ಮಳೆಯಲ್ಲಿ ಸೋರುತ್ತಿರೋ ಸರ್ಕಾರಿ ಬಸ್ ನಲ್ಲಿ ಪ್ರಯಾಣ ಮಾಡುತ್ತಿರುವ ಜನರ ಪರದಾಟ ಹೇಳತ್ತೀರದ್ದಾಗಿದೆ. ಗದಗ-ಮುಂಡರಗಿ ಸರ್ಕಾರಿ ಬಸ್ ಸಂಪೂರ್ಣ ಮೇಲ್ಬಾವಣಿ ಸೋರಿಕೆ ಆಗುತ್ತಿದ್ದು ಪ್ರಯಾಣಿಕರು ಬಸ್ ನಲ್ಲಿ ಕೊಡೆ ಹಿಡಿದು ಪ್ರಯಾಣ ಮಾಡುವ ಸ್ಥಿತಿ ಬಂದಿದೆ.
ಕೊಡೆ ಇಲ್ಲದ ಬಹುತೇಕ ಪ್ರಯಾಣಿಕರ ಮೈಎಲ್ಲಾ ಒದ್ದೆ ಆಗಿದೆ. ಇನ್ನು ಗುರುವಾರ ಸಂಜೆ ಸುರಿದ ಭಾರಿ ಮಳೆಗೆ ಬಸ್ ಮೇಲ್ಬಾವಣಿ ಸೋರಿಕೆಯಿಂದ ಪ್ರಯಾಣಿಕರು ಪರದಾಡಿದ್ದಾರೆ. ಈ ಮೂಲಕ ಗದಗ ಜಿಲ್ಲೆಯಲ್ಲಿ ಮತ್ತೆ ಡಕೋಟಾ ಬಸ್ ಮುಖವಾಡ ಬಯಲಾಗಿದ್ದು, ಸಾರಿಗೆ ಇಲಾಖೆ ವಿರುದ್ಧ ಪ್ರಯಾಣಿಕರು ಆಕ್ರೋಶ ಹೊರ ಹಾಕಿದ್ದಾರೆ.
ಇಸನ್ನು ಓದಿದ್ದೀರಾ? ಹಾವೇರಿ | ನಕಲಿ ಕಾರ್ಮಿಕ ಕಾರ್ಡ್ ವಿತರಣೆ: ಡಾಟಾ ಅಪರೇಟರ್ ಸಿಬ್ಬಂದಿ ವಜಾಗೊಳಿಸಲು ಆಗ್ರಹ
ನಮ್ಮ ಸರ್ಕಾರದ ವ್ಯವಸ್ಥೆ ಇಂಥ ಕೆಟ್ಟ ವ್ಯವಸ್ಥೆ ಇದೆ ಅಂತ ಪ್ರಯಾಣಿಕರು ಕಿಡಿಕಾರಿದ್ದಾರೆ.