ಗದಗ ಜಿಲ್ಲೆಯ ಮುಂಡರಗಿ ತಾಲೂಕಿನಲ್ಲಿರುವ ನ್ಯಾಯಬೆಲೆ ಅಂಗಡಿಗಳಲ್ಲಿ ಕಳಪೆ ಗುಣಮಟ್ಟದ ಜೋಳಗಳನ್ನು ವಿತರಣೆ ಮಾಡುತ್ತಿರುವ ಆರೋಪ ಕೇಳಿ ಬಂದಿದೆ.
ಈ ಹಿನ್ನೆಲೆಯಲ್ಲಿ ಕೆಲವು ಗ್ರಾಹಕರು ಕರ್ನಾಟಕ ರಕ್ಷಣಾ ವೇದಿಕೆಯ ಮುಖಂಡರಿಗೆ ಮಾಹಿತಿ ನೀಡಿದ್ದರು. ಪರಿಶೀಲನೆ ನಡೆಸಿದ ಬಳಿಕ ಕರವೇ ಮುಖಂಡರು ಸಂಬಂಧಪಟ್ಟ ಮೇಲಾಧಿಕಾರಿಗಳಿಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ತಾಲೂಕು ಆಹಾರ ನಿರೀಕ್ಷಕ ಅಧಿಕಾರಿ ಜಗದೀಶ್ ಅಮಾತಿ ಅವರು ನ್ಯಾಯಬೆಲೆ ಅಂಗಡಿಗಳಿಗೆ ದಾಳಿ ಮಾಡಿದ್ದಲ್ಲದೇ, ಕಳಪೆ ಜೋಳವನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಉತ್ತಮ ಗುಣಮಟ್ಟದ ಜೋಳವನ್ನು ವಿತರಿಸಲು ಕ್ರಮ ಕೈಗೊಂಡಿದ್ದಾರೆ.
ಇದನ್ನು ಓದಿದ್ದೀರಾ? ಕರ್ನಾಟಕದ ಲಾರಿ ಚಾಲಕನಿಗೆ ಅಮಾನುಷ ಹಲ್ಲೆಗೈದ ತಮಿಳುನಾಡು ಟ್ರಾಫಿಕ್ ಪೊಲೀಸ್: ವಿಡಿಯೋ ವೈರಲ್
ಇಲ್ಲಿವರೆಗೂ ಕಳಪೆ ಜೋಳವನ್ನು ಯಾರು ತೆಗೆದುಕೊಂಡು ಹೋಗಿದ್ದರೋ ಅವರು ತಿರುಗಿ ನ್ಯಾಯ ಬೆಲೆ ಅಂಗಡಿಗಳಿಗೆ ಹಿಂತಿರುಗಿಸಿದರೆ ಹೊಸ ಗುಣಮಟ್ಟದ ಜೋಳಗಳನ್ನು ವಿತರಿಸಲಿದ್ದಾರೆ. ಒಂದು ವಿತರಣೆ ಮಾಡದಿದ್ದರೆ ಕರವೇ ಸಂಘಟನೆ ಹೋರಾಟ ಮಾಡುವುದಾಗಿ ಕರವೇ ಜಿಲ್ಲಾಧ್ಯಕ್ಷ ಚಂದ್ರು ಪೂಜಾರ್ ಎಚ್ಚರಿಕೆ ನೀಡಿದರು.
