ಗದಗ ಜಿಲ್ಲೆಯ ರೋಣ ಪುರಸಭೆಯ ಉಪಾಧ್ಯಕ್ಷ ಮಿಥುನ್.ಜಿ. ಪಾಟೀಲ್ ಅವರ 46ನೇ ಜನ್ಮದಿನದ ಪ್ರಯುಕ್ತ ರಾಜ್ಯಮಟ್ಟದ ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿಯನ್ನು ಬಿ.ಸಿ.ರಮೇಶ್ ಕಬಡ್ಡಿ ಅಕಾಡೆಮಿ ಸಹಯೋಗದಲ್ಲಿ ಆಯೋಜಿಸಲಾಗಿತ್ತು.
ಪಂದ್ಯಾವಳಿಗಳನ್ನು ಜ್ಯೋತಿ ಬೆಳಗಿಸುವುದರೊಂದಿಗೆ ಉದ್ಘಾಟಿಸಿ ಮಾತನಾಡಿದ ಕೆಪಿಸಿಸಿ ಸದಸ್ಯರಾದ ಸಂಜಯ್ ದೊಡ್ಡಮನಿ, “ಕ್ರೀಡಾಪಟುಗಳಿಗೆ ಶಿಕ್ಷಣ ಮತ್ತು ಕ್ರೀಡೆ ಒಂದೇ ನಾಣ್ಯದ ಎರಡು ಮುಖಗಳು. ಯುವಕರು ಇಂತಹ ಕ್ರೀಡೆಗಳಲ್ಲಿ ಭಾಗವಹಿಸಿ ತಮ್ಮ ಪ್ರತಿಭೆಯನ್ನು ಬೆಳೆಸಿಕೊಂಡು ತಾಲೂಕಿನ, ಜಿಲ್ಲೆಯ ಹಾಗೂ ರಾಜ್ಯದ ಹೆಸರನ್ನು ಬೆಳೆಸುವಂತಹ ಕ್ರೀಡಾಪಟುಗಳಾಗಬೇಕು” ಎಂದು ಸಲಹೆ ನೀಡಿದರು.
“ಯುವಕರು ಯಾವುದೇ ದುಶ್ಚಟಗಳಿಗೆ ಬಲಿಯಾಗದೆ, ಕ್ರೀಡೆಯಲ್ಲಿ ಸಕ್ರಿಯವಾಗಿ ತಮ್ಮನ್ನು ತೊಡಗಿಸಿಕೊಂಡು ಸಮಾಜದಲ್ಲಿ ಉತ್ತಮ ಪ್ರಜೆಗಳಾಗಿ ಉತ್ತಮ ಕ್ರೀಡಾಪಟುಗಳಾಗಿ ಹೊರಹೊಮ್ಮಬೇಕು” ಎಂದು ಹೇಳಿದರು.
ಈ ಸಂದರ್ಭದಲ್ಲಿ ಕುಮಾರ ಗಡಗಿ, ಬಸು ಹೊಸಳ್ಳಿ, ಸುರೇಶ ಹಲಗಿ, ಮುತ್ತಣ್ಣ ಪ್ರಧಾನಿ, ಕುಮಾರ ಗೌಡನ್ನವರ, ಬಸು ದೇಶನ್ನವರ, ಅವಿನಾಷ ಸಾಲಿಮನಿ, ವಿರುಪಾಕ್ಷ ಮಾಳಗೌಡ್ರ, ರವಿ ಹಲಗಿ, ಅಕಾಡೆಮಿಯ ಸದಸ್ಯರು ಹಾಗೂ ಊರಿನ ಹಿರಿಯರು ಯುವಕರು ಸೇರಿದಂತೆ ಅಪಾರ ಕ್ರೀಡಾಪಟುಗಳು ಉಪಸ್ಥಿತರಿದ್ದರು.