“ಕೆ ಎಚ್ ಪಾಟೀಲ್ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ನಿರ್ದೇಶಕರನ್ನು ಸೇವೆಯಿಂದ ಅಮಾನತ್ತು ಮಾಡಲು ಅನೇಕ ಗುರುತರಗಳ ಆರೋಪಗಳಿದ್ದು ಸಂಸ್ಥೆಯನ್ನು ಆರ್ಥಿಕವಾಗಿ ಹಿಂದುಳಿಯಲು ಏನೆಲ್ಲಾ ಮಾಡಬಹುದು ಅದನ್ನೆಲ್ಲಾ ಮಾಡುತ್ತಿದ್ದಾರೆ. ಕೂಡಲೇ ನಿರ್ದೇಶಕರನ್ನು ಅಮಾನತು ಮಾಡಬೇಕು”ಎಂದು ಎಡಿಎಸ್ಎಸ್ ಜಿಲ್ಲಾಧ್ಯಕ್ಷ ಶಿವಾನಂದ ತಮ್ಮಣ್ಣವರ ಒತ್ತಾಯಿಸಿದರು.
ಗದಗ ಪಟ್ಟಣದ ಕೆ.ಎಚ್.ಪಾಟೀಲ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ನಿರ್ದೇಶಕರನ್ನು ಸೇವೆಯಿಂದ ಅಮಾನತ್ತು ಮಾಡುವಂತೆ ಡಾ. ಬಿ. ಆರ್. ಅಂಬೇಡ್ಕರ ದಲಿತ ಸಂಘರ್ಷ ಸಮಿತಿ ಜಿಲ್ಲಾ ಘಟಕ ವತಿಯಿಂದ ಕರ್ನಾಟಕ ರಾಜ್ಯದ ವೈದ್ಯಕೀಯ ಶಿಕ್ಷಣ ಸಚಿವರು ಡಾ. ಶರಣಗೌಡ ಪಾಟೀಲರವರಿಗೆ ಮನವಿ ಸಲ್ಲಿಸಿ ಮಾತನಾಡಿದರು.
“ಕಿಮ್ಸ್ ನಲ್ಲಿ ಅಕ್ರಮ ನೇಮಕಾತಿ, ಭ್ರಷ್ಟಾಚಾರ, ಟೆಂಡರ್ ಪ್ರಕ್ರಿಯೆಯಲ್ಲಿ ಕಮಿಷನ್ ದಂಧೆ, ಸಿಬ್ಬಂದಿಗಳಿಗೆ ವಿನಾಕಾರಣ ಕಿರುಕುಳ ಮಾಡುತ್ತಿದ್ದು, ಹಿಟ್ಲರ್ ಆಡಳಿತ ನಡೆಸುತ್ತಿರುವರು. ಅಕ್ರಮ ನೇಮಕಾತಿಗೆ ಸಂಬಂಧಿಸಿದಂತೆ ಗುತ್ತಿಗೆ ನೌಕರನಿಗೆ ಲೆಕ್ಕ ಅಧೀಕ್ಷಕರೆಂದು ಕಾನೂನು ಬಾಹಿರವಾಗಿ ಆದೇಶ ನೀಡಿದ್ದಾರೆ. ಲೆಕ್ಕ ಅದಿಕ್ಷಕರ ಹುದ್ದೆ ಸರ್ಕಾರದ ಮಟ್ಟದಲ್ಲಿ ಆಯ್ಕೆಯಾಗುತ್ತದೆ. ಇಲ್ಲಿನ ನಿರ್ದೇಶಕರು ನೇಮಕಾತಿಗೆ ಯಾವುದೇ ಸರ್ಕಾರದ ನಿಯಮಗಳನ್ನು ಪಾಲಿಸಿದೆ, ನೇರವಾಗಿ ಅರ್ಹತೆ ಇಲ್ಲದ ಗುತ್ತಿಗೆ ನೌಕರನಿಗೆ ಲೆಕ್ಕ ಅಧೀಕ್ಷಕರ ಹುದ್ದೆಯನ್ನು ನೀಡಿದ್ದಾರೆ. ಇದು ಕಾನೂನು ಬಾಹಿರವಾಗಿದೆ. ಇನ್ನಿತರೇ ಪ್ರಯಾಣ ಭತ್ಯೆಯನ್ನು ನೀಡುತ್ತಿರುವರು. ನಿರ್ದೆಶಕರ ವಾಹನದಲ್ಲಿ ಓಡಾಟ ಮಾಡಿ ಬಸ್ಸಿನಲ್ಲಿ ಹೊದಂತೆ ಮಾಹಿತಿ ನೀಡಿ, ವೇತನವನ್ನೂ ಹೋರತುಪಡಿಸಿ ಪ್ರತಿ ತಿಂಗಳಿಗೆ 25 ರಿಂದ 30 ಸಾವಿರ ಪ್ರಯಾಣ ಭತ್ಯೆ ತೆಗೆದುಕೊಳ್ಳುತ್ತಿರುವನು” ಎಂದು ಆರೋಪಿಸಿದರು.
“ನೇಮಕಾತಿಯಲ್ಲಿ ಅನುಮಾನಗಳಿವೆ. ಆರೋಪಗಳಿವೆ. ಇಲಾಖೆಯವರು ಯಾಕೆ ತನಿಖೆ ನಡೆಸಬೇಕು. ಈ ವಿಚಾರಣೆಗೆ ಸೂಕ್ತ ಅಧಿಕಾರಿ ಅಥವಾ ನಿವೃತ್ತ ನ್ಯಾಯಾಧೀಶರನ್ನು ನೇಮಕ ಮಾಡಿ ಭ್ರಷ್ಟಾಚಾರವನ್ನು ಬಯಲಿಗೆ ತರಬೇಕು ಎಂದು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ಹಾವೇರಿ | ಮೇ 26ರಿಂದ 28ರವಗೆ ಬೆಂಗಳೂರಿನಲ್ಲಿ ಧರಣಿ ಸತ್ಯಾಗ್ರಹ
“ನಿರ್ದೇಶಕರಿಗೆ ಯಾವುದೇ ಹುದ್ದೆಗಳನ್ನು ನೇಮಕ ಮಾಡಿಕೊಳ್ಳಲು ಅವಕಾಶ ಇರುವುದಿಲ್ಲ. ಕ್ಲೇಮ್ ಎಕ್ಸಿಕ್ಯೂಟಿವ್‌ಗಳ ಹುದ್ದೆಗೆ ಅರ್ಹತೆ ಇಲ್ಲದೆ ಮೂರು ಜನರನ್ನು ಕೆಲಸಕ್ಕೆ ಆದೇಶ ನೀಡಿದ್ದು, ಕೆಲಸ ಮಾಡದೇ ಸಂಬಳ ಪಡೆಯುತ್ತಿದ್ದಾರೆ. ಕೂಡಲೇ ನಿರ್ದೇಶಕರನ್ನು ಅಮಾನತು ಮಾಡಬೇಕು” ಎಂದು ಶಿವಾನಂದ ತಮ್ಮಣ್ಣವರ ಒತ್ತಾಯಿಸಿದರು.
ಈ ಸಮಯದಲ್ಲಿ ಪ್ರದಾನ ಕಾರ್ಯದರ್ಶಿ ನಿತೀಶ್ ಘಟ್ಟೆಣ್ಣವರ ಇನ್ನೂ ಅನೇಕರು ಉಪಸ್ಥಿತರಿದ್ದರು.