“ಡಾ. ಜಿ. ಎಸ್. ಆಮೂರರ ಮೇರು ವಿಮರ್ಶಾ ಕೃತಿಗಳ’ ಕುರಿತು ನಾಳೆ ಜೆ ಟಿ ಮಹಾವಿದ್ಯಾಲಯದ ಸಭಾಂಗಣದಲ್ಲಿ ವಿಚಾರ ಸಂಕಿರಣ ಹಮ್ಮಿಕೊಳ್ಳಲಾಗಿದೆ” ಎಂದು ಡಾ. ಅಂದಯ್ಯ ಅರವಟಗಿಮಠ ಹೇಳಿದರು.
ಗದಗ ಪಟ್ಟಣದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿ, “ಕೆ.ಎಲ್.ಇ. ಸಂಸ್ಥೆಯ ಜಗದ್ಗುರು ತೋಂಟದಾರ್ಯ ಮಹಾವಿದ್ಯಾಲಯ, ಮತ್ತು ಕೆ.ಎಲ್.ಇ ಸಂಸ್ಥೆಯ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯಗಳ ಕನ್ನಡ ವಿಭಾಗಗಳ ಸಂಯುಕ್ತ ಆಶ್ರಯದಲ್ಲಿ ‘ಡಾ. ಜಿ. ಎಸ್. ಆಮೂರರ ಮೇರು ವಿಮರ್ಶಾ ಕೃತಿಗಳ’ ವಿಚಾರ ಸಂಕಿರಣವನ್ನು ನಾಳೆ 19/3/2025, 10:30ಕ್ಕೆ ನಡೆಯಲಿದೆ” ಎಂದರು.
“ವಿಚಾರ ಸಂಕಿರಣದ ಉದ್ಘಾಟನೆಯನ್ನು ಹಿರಿಯ ಸಾಹಿತಿ ಪ್ರೊ. ರಾಘವೇಂದ್ರ ಪಾಟೀಲರು ನೆರವೇರಿಸಿ ಮಾತನಾಡಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೆ.ಎಲ್.ಇ ಸಂಸ್ಥೆಯ ಜಗದ್ಗುರು ತೋಂಟದಾರ್ಯ ಮಹಾವಿದ್ಯಾಲಯ ಸ್ಥಾನಿಕ ಆಡಳಿತ ಮಂಡಳಿಯ ಕಾರ್ಯಾಧ್ಯಕ್ಷ ಶ್ರೀ ಎಸ್. ಪಿ. ಸಂಶಿಮಠ ವಹಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಶ್ರೀಮತಿ. ರಜನಿ ಪಾಟೀಲ, ಶ್ರೀನಿವಾಸ ಹುಯಿಲಗೋಳ, ಪ್ರೊ. ಅನ್ನದಾನಿ ಹಿರೇಮಠ, ಪ್ರೊ. ಪಿ. ಜಿ. ಪಾಟೀಲ, ಡಾ. ಎ.ಕೆ. ಮಠ ಉಪಸ್ಥಿತರಿರುವರು.
ವಿಚಾರಗೋಷ್ಠಿಗಳಲ್ಲಿ ಡಾ. ಶಾಮಸುಂದರ ಬಿದರಕುಂದಿ, ಡಾ. ಜಿ. ಎಂ. ಹೆಗಡೆ ಅವರು ಪ್ರಬಂಧ ಮಂಡಿಸಲಿದ್ದಾರೆ.
ಈ ಸುದ್ದಿ ಓದಿದ್ದೀರಾ? ಹಾವೇರಿ | ಸ್ವಚ್ಛವಾಹಿನಿ ಮಹಿಳಾ ಕಾರ್ಮಿಕರನ್ನು ಖಾಯಂಗೊಳಿಸಿ, ವೇತನ ಭದ್ರತೆ ಒದಗಿಸಬೇಕು: ಎಂ. ನಾಡಗೌಡ ಆಗ್ರಹ
ಸಮಾರೋಪ ಸಮಾರಂಭದಲ್ಲಿ ಹಿರಿಯ ಕತೆಗಾರರಾದ ಪ್ರೊ. ಮಲ್ಲಿಕಾರ್ಜುನ ಹಿರೇಮಠ ಸಮಾರೋಪ ನುಡಿಗಳನ್ನು ಆಡಲಿದ್ದಾರೆ. ಡಾ. ಡಿ. ಬಿ. ಗವಾನಿ, ಪ್ರೊ ಜಿ. ವಿಶ್ವನಾಥ, ಡಾ. ನಾಗರಾಜ ಬಳಿಗೇರ, ಡಾ. ರಾಮಚಂದ್ರ ಪಡೆಸೂರು, ಪ್ರೊ. ಶ್ರುತಿ ಮ್ಯಾಗೇರಿ ಉಪಸ್ಥಿತರಿರುವರೆಂದು ವಿಚಾರ ಸಂಕಿರಣದ ಸಂಚಾಲಕರಾದ ಡಾ. ಅಂದಯ್ಯ ಅರವಟಗಿಮಠ ತಿಳಿಸಿದರು.