ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಮಂಡಳಿಯಿಂದ ಕಾರ್ಮಿಕರ ಮಕ್ಕಳಿಗೆ ಶೈಕ್ಷಣಿಕ ಹಣ ಬಿಡುಗಡೆ ಮಾಡುವಂತೆ ಒತ್ತಾಯಿಸಿ ಕಾರ್ಮಿಕ ಸಚಿವರಿಗೆ ಕಾರ್ಮಿಕರ ಮಕ್ಕಳು ಪತ್ರ ಬರೆದು ಪತ್ರ ಚಳಿವಳಿ ನಡೆಸಿದ್ದಾರೆ. ಗಜೇಂದ್ರಗಡ ಮತ್ತು ನೆಲ್ಲೂರು ಗ್ರಾಮದ ಮಕ್ಕಳು ಸಚಿವರಿಗೆ ಪತ್ರ ಬರೆದು ಪೋಸ್ಟ್ ಮಾಡಿದ್ದಾರೆ.
ಈ ವೇಳೆ ಮಾತನಾಡಿದ ಕಾರ್ಮಿಕ ಸಂಘಟನೆಯ ಮುಖಂಡ ಮೆಹಬೂಬ್ ಹವಾಲ್ದಾರ್, ಕಟ್ಟಡ ಕಾರ್ಮಿಕ ಮಕ್ಕಳ 2 ವರ್ಷಗಳಂದ ಬರಬೇಕಾದ ಶೈಕ್ಷಣಿಕ ಧನ ಸಹಾಯವನ್ನು ಸರ್ಕಾರ ತಡೆಹಿಡಿದಿದೆ. ಶೈಕ್ಷಣಿಕ ಧನ ಸಹಾಯವನ್ನು ಕಡಿತಗೊಳಿಸಿದ ಕಾರ್ಮಿಕ ಇಲಾಖೆ ಮತ್ತು ಸಚಿವರು ವಿರುದ್ಧ ಪತ್ರ ಚಳುವಳಿ ನಡೆಸುತ್ತಿದ್ದೇವೆ.
ಇಂದು ಪತ್ರ ಚಳುವಳಿಯ ಮೂಲಕ ಮೊದಲಿನಂತೆ ಶೈಕ್ಷಣಿಕ ಧನ ಸಹಾಯ ಬಿಡುಗಡೆ ಮಾಡಲು ಮತ್ತು ಕಡಿತಮಾಡಿದ ಧನ ಸಹಾಯವನ್ನು ವಿರೋಧಿಸಿ ಪತ್ರ ಚಳುವಳಿಯ ಮೂಲಕ ಮುಖ್ಯಮಂತ್ರಗಳಿಗೆ, ಜಿಲ್ಲಾ ಕಾರ್ಮಿಕ ಅಧಿಕಾರಿಗಳಿಗೆ, ಕಾರ್ಮಿಕ ಆಯುಕ್ತರಿಗೆ, ಕಾರ್ಮಿಕ ಸಚಿವರಿಗೆ ಪತ್ರ ಹಾಕುವ ಮೂಲಕ ಧನ ಸಹಾಯ ಬಿಡುಗಡೆ ಮಾಡಲು ಒತ್ತಾಯಿಸುತ್ತಿದ್ದೇವೆ ಎಂದರು.
ಈ ಸಂದರ್ಭದಲ್ಲಿ ರೇವಣಪ್ಪ ರಾಠೋಡ, ಅಂದಪ್ಪ ರಾಠೋಡ, ಬಸಮ್ಮ ಕಿತ್ತೂರು, ಕಲ್ಲಪ್ಪ ಓಲೆಕಾರ, ನಿಂಗಪ್ಪ ಮಾಸ್ತಗಟ್ಟಿ ಮತ್ತು ವಿಧ್ಯಾರ್ಥಿಗಳು ಚಳವಳಿಯಲ್ಲಿ ಭಾಗವಹಿಸಿದ್ದರು.