“ರಾಜ್ಯದಲ್ಲಿ ತಲೆ ಬುರುಡೆ ಪ್ರಕರಣ ತನಿಖೆ ನಡೆಯುತ್ತಿದ್ದು, ದೂರುದಾರ ಕೆಲವು ಸಾಕ್ಷಿಗಳನ್ನು ಈಗಾಗಲೇ ನ್ಯಾಯಾಲಯದ ಮುಂದೆ ಹೇಳಿರುವಂತೆ ಸರ್ಕಾರವು ಎಸ್ಐಟಿ ರಚನೆ ಮಾಡಿದೆ. ಎಸ್ ಐ ಟಿ ಯಾವುದೇ ಒತ್ತಡಕ್ಕೆ ಮಣಿಯದೆ ನಿಷ್ಪಕ್ಷಪಾತ ತನಿಖೆಯನ್ನು ಮಾಡಬೇಕು. ಅಸಹಜ ಸಾವುಗಳ ತನಿಕೆಯನ್ನು ಮಾಡಬೇಕು ಅದರಲ್ಲಿ ಮುಖ್ಯವಾಗಿ ಪದ್ಮಲತಾ, ವೇದವಲ್ಲಿ, ಸೌಜನ್ಯ ಈ ಪ್ರಕರಣಗಳನ್ನು ಒಳಗೊಂಡು ತನಿಖೆ ಮಾಡಬೇಕು” ಎಂದು ಆಗ್ರಹಿಸಿ ಭಾರತ ವಿದ್ಯಾರ್ಥಿ ಫೆಡರೇಶನ್ (ಎಸ್.ಎಫ್.ಐ) ಬೃಹತ್ ಪ್ರತಿಭಟನೆ ನಡೆಸಿತು.
ಗದಗ ಜಿಲ್ಲೆಯ ಗಜೇಂದ್ರಗಡ ಪಟ್ಟಣದ ಕೆ ಕೆ ವೃತ್ತದಲ್ಲಿ ಭಾರತ ವಿದ್ಯಾರ್ಥಿ ಫೆಡರೇಷನ್ ಸಮಿತಿ ತಾಲೂಕ ನೇತೃತ್ವದಲ್ಲಿ ರಾಜ್ಯದಲ್ಲಿ ನಡೆದಿರುವ ಅಸಹಜ ಸಾವುಗಳ ಪ್ರಕರಣದ SIT ತನಿಖೆಯಲ್ಲಿ ಪದ್ಮಲತಾ, ವೇದವಲ್ಲಿ, ಸೌಜನ್ಯ, ಪ್ರಕರಣವನ್ನು ನಿಷ್ಪಕ್ಷಪಾತ ತನಿಖೆಯಾಗುವಂತೆ ಒತ್ತಾಯಿಸಿ ವಿದ್ಯಾರ್ಥಿಗಳಿಂದ ಮಾನವ ಸರಪಳಿ ರಚಿಸಿ ಬೃಹತ ಪ್ರತಿಭಟನೆ ನಡೆಸಿದರು.
ಎಸ್ ಎಫ್ ಐ ನ ರಾಜ್ಯ ಉಪಾಧ್ಯಕ್ಷ ಗಣೇಶ ರಾಠೋಡ ಮಾತನಾಡಿ, “ರಾಜ್ಯದಲ್ಲಿ ನಡೆದಿರುವ ಯಾವುದೇ ಅಸಹಜ ಸಾವುಗಳಿಗೆ ಸೂಕ್ತ ತನಿಖೆ ಮಾಡಿ ಅಪರಾಧಿಗಳನ್ನು ಕಂಡುಹಿಡಿದು ಕಠಿಣ ಶಿಕ್ಷೆಯನ್ನು ನೀಡಬೇಕು. ಆದರೆ ಈಗಾಗಲೇ ಎಸ್ಐಟಿನಲ್ಲಿರುವ ಅಧಿಕಾರಿಯೊಬ್ಬರು ದೂರುದಾರನಿಗೆ ಬೆದರಿಸುತ್ತಿದ್ದಾರೆ ಎಂಬ ಮಾತುಗಳು ಕೇಳುತ್ತಿವೆ. ಇದು ಸರಿಯಾದ ಕ್ರಮವಲ್ಲ. ಧರ್ಮಸ್ಥಳದ ಸುತ್ತಮುತ್ತ 1979 ರಿಂದ ಹಿಡಿದು ಇಲ್ಲಿ 2025ರ ತನಕ ನಡೆದಿರುವಬಹುದಾದ ಅಸಹಜ ಸಾವುಗಳ ತನಿಖೆಯಾಗಬೇಕು” ಎಂದು ಒತ್ತಾಯಿಸಿದರು.

“ಸರ್ಕಾರದ ಗೃಹ ಸಚಿವರು ಸೌಜನ್ಯ ಪ್ರಕರಣ ತನಿಖೆ ಮಾಡುವುದಿಲ್ಲ’ ಎಂದು ಹೇಳಿದ್ದಾರೆ. ಇದು ಸರಿಯಾದದ್ದಲ್ಲ ಈ ತನಿಖೆಯಲ್ಲಿ ಸೌಜನ್ಯ ಪ್ರಕರಣವನ್ನು ಸೇರ್ಪಡೆಗೊಂಡು ತನಿಖೆ ಮಾಡಬೇಕು” ಎಂದು ಆಗ್ರಹಿಸಿದರು.
“ಎಂ ಎಲ್ ಎ ಅಶ್ವಥ್ ನಾರಾಯಣ್ ಅವರು, ದೂರುದಾರನ ಹಿಂದೆ ಎಸ್ ಎಫ್ ಐ ಸಂಘಟನೆ ಕೈವಾಡ ಇದೆ ಎಂದು ಆರೋಪಿಸಿದ್ದು ಖಂಡನೀಯ. ಇಂತಹ ವಿಷಯಗಳಲ್ಲಿ ಒತ್ತಡ ಹೇರಿ ತನಿಖೆ ಮಾಡಿಸಬೇಕಿತ್ತು. ಆದರೆ ಅವರೇ ಅಪರಾಧಿಗಳ ಪರ ನಿಂತು ವಕಲತ್ತು ನಡೆಸಿರುವ ರೀತಿ ಹೇಳಿಕೆ ನೀಡುತ್ತಿರುವುದು” ನಾಚಿಕೆಗೇಡಿನ ಸಂಗತಿ” ಎಂದು ಕಿಡಿಕಾರಿದರು.
ಈ ಸಂದರ್ಭದಲ್ಲಿ ಎಸ್ ಎಫ್ ಐ ಜಿಲ್ಲಾಧ್ಯಕ್ಷರಾದ ಚಂದ್ರು ರಾಠೋಡ ಮಾತನಾಡಿ, “ಶಾಲಾ ಕಾಲೇಜುಗಳಲ್ಲಿ ಲೈಂಗಿಕ ದೌರ್ಜನ್ಯ ಮತ್ತು ಕಿರುಕುಳ ವಿರೋಧಿ ಸಮತಿ ರಚಿಸಲು ಸ್ಥಳೀಯ ಶಾಲಾ ಕಾಲೇಜುಗಳು, ತಹಶಿಲ್ದಾರ, ಪೋಲಿಸ್ ಇಲಾಖೆ, ನ್ಯಾಯವಾದಿಗಳನ್ನು ಒಳಗೊಂಡು ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಲೈಂಗಿಕ ವಿರೋಧಿ ಸಮತಿ ರಚಿಸಲು ಮುಂದಾಗಬೇಕು” ಎಂದು ಒತ್ತಾಯಿಸಿದರು.
ಇದನ್ನೂ ಓದಿ: BREAKING NEWS | ಧರ್ಮಸ್ಥಳ ಪ್ರಕರಣ: ಪಾಯಿಂಟ್ ನಂ 11ರ ಸಮೀಪದಲ್ಲಿ ಅಸ್ಥಿಪಂಜರದ ಅವಶೇಷಗಳು ಪತ್ತೆ
“2012 ಆದ ಸೌಜನ್ಯ ಪ್ರಕರಣವನ್ನು ಈಗ ರಚಿಸಿರುವ ವಿಶೇಷ ತನಿಖಾ ತಂಡದಲ್ಲಿ, ಹಿಂದೆ ಆಗಿರುವ ಪದ್ಮಾವತಿ, ಸೌಜನ್ಯ, ಯಮುನಾ, ನಾರಾಯಣ, ವೇದದಲ್ಲಿ ಸಾವುಗಳ ಬಗ್ಗೆ ಮರು ತನಿಖೆ ಆಗಬೇಕು” ಎಂದು ಆಗ್ರಹಿದರು.
ಎಸ್ ಎಫ್ ಐ ಮಾಜಿ ಮುಖಂಡರಾದ ಬಾಲು ರಾಠೋಡ ಮಾತನಾಡಿದರು, ಈ ಸಂದರ್ಭದಲ್ಲಿ ಹೋರಾಟದ ಸ್ಥಳಕ್ಕೆ ಭೇಟಿ ನೀಡಿ ತಹಶಿಲ್ದಾರ ಕಛೇರಿ ಸಿಬ್ಬಂದಿಗಳಾದ ಶ್ರೀ ಹರೀಶ್ ಕುಮಾರ್ ಬಂದು ಮನವಿ ಸ್ವೀಕರಿಸಿದರು. ಹೋರಾಟದಲ್ಲಿ ತಾಲೂಕ ಅಧ್ಯಕ್ಷರಾದ ಅನಿಲ್ ಆರ್, ಮುಖಂಡರಾದ ಶರಣು ಮಾಟರಂಗಿ, ಮಹಾಂತೇಶ ಪೂಜಾರ, ಅಭಿಲಾಷ್ ರಾಠೋಡ, ಗುರುನಾಥ್ ಆರ್, ಕಾಂತೇಶ ಮಾಳೋತ್ತರ, ಗಣೇಶ ಪವಾರ್, ಅಶೋಕ್, ಲಕ್ಷ್ಮಿ ನಾಯಕ, ಭೀಮಮ್ಮ ಸಣ್ಣಕ್ಕಿ, ಕೀರ್ತಿ ಕಳಕಾಪೂರ, ಅನು ಗಡಗಿ, ಶ್ವೇತಾ ರೋಟ್ಟಿ, ಕವಿತಾ ರಾಠೋಡ, ಲಕ್ಷ್ಮಿ ಹಡಪದ, ಪಲ್ಲವಿ ಹೋಸಮನಿ, ತ್ರೀಷಾ ಕುಂಬಾರ, ಚಂದ್ರಿಕಾ ಕಲ್ಲಿಗನೂರ, ಹಾಗೂ ನೂರಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು.