“ಮುಲಾಯಸಿಂಗ್ ಯಾದವ ನಂತರ ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ ನೇತೃತ್ವದಲ್ಲಿ ಪಕ್ಷ ದೇಶಾದ್ಯಂತ ಬಲಿಷ್ಠಗೊಳ್ಳುತ್ತಿದೆ ಕಳೆದ ಲೋಕಸಭಾ ಚುನಾವಣೆಯಲ್ಲಿ ೩ನೇ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಈ ನಿಟ್ಟಿನಲ್ಲಿ ಸಮಾಜವಾದಿ ಪಕ್ಷವನ್ನು ದೇಶಾದ್ಯಂತ ಕಟ್ಟಲು ಯೋಜನೆ ರೂಪಿಸಲಾಗಿದೆ” ಎಂದು ಸಮಾಜವಾದಿ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಮಂಜಪ್ಪ ಯಾದವ ಹೇಳಿದರು.
ಗದಗ ಪಟ್ಟಣಕ್ಕೆ ಆಗಮಿಸಿದ ಸಂದರ್ಭದಲ್ಲಿ ಮಾತನಾಡಿ, “ಕರ್ನಾಟಕದಲ್ಲಿ ಮುಂದೆ ಬರುವ ಎಲ್ಲ ಚುನಾವಣೆಯಲ್ಲಿ ಸಮಾಜವಾದಿ ಪಕ್ಷ ಸ್ಪರ್ಧಿಸಲಿದೆ. ಗೋವಿಂದರಾಜ ಕೊಣ್ಣೂರು ಅವರನ್ನು ಚುನಾವಣೆ ಸಮಿತಿ ಸಂಚಾಲಕರನ್ನಾಗಿ ನೇಮಿಸಿ, ಈ ಭಾಗದ ಆರು ಜಿಲ್ಲೆಗಳಲ್ಲಿ ಪಕ್ಷ ಸಂಘಟನೆಗೆ ಆದ್ಯತೆ ನೀಡಲು ಸೂಚಿಸಲಾಗಿದೆ” ಎಂದರು.
“ಜಿಲ್ಲಾಪಂಚಾಯತ ಸೇರಿದಂತೆ ಎಲ್ಲ ಚುನಾವಣೆಯಲ್ಲಿ ಪಕ್ಷ ಸ್ವತಂತ್ರವಾಗಿ ಸ್ಪರ್ಧಿಸಲಿದೆ” ಎಂದರು.
“೧೨ ನೇ ಶತಮಾನದ ಬಸವಣ್ಣನ ಕಾಲದಲ್ಲೇ ಸಮಾಜವಾದಿ ಪರಿಕಲ್ಪನೆ ಹುಟ್ಟಿತ್ತು. ಅದರ ಆಶಯದ ಮೇಲೆಯೇ ನಮ್ಮ ಪಕ್ಷ ರಾಜಕೀಯ ಹೋರಾಟ ನಡೆಸುತ್ತಿದೆ. ದೇಶದಲ್ಲಿನ ಅಲ್ಲ ಅಹಿಂದ ವರ್ಗಕ್ಕೂ ಸಮಾನ ಅವಕಾಶಗಳು ಸಿಗಬೇಕು ಎಂಬುದು ನಮ್ಮ ಪಕ್ಷದ ಧ್ಯೇಯವಾಗಿದೆ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಹಾವೇರಿ | ವಿದ್ಯುತ್ ತಂತಿ ತುಂಡಾಗಿ ಬಿದ್ದು ಬಾಲಕನೋರ್ವ ಸಾವು
ಕೇಂದ್ರ ಸರಕಾರ ಜಾತಿ ಜನಗಣತಿಯನ್ನು ನಿಖರವಾಗಿ ನಡೆಸುವ ಮೂಲಕ ಎಲ್ಲರಿಗೂ ಎಲ್ಲ ಕ್ಷೇತ್ರದಲ್ಲೂ ಸಮಾಜ ಅವಕಾಶ ಒದಗಿಸಬೇಕು” ಎಂದು ಹೇಳಿದರು.
ಈ ಸಂದರ್ಭದಲ್ಲಿ ಸುಭಾಷ ಮುಂಡಗೋಡ, ತಿಪ್ಪೇಸ್ವಾಮಿ, ಶಂಕರ ಯಾದವ, ಪ್ರಕಾಶ ಪೂಜಾರ, ಆರ್. ವೇಣುಗೋಪಾಲ, ಗೋವಿಂದರಾಜ್ ಪನ್ನೂರ ಉಪಸ್ಥಿತರಿದ್ದರು.