“ರಾಜಕೀಯ ಲಾಭಕ್ಕಾಗಿ ಗ್ಯಾರಂಟಿ ಹಣ ಹೊಂದಿಸಿಕೊಳ್ಳಲು ಆಗದೆ, ಯಾವುದೇ ಹೊಸ ಕಾಮಗಾರಿಯನ್ನು ಮಾಡಲು ಆಗದ ಸರಕಾರ ದಲಿತರಿಗೆ ಮೀಸಲಿಟ್ಟ ಹಣವನ್ನು ಬಳಕೆ ಮಾಡಿರುವುದು ಖಂಡನೀಯ” ಎಂದು ಎಸ್ಸಿ ಮೋರ್ಚಾ ಅಧ್ಯಕ್ಷ ಭೀಮಪ್ಪ ಮಾದರ ಹೇಳಿದರು.
ಗದಗ ಜಿಲ್ಲೆಯ ರೋಣ ಪಟ್ಟಣದ ತಹಸೀಲ್ದಾರ್ ಕಛೇರಿ ಎದುರು ಬಿಜೆಪಿ ಎಸ್ಸಿ ಮೋರ್ಚದ ವತಿಯಿಂದ ರಾಜ್ಯ ಸರ್ಕಾರದ ವಿರುದ್ದ ಪಂಚ ಗ್ಯಾರಂಟಿಗೆ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ಜನತೆಯ ಕಲ್ಯಾಣಕ್ಕಾಗಿ ಮೀಸಲಿಟ್ಟ SCP& TSCP ಅನುಧಾನದವನ್ನು ಗ್ಯಾರಂಟಿ ಯೋಜನೆ ಬಳಕೆ ಮಾಡಿದ್ದನ್ನು ಖಂಡಿಸಿ ಪ್ರತಿಭಟನೆ ನಡೆಸಿ ಮಾತನಾಡಿದರು.
“ಸುಮಾರು 25 ಸಾವಿರ ಕೋಟಿ ಹಣವನ್ನು ಗ್ಯಾರಂಟಿ ಯೋಜನೆಗೆ ಹಣ ಬಳಕೆಮಾಡಿರುವುದು ದುರಂತವೇ ಸರಿ. ದಲಿತರ ಕಲ್ಯಾಣಕ್ಕಾಗಿ ಇಟ್ಟ ಅನುದಾನವನ್ನು ಗ್ಯಾರಂಟಿಗೆ ಬಳಕೆ ಮಾಡಬಾರದು. ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ದಲಿತರ ಹಣ ಬಳಕೆ ಮಾಡುತ್ತವೆ ಎಂದು ಎಲ್ಲಿಯು ಹೇಳಿರುವುದಿಲ್ಲ. ಈಗ ಬಳಕೆ ಮಾಡುತ್ತಿರುವ ಖಂಡನೀಯ” ಎಂದು ಹೇಳಿದರು.
“ದಲಿತರ ಉದ್ದಾರ ಮಾಡುತ್ತೇವೆ, ಅಹಿಂದ ನಾಯಕ ಎಂದು ಹೇಳಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರಕಾರ ದಲಿತರಿಗೆ ಅನ್ಯಾಯ ಮಾಡುತ್ತಿದೆ. ವಾಲ್ಮೀಕಿ ನಿಗಮದಲ್ಲಿ ಹಣವನ್ನು ದುರ್ಬಳಕ್ಕೆ ಮಾಡಿಕೊಂಡು ಆಂದ್ರ ಮತ್ತು ತಮಿಳುನಾಡು ಚುನಾವಣೆಗಳಲ್ಲಿ ಬಳಕೆ ಮಾಡಿಕೊಂಡಿರುವುದು ಎಷ್ಟು ಸರಿ?” ಎಂದು ಪ್ರಶ್ನಿಸಿದರು.
ತಾಲ್ಲೂಕು ಭಾರತೀಯ ಜನತಾ ಪಾರ್ಟಿ ಹಿರಿಯ ನಾಯಕ ಅಶೋಕ ನವಲಗುಂದ ಪ್ರಸ್ತಾವಿಕ ಮಾತನಾಡಿ, “ತಾಲ್ಲೂಕಿನಲ್ಲಿ ಶಾಸಕರು ಮತ್ತು ಅವರು ಪುತ್ರ ಕೇವಲ ವಿಂಡೋ ಕಂಪನಿಯ ನಿಯಂತ್ರಣದಲ್ಲಿ ಕಾಲಹರಣ ಮಾಡುತ್ತಿದ್ದಾರೆ. ಫಲವತ್ತಾದ ರೈತರ ಜಮೀನನಲ್ಲಿ ಕಾನೂನು ಭಾಹಿರವಾಗಿ ವಿಂಡೋ ಪ್ಯಾನ ಅಳವಡಿಸುತ್ತಾ, ದ್ವೇಶದ ರಾಜಕಾರಣ ಮಾಡುತ್ತಿದ್ದಾರೆ. ದಲಿತರ ಕಲ್ಯಾಣದ ಹಣವನ್ನು ಗ್ಯಾರಂಟಿಗಳಿಗೆ ಬಳಸಿಕೊಂಡು ದಲಿತರನ್ನು ಕಡಗಣಿಸಿದ್ದಾರೆ. ತಾಲ್ಲೂಕಿನಲ್ಲಿ ಸರ್ವಾಧಿಕಾರ ದೋರಣೆ ಮಾಡುತ್ತಿದ್ದಾರೆ” ಎಂದು ಕಿಡಿಕಾರಿದರು.
“ಕಾಂಗ್ರೆಸ್ ಸರಕಾರ ಬಹಳ ದಿನ ಉಳಿಯಲಾರದು. ದಲಿತರನ್ನು ಕಡೆಗಣಸಿದ ಯಾವ ಸರಕಾರವೂ ಬಹಳ ದಿನ ಆಳ್ವಿಕೆ ಮಾಡಲು ಆಗುವುದಿಲ್ಲ. ಮುಂದಿನ ದಿನಮಾನದಲ್ಲಿ ದೊಡ್ಡ ಮಟ್ಟದ ಜನಾಂದೋಲನದ ಮೂಲಕ ಸರಕಾರದ ಬಂಡವಾಳವನ್ನು ಬಯಲು ಮಾಡುತ್ತೇವೆ. ಪ್ರತಿ ಹಳ್ಳಿಗೆ ಪ್ರವಾಸ ಮಾಡಿ ಬೃಹತ್ ಪ್ರಮಾಣದ ಹೋರಾಟ ಮಾಡಲಾಗುವದು” ಎಂದು ಎಚ್ಚರಿಕೆ ನೀಡಿದರು.
ಈ ಸುದ್ದಿ ಓದಿದ್ದೀರಾ? ಹಾವೇರಿ | ರಸ್ತೆಯಲ್ಲಿ ಗುಂಡಿಗಳು ಬೈಕ್ ಸವಾರರು ಜೀವ ಭಯದಲ್ಲಿ ಸಂಚಾರ
ಪ್ರತಿಭಟನೆಯಲ್ಲಿ ಎಸ್ಸಿ ಮೋರ್ಚಾದ ಮುಖಂಡರು ಮಲ್ಲು ಮಾದರ, ಮಂಜುನಾಥ ಬುರಡಿ ಚಂದ್ರು ಹಂಚಿನಾಳ, ಮುತ್ತಪ್ಪಜೋಗಣ್ಣವ, ಮಂಜುನಾಥ ಚಲವಾದಿ, ಪ್ರಕಾಶ ಮಾದರ, ಶಿವಾನಂದ ಜಾದವ, ಚಂದ್ರು ಲಮಾಣಿ, ಮೈಲಾರಪ್ಪ ಮಾದರ, ಮಜೂರಪ್ಪ ಮಾದರ, ನಿಂಗಪ್ಪ ಮಾದರ ಅನೇಕರು ಉಪಸ್ಥಿತರಿದ್ದರು.
