“ನಮ್ಮ ಸಂವಿಧಾನದ ರಾಷ್ಟ್ರ ಧ್ವಜದ ನಿಯಮಗಳಲ್ಲಿ ಒಂದು ನಿಯಮ ಇದೆ ಅದು ನಮ್ಮ ರಾಷ್ಟ್ರ ಧ್ವಜದ ಸಮಾನಾಂತರವಾಗಿ ಯಾವುದೇ ಧ್ವಜವನ್ನು ಹಾರಿಸಬಾರದದು ಎಂದು ಇದೆ. ಆದರೆ ಗದಗ ಪಟ್ಟಣದಲ್ಲಿ ಶ್ರೀರಾಮ ಸೇನೆ ಸಂಘಟನೆಯವರು ರಾಷ್ಟ್ರ ಧ್ವಜದ ಸಮಾನಾಂತರವಾಗಿ ಭಗವಾಧ್ವಜವನ್ನು ಹಾರಿಸಿ ಸಂವಿಧಾನಕ್ಕೆ ಹಾಗೂ ರಾಷ್ಟ್ರ ಧ್ವಜಕ್ಕೆ ಅವಮಾನ ಮಾಡಿದ್ದಾರೆ. ದಲಿತ ಮುಖಂಡರು ಮುತ್ತಣ್ಣ ಚವಡಣ್ಣವರ ಅವರು ಪ್ರತ್ಯೇಕ್ಷವಾಗಿ ನೋಡಿ ನಮಗೆ ತಿಳಿಸಿದ್ದಾರೆ” ಎಂದು ದಲಿತ ಹೋರಾಟಗಾರ ಮುತ್ತು ಬಿಳಿಯಲಿ ಪತ್ರಿಕಾ ಹೇಳಿಕೆ ನೀಡಿದ್ದಾರೆ.
ಗದಗ ಪಟ್ಟಣದಲ್ಲಿ ಈದಿನ.ಕಾಮ್ ಪತ್ರಿಕಾ ಹೇಳಿಕೆ ನೀಡಿದ ಅವರು, “ಕರ್ನಾಟಕ ಸರ್ಕಾರ 2024 ರಲ್ಲಿ ನವೆಂಬರ್ 26 ಹಾಗೂ ಆಗಸ್ಟ್ 15 ರಂದು ನಡೆಯುವ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಗಾಂಧೀಜಿಯವರ ಭಾವಚಿತ್ರದ ಜೊತೆಗೆ ಡಾ.ಬಿ.ಅರ್.ಅಂಬೇಡ್ಕರ ಅವರ ಭಾವಚಿತ್ರವನ್ನು ಇಟ್ಟು ಧ್ವಜಾರೋಹಣ ಮಾಡಬೇಕೆಂದು ಕಟ್ಟುನಿಟ್ಟಿನ ಆದೇಶ ಹೊರಡಿಸಿದ್ದರೂ ಕೂಡ ಶ್ರೀರಾಮ ಸೇನೆ ಸರ್ಕಾರದ ಆದೇಶಕ್ಕೆ ಬೆಲೆ ಕೊಟ್ಟಿಲ್ಲ. ಬ್ರಿಟಿಷರ ಜೊತೆ ಹೋರಾಟ ಮಾಡಿ, ಈ ನಾಡಿಗಾಗಿ ತನ್ನ ಪ್ರಾಣವನ್ನು ತ್ಯಾಗ ಮಾಡಿದ ಅಪ್ರತಿಮ ದೇಶಭಕ್ತ ಸಂಗೋಳ್ಳಿ ರಾಯಣ್ಣನವರ ಭಾವಚಿತ್ರದ ಜೊತೆಗೆ ಇಡೀ ಸ್ವಾತಂತ್ರ್ಯ ಚಳುವಳಿಯಲ್ಲಿ ಏನು ಕೊಡುಗೆ ಸಲ್ಲಿಸದ ಹಾಗೂ ಬ್ರಿಟಿಷರಿಗೆ ಕ್ಷಮಾಪಣಾ ಪತ್ರವನ್ನು ಬರೆದುಕೊಟ್ಟ ಸಾವರ್ಕರ್ ಅವರ ಭಾವಚಿತ್ರವನ್ನು ಇಟ್ಟು ಸಂಗೋಳ್ಳಿ ರಾಯಣ್ಣನವರಿಗೂ ಅವಮಾನ ಮಾಡಿದ್ದಾರೆ” ಎಂದು ಸಮಾಧಾನ ವ್ಯಕ್ತಪಡಿಸಿದರು.
“ಶ್ರೀರಾಮ ಸೇನೆ ಭಾರತ ಸಂವಿಧಾನಕ್ಕೆ ಹಾಗೂ ಸಂವಿಧಾನದ ಪಿತಾಮಹ ಡಾ.ಬಾಬಾ ಸಾಹೇಬ್ ಅಂಬೇಡ್ಕರ ಅವರಿಗೆ ಅವಮಾನ ಮಾಡುವುದು ಇದು ಹೊಸತೆನಲ್ಲ. ಇವರು ಮಾಡುವ ಪ್ರತಿಯೊಂದು ಹೋರಾಟ ಹಾಗೂ ಚಟುವಟಿಕೆಗಳು ಸಂವಿಧಾನದ ವಿರುದ್ಧವಾಗಿರುತ್ತವೆ. ಶ್ರೀರಾಮ ಸೇನೆ ಗದಗದಲ್ಲಿ ಇವರು ದಲಿತ ಮಿತ್ರ ಮೇಳ ಎಂಬ ಸಹಭಾಗಿ ಸಂಘಟನೆಯನ್ನು ಹುಟ್ಟುಹಾಕಿ ದಲಿತ ಯುವಕರನ್ನು ಬಳಸಿಕೊಂಡು ಅವರ ತಲೆಯಲ್ಲಿ ಹುಸಿ ಹಿಂದುತ್ವ ಹಾಗೂ ದೇಶಭಕ್ತಿಯ ಹೆಸರಿನಲ್ಲಿ ಅವರಿಂದ ಸಂವಿಧಾನ ಬಾಹಿರವಾಗಿ ಕೆಲಸಗಳನ್ನು ಮಾಡಿಸುತ್ತಾರೆ. ರಾಜ್ಯದ ಅನೇಕ ದಲಿತ ಯುವಕರು ಸಂವಿಧಾನ ಬಾಹಿರ ಕೃತ್ಯಗಳನ್ನು ಮಾಡಿ ಅನೇಕ ಕೇಸ್ ಗಳನ್ನು ಹಾಕಿಕೊಂಡು ಕೋರ್ಟು, ಪೋಲಿಸ್ ಠಾಣೆಗೆ ಅಲೆದಾಡುತ್ತಿದ್ದಾರೆ” ಎಂದು ಆರೋಪಿದರು.
ಈ ಸುದ್ದಿ ಓದಿದ್ದೀರಾ? ಶಿವಮೊಗ್ಗ | ಸಕ್ರೆಬೈಲ್ ಸುತ್ತಮುತ್ತ ಒಂಟಿ ಸಲಗ ಪ್ರತ್ಯಕ್ಷ
“ಶ್ರೀರಾಮ ಸೇನೆ ರಾಷ್ಟ್ರ ಧ್ವಜಕ್ಕೆ ಅವಮಾನ ಮಾಡಿದ ಕುರಿತು ಗದಗ ಜಿಲ್ಲಾ ಪೊಲೀಸ ವರಿಷ್ಠಾಧಿಕಾರಿಗಳು ಈ ಕೂಡಲೇ ಸುಮೋಟೊ ಕೇಸ್ ದಾಖಲು ಮಾಡಿಕೊಳ್ಳಬೇಕು. ದೇಶ ವಿರೋಧಿಗಳಿಗೆ ದೇಶದ್ರೋಹ ಕೇಸ್ ಹಾಕಿ ಶ್ರೀರಾಮ ಸೇನೆ ಸಂಘಟನೆಯನ್ನು ರಾಜ್ಯದಲ್ಲಿ ನಿಷೇಧಿಸಬೇಕೆಂದು ಈ ಮೂಲಕ ಕರ್ನಾಟಕ ಸರ್ಕಾರಕ್ಕೆ ದಲಿತ ಸಂಘಟನೆಗಳ ಒಕ್ಕೂಟದಿಂದ ಒತ್ತಾಯ ಮಾಡುತ್ತೇವೆ” ಎಂದರು.