ಗದಗ | ಮಾಲಿನ್ಯಯುತ ಮನಸ್ಸೇ ಮಸಣ: ಪ್ರಜ್ಞಾ ಮತ್ತೀಹಳ್ಳಿ

Date:

Advertisements

ಪ್ರಸ್ತುತದ ಯುವಜನರು ತಂತ್ರಜ್ಞಾನದ ಗೀಳಿಗೆ ಬಲಿಯಾಗಿ ಮನಸ್ಸನ್ನು ಕಲುಷಿತಗೊಳಿಸಿಕೊಳ್ಳಲಾಗುತ್ತಿದ್ದು, ಮಾಲಿನ್ಯಯುತ ಮನಸ್ಸೇ ಮಸಣವಾಗುತ್ತಿದೆ. ಬದಲಾಗಿ ಉತ್ತಮ ಭವಿಷ್ಯದ ನಿರ್ಮಾಣಕ್ಕಾಗಿ ತಂತ್ರಜ್ಞಾನ ಬಳಸಿಕೊಳ್ಳಬೇಕು ಎಂದು ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯ ಕಿತ್ತೂರಿನ ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ. ಪ್ರಜ್ಞಾ ಮತ್ತೀಹಳ್ಳಿ ಕರೆ ನೀಡಿದರು.

ಗದಗ ನಗರದ ಕೆಎಲ್‌ಇ ಸಂಸ್ಥೆಯ ಕಲಾ‌ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಕ್ರೀಡಾ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಸಮಾರೋಪ ಕಾರ್ಯಕ್ರಮದಲ್ಲಿ ಮಾತನಾಡಿದರು.

“ಕುಮಾರವ್ಯಾಸನ ನಾಡಿನಲ್ಲಿ ನಿಂತು ಮಾತನಾಡುವುದೆಂದರೆ ತಾನಾಗಿಯೇ ಉತ್ಸಾಹ ಆವರಿಸಿಕೊಳ್ಳುತ್ತದೆ. ತಾರುಣ್ಯದ ಭರಾಟೆಯ ನಂತರ ಬದುಕಿನಲ್ಲಿ ನಮ್ಮ ಸಾಮರ್ಥ್ಯ ಅರಿವಾಗುವುದು. ನಿಮ್ಮ ಮುಂದಿನ ಬದುಕಿನ ಅನೇಕ ಸಂದರ್ಭಗಳಲ್ಲಿ ಕೀಳರಿಮೆ, ಸಂಕೋಚ, ಭಯ, ಆರ್ಥಿಕ ಕೊರತೆ ಹೀಗೆ ಹಲವು ರೀತಿಯ ತೊಂದರೆಗಳು ಎದುರಾಗಬಹುದು. ಅವುಗಳನ್ನು ಮೀರಿ ನಿಲ್ಲುವ ಶಕ್ತಿ ನಮ್ಮದಾಗಿಸಿಕೊಳ್ಳೋಣ” ಎಂದು ಹೇಳಿದರು.

