ಅನೇಕ ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಪಟ್ಟಣ ಪಂಚಾಯತ್ ಮಳಿಗೆಗಳ ಟೆಂಡರ್ ಸಮಸ್ಯೆ ಹೆಚ್ಚಿನ ಸಮಯ ಪಡೆದುಕೊಂಡಿದ್ದು, ಲಕ್ಷಾಂತರ ಬಾಕಿ ಉಳಿದಿದೆ. ಇದರಿಂದ ಪಟ್ಟಣ ಪಂಚಾಯತ್ ಆದಾಯಕ್ಕೆ ಹೊಡೆತ ಬಿದ್ದಿರುವ ಬಗ್ಗೆ ನರೇಗಲ್ ಪಟ್ಟಣ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ಚರ್ಚೆ ನಡೆಸಲಾಯಿತು.
ಗದಗ ಜಿಲ್ಲೆಯ ರೋಣ ತಾಲೂಕಿನ ನರೇಗಲ್ ಪಟ್ಟಣ ಪಂಚಾಯಿತಿ ಸಾಮಾನ್ಯ ಸಭೆಯು ಅಧ್ಯಕ್ಷರಾದ ಫಕೀರಪ್ಪ ಮಳ್ಳಿಯವರ ಅಧ್ಯಕ್ಷತೆಯಲ್ಲಿ ನಡೆಯಿತು.
ಸಭೆಯಲ್ಲಿ ರೋಣ ಶಾಸಕ ಜಿ ಎಸ್ ಪಾಟೀಲ ಮಾತನಾಡಿ, “ನರೇಗಲ್ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಮಳಿಗೆಗಳಿಂದ ಬಾಡಿಗೆ ಅಂದಾಜು ₹20 ರಿಂದ ₹25 ಲಕ್ಷದವರೆಗೆ ಬಾಕಿ ಉಳಿದಿದೆ. ನಿಧನರಾದ ಮಾಲೀಕರ ಮಳಿಗೆಗಳನ್ನು ವಾಪಸ್ ಪಡೆಯಬೇಕು” ಎಂದು ಸೂಚಿಸಿದರು.
ಮಳಿಗೆಗಳ ಬಾಡಿಗೆ ಬಾಕಿ ಕಟ್ಟದಿರುವ ಮಾಲೀಕರಿಂದ ಆದಷ್ಟು ಬೇಗ ಬಾಕಿ ವಸೂಲಿ ಮಾಡಿಕೊಂಡು ಟೆಂಡರ್ ಪ್ರಕ್ರಿಯೆಗೆ ಮುಂದಾಗಬೇಕು. ಅನುಕೂಲತೆ ಒದಗಿಸಿದ ನಂತರವೂ ಕಟ್ಟದೇ ಇದ್ದರೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸಲಹೆ ನೀಡಿದರು.
ಇದನ್ನು ಓದಿದ್ದೀರಾ? ರಾಜ್ಯಮಟ್ಟದ ದಸರಾ ಈಜು ಸ್ಪರ್ಧೆ: ಮಂಗಳೂರಿನ ವಾಫಿ ಅಬ್ದುಲ್ ಹಕೀಂ ಚಾಂಪಿಯನ್
ಸಭೆಯಲ್ಲಿ ನರೇಗಲ್ ಪಟ್ಟಣ ಪಂಚಾಯಿತಿ ಸದಸ್ಯರು ಸೇರಿದಂತೆ ಅಧಿಕಾರಿಗಳು ಉಪಸ್ಥಿತರಿದ್ದರು.
