳ್ಳಿ ತಾಂಡಾದಲ್ಲಿ ಕುರುಗಳು ಸಾವನ್ನಪ್ಪಿವೆ. ಕುರುಗಳು ನಿಂತಲೇ ಕುಸಿದು ಬೀಳುತ್ತಿದ್ದು, ಒದ್ದಾಡಿ ಸಾಯುತ್ತಿವೆ ಎಂದು ಹೇಳಲಾಗಿದೆ. ಕೆರಳ್ಳಿ ತಾಂಡಾದ ಪೋಮಪ್ಪ ಲಮಾಣಿ ಎಂಬುವವರು ಸಾಕಿದ್ದ ಕುರಿಗಳು ಸರಣಿಯಾಗಿ ಸಾವನ್ನಪ್ಪುತ್ತಿವೆ.
ಪೋಮಪ್ಪ ಅವರು 60 ಕುರಿಗಳನ್ನು ಸಾಕಿದ್ದರು. ಅವುಗಳಲ್ಲಿ 20 ಕುರಿತುಗಳು ಮೃತಪಟ್ಟಿವೆ. ವಿಷಯ ತಿಳಿದು ಸ್ಥಳಕ್ಕೆ ಪಶು ಸಂಗೋಪನೆ ಇಲಾಖೆಯ ಅಧಿಕಾರಿಗಳು ದೌಡಾಯಿಸಿದ್ದಾರೆ. ಮೃತ ಕುರಿಗಳನ್ನು ಮರಣೋತ್ತರ ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ಕಳಿಸಿದ್ದಾರೆ. ಕುರಿಗಳಿಗೆ ಅಂಥ್ರಾಕ್ಸ್ ಸೋಂಕು ತಗುಲಿರಬಹುದು ಎಂದು ಶಂಕಿಸಿದ್ದಾರೆ.
ಅಂಥ್ರಾಕ್ಸ್ ಸೋಂಕು – ಬ್ಯಾಸಿಲಸ್ ಅಂಥಾಸಿಸ್ ಎಂಬ ಬ್ಯಾಕ್ಟಿರಿಯಾದಿಂದ ಹರಡುತ್ತದೆ. ಗಾಳಿ ಮೂಲಕ ಈ ಸೋಂಕು ಪರಸರಿಸುತ್ತದೆ. ಕುರಿಗಳು, ಹಸುಗಳು ಹಾಗೂ ಕುದುರೆಗಳಲ್ಲಿ ಈ ಸೋಂಕು ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ ಎಂಧು ವೈದ್ಯರು ತಿಳಿಸಿದ್ದಾರೆ.