Advertisements

“ಬದುಕಿನ ಸವಾಲುಗಳನ್ನು ದೈರ್ಯದಿಂದ ಎದುರಿಸಿ, ಅವುಗಳನ್ನೂ ಮನರಂಜನೆ ಎಂದು ಭಾವಿಸೋಣ. ಸುಖ ಬಂದಾಗ ಸೋಮಾರಿಗಳಾಗಿ, ಕಷ್ಟ ಬಂದಾಗ ಎಚ್ಚರವಾಗಿರುವ ಮನೋವೃತ್ತಿ ತೊರೆದು ಸದಾ ಸನ್ನದ್ಧರಾಗಿರುವ ಅಗತ್ಯವಿದೆ. ನಮ್ಮ ಸಮಸ್ಯೆಗಳನ್ನು ನಾವೇ ಬಗೆಹರಿಸಿಕೊಳ್ಳುವ ಶಕ್ತಿ ಸಂಪಾದಿಸಿಕೊಳ್ಳುವುದು ಪ್ರಸ್ತುತದಲ್ಲಿ ಅಗತ್ಯವಾಗಿದೆ.‌ ಬದುಕಿನ ಬಹುದೊಡ್ಡ ತೊಂದರೆಗಳ ನಡುವೆ ಮತ್ತೊಂದು ಅವಕಾಶ ಸೃಷ್ಟಿಸುವ ಸಾಧ್ಯತೆಯೂ ಇದೆ. ನಮ್ಮೆದುರಿನ ದುರಂತಗಳಲ್ಲಿಯೂ ಒಳಿತನ್ನು ಮಾತ್ರ ಆಯ್ದುಕೊಳ್ಳೋಣ. ಇವತ್ತಿನ ಶಿಕ್ಷಣ ಪದ್ದತಿ ಸೃಜನಶೀಲತೆಯನ್ನು ಕೊಲ್ಲುತ್ತಿದೆ. ಹಾಗಾಗಿ ಸೃಜನಶೀಲತೆ ಬೆಳಸಿಕೊಳ್ಳುವ ಅಗತ್ಯತೆ ತುಂಬಾ ಅಗತ್ಯವಿದೆ. ಸೃಜನಶೀಲತೆ ನಮ್ಮ ಅನೇಕ ಸಮಸ್ಯೆಗಳಿಗೆ ಪರಿಹಾರವೂ ಆಗಬಹುದು” ಎಂದು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಎಲ್‌ಜಿಬಿ ಅಧ್ಯಕ್ಷೆ ರಜನಿ ಪಾಟೀಲರವರು ಮಾತನಾಡಿ, “ವಿದ್ಯಾರ್ಥಿ ಜೀವನದಲ್ಲಿ ವಿದ್ಯಾರ್ಥಿಗಳ ಪರಿಶ್ರಮವೇ ಅವರ ಮುಂದಿನ ಗುರಿಗೆ ಉತ್ತಮ ಮಾರ್ಗ ಕಲ್ಪಿಸುತ್ತದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಯಶಸ್ಸು ಪಡೆಯಲು ಮುನ್ನಡೆಯಬೇಕಿದೆ. ಸಾಧನೆಯ ಯಶಸ್ಸು ಪಡೆಯಲು ಮಾರ್ಗ ಸರಳವಾಗಿಲ್ಲ. ಆದರೆ ಸತತ ಪರಿಶ್ರಮದಿಂದ ಯಶಸ್ಸಿನ ಹಾದಿಯತ್ತ ಸಾಗಲು ಸಾಧ್ಯ. ಯಶಸ್ಸಿನಲ್ಲಿ ಜ್ಞಾನ ಶಕ್ತಿ, ಇಚ್ಛಾಶಕ್ತಿ, ಕ್ರಿಯಾ ಶಕ್ತಿಯೆಂಬ ಅಂಶ ಆಳವಾಗಿ ಬೇರೂರುವ ಅಗತ್ಯವಿದೆ” ಎಂದರು.

ಈ ಸುದ್ದಿ ಓದಿದ್ದೀರಾ? ಹಾವೇರಿ | ನಿವೇಶನ ಹಂಚಿಕೆಗೆ ಗ್ರಾಮಸ್ಥರ ಒತ್ತಾಯ

ಕಾರ್ಯಕ್ರಮದಲ್ಲಿ ಯುಜಿಸಿ ನೆಟ್ ಪರೀಕ್ಷೆ ಉತ್ತೀರ್ಣಗೊಂಡ ಮಹಾವಿದ್ಯಾಲಯದ ಉಪನ್ಯಾಸಕ ಪ್ರೊ. ತೇಜಸ್ವಿನಿ ಪರ್ವತೀಕರ ಹಾಗೂ ಸಿ ಎ ಪೌಂಡೇಶನ್ ಪರೀಕ್ಷೆ ಉತ್ತೀರ್ಣಗೊಂಡ ವಿದ್ಯಾರ್ಥಿಗಳಾದ ಗಾಯತ್ರಿ ಮಾದಗುಂಡಿ, ಸಹನಾ ಹುಣಸಿಮರದ ಅವರನ್ನು ಸನ್ಮಾನಿಸಲಾಯಿತು.

ಎಲ್‌ಜಿಬಿ ಸದಸ್ಯ ಮೃತ್ಯುಂಜಯ ಸಂಕೇಶ್ವರ, ಎಲ್ಲ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಇದ್ದರು.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉಡುಪಿ | ಮಹೇಶ್‌ ಶೆಟ್ಟಿ ತಿಮರೋಡಿ ಬೆಂಬಲಿಗರ ಕಾರು ಪೊಲೀಸ್‌ ಅಧೀಕ್ಷರಕ ಕಾರಿಗೆ ಡಿಕ್ಕಿ !

ಬೆಳ್ತಂಗಡಿಯ ಸೌಜನ್ಯ ಪರ ಹೋರಾಟಗಾರ ಮಹೇಶ್‌ ಶೆಟ್ಟಿ ತಿಮರೋಡಿಯವರನ್ನು ಬ್ರಹ್ಮಾವರ ಪೊಲೀಸ್...

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

Download Eedina App Android / iOS

X