ಗದಗ ಜಿಲ್ಲೆಯ ಗಜೇಂದ್ರಗಡ ತಾಲ್ಲೂಕಿನ ಗೊಗೇರಿ ಗ್ರಾಮದಲ್ಲಿ ಪವಿತ್ರ ರಂಜಾನ್ ಉಪವಾಸ ವೃತಗಳನ್ನು ಅನುಷ್ಠಾನಗೊಳಿಸಿ ಸಂಭ್ರಮದಿಂದ ‘ಈದುಲ್ ಫಿತ್ರ್’ ಆಚರಿಸಿದರು.
“ಈದ್ ಅಲ್-ಫಿತರ್ನ ಒಂದು ಮಹತ್ವದ ಅಂಶವೆಂದರೆ ಜಕಾತ್-ಉಲ್-ಫಿತರ್ ಎಂದು ಕರೆಯಲ್ಪಡುವ ಕಡ್ಡಾಯ ದಾನ ಕಾರ್ಯ. ಇದರಲ್ಲಿ ‘ಈದ್ ಪ್ರಾರ್ಥನೆಗೆ ಮೊದಲು ಬಡವರಿಗೆ ಮತ್ತು ನಿರ್ಗತಿಕರಿಗೆ ಹಣವನ್ನು ದಾನ ಮಾಡಲಾಗುತ್ತದೆ. ಈ ಆಚರಣೆಯಲ್ಲಿ ಬೇರೂರಿರುವ ಉದಾರತೆ ಮತ್ತು ಕರುಣೆಯ ಮನೋಭಾವವನ್ನು ತೋರಿಸುತ್ತದೆ ಎಂದು ಮುಫ್ತೀ ಅಶ್ಫಕ್ ಮದನಿ ಹೇಳಿದರು.
ಈದ್ ಹಬ್ಬದ ಸಮಯದಲ್ಲಿ, ಮುಸ್ಲಿಮರು ‘ಈದ್ ಮುಬಾರಕ್’ ಎಂದು ಹೇಳುವ ಮೂಲಕ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು. ಹಾಫಿಜ್ ಸಿಮಾಖ ಗದಗ ಇವರು ಈದ ನಮಾಜ ನಿರ್ವಹಿಸಿ ಪ್ರಾರ್ಥಿಸಿದರು.
ಈ ಸುದ್ದಿ ಓದಿದ್ದೀರಾ? ಕೊಪ್ಪಳ | ಹಳೆಯದರೊಂದಿಗೆ ಹೊಸ ಸಾಹಿತ್ಯ ಪ್ರಕಾರ ಅಳವಡಿಸಿಕೊಳ್ಳುವುದು ಸೂಕ್ತ: ವಿಜಯ ಅಮೃತ್ ರಾಜ್
ಈ ಸಂದರ್ಭದಲ್ಲಿ ಜನಾಬ್ ರಾಜೇಸಾಬ ಬಾಗವಾನ, ದಸ್ತಗೀರ ವಾಲೀಕಾರ, ಹುಸೇನಸಾಬ ಬಡಿಗೇರ, ಮಾಬುಸಾಬ ನಧಾಪ್, ಇಮಾಮಸಾಬ ಬಾಗವಾನ, ಕಾಶೀಮಸಾಬ ನಧಾಪ್, ಕೆ ಕೆ ಬಾಗವಾನ,ವಜೀರ ನಧಾಪ್, ಹುಸೇನ ಬಾಗವಾನ, ದಸ್ತಗೀರ ನಧಾಪ್, ಎಂ ಡಿ ಬಾಗವಾನ, ಶಿಕ್ಷಕರಾದ ಬಡೇಸಾಬ ಬಾಗವಾನ, ಆರ್ ಕೆ ಬಾಗವಾನ, ಎಚ್ ಡಿ ಬಾಗವಾನ ಇದ್ದರು.