“ರೈತ ಕಾರ್ಮಿಕರ, ಕೂಲಿಕಾರರ ಜನ ವಿರೋಧಿ ಕೇಂದ್ರ ರಾಜ್ಯ ಸರ್ಕಾರದ ನೀತಿ ವಿರೋಧಿಸಿ ಇದೆ ಜಜುಲೈ 9ರಂದು ಎಲ್ಲಾ ತಾಲೂಕು ಜಿಲ್ಲೆಯಲ್ಲಿ ಸಾರ್