ಕಳಪೆ ಬೀಜ ವಿತರಣೆ ಮಾಡಿ ರೈತರಿಗೆ ಮೋಸ ಮಾಡುತ್ತಿದ್ದಾರೆ. ಇದರಿಂದ ರೈತರ ಶ್ರಮವೆಲ್ಲಾ ವ್ಯರ್ಥವಾಗುತ್ತಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ಜಿಲ್ಲಾ ಅಧ್ಯಕ್ಷ ಶರಣು ಗೋಡಿ ಆಕ್ರೋಶ ವ್ಯಕ್ತಪಡಿಸಿದರು.
ಗದಗ ಜಿಲ್ಲೆಯ ಮುಂಡರಗಿ ಪಟ್ಟಣದಲ್ಲಿ ಕರವೇ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. ರೈತರಿಗೆ ಕಳಪೆ ಸೂರ್ಯಕಾಂತಿ ಬೀಜ ವಿತರಿಸಿದ ಸಿಜೇಟಾ ಕಂಪೆನಿಯ ವಿರುದ್ಧ ಮುಂಡರಗಿ ಬಂದ್‌ಗೆ ಕರೆ ನೀಡಿದ್ದಾರೆ.
“ತಾಲೂಕಿನ ರೈತರಿಗೆ ಸಿಜೇಟಾ ಕಂಪನಿಯು ಸಾಕಷ್ಟು ಸೂರ್ಯಕಾಂತಿ ಬೀಜ ಪೂರೈಸಿದೆ. ಆದರೆ ಪೂರೈಸಿದ ಸೂರ್ಯಕಾಂತಿ ಬೀಜ ಕಳಪೆ ಮಟ್ಟದ್ದಾಗಿದೆ. ಆ ಬೀಜಗಳನ್ನು ಕೆಲವು ರೈತರು ಹೊಲದಲ್ಲಿ ಬಿತ್ತಿದ್ದಾರೆ. ಕಳಪೆ ಬೀಜ ಆಗಿದ್ದರಿಂದ ಹೊಲದಲ್ಲಿ ಬೆಳೆದಿರುವುದಿಲ್ಲ. ಇಂತಹ ಕಳಪೆ ಬೀಜ ವಿತರಿಸಿ ರೈತರಿಗೆ ಮೋಸ ಮಾಡಿರುವ ಸಿಜೇಟಾ ಕಂಎನಿ ವಿರುದ್ದ ಕ್ರಮ ಕೈಗೊಳ್ಳಬೇಕು” ಎಂದು ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ? ಬೆಳಗಾವಿ | ಬರಪೀಡಿತ ಪ್ರದೇಶ ಘೋಷಣೆಗೆ ರೈತ ಸಂಘ ಆಗ್ರಹ
ಕರವೇ ಅಧ್ಯಕ್ಷ ರಾಮನಗೌಡ ಹಳೇಮನಿ, ಯುವ ಘಟಕದ ಜಿಲ್ಲಾ ಉಪಾಧ್ಯಕ್ಷ ಮಾರುತಿ ಇಳಿಗೇರ, ಕುಮಾರ ರಾವಣ್ಣವರ, ಜಿಲ್ಲಾ ಉಪಾಧ್ಯಕ್ಷ ಭರಮಣ್ಣ ಕಿಲಾರಿ, ಬೆಟಗೇರಿ ನಗರ ಅಧ್ಯಕ್ಷ ದಾವಲ್ ಸಾಬ್ ತಹಶೀಲ್ದಾರ್, ಜಿಲ್ಲಾ ಕಾರ್ಯದರ್ಶಿ ಮುತ್ತಣ್ಣ ಮುಂಡವಾಡ, ಗದಗ ತಾಲೂಕ ಸಂಚಾಲಕ ಸಲೀಂ ಬೋಧಲ್ಲೆಖಾನ, ಗದಗ ಜಿಲ್ಲಾ ಮಹಿಳಾ ಘಟಕದ ಉಪಾಧ್ಯಕ್ಷೆ ಶೋಭಾ ಕಲಾಲ, ಸಲೀಂ ಶಿರವಾರ ಹಾಗೂ ಕಾರ್ಯಕರ್ತರು, ರೈತರು ಇದ್ದರು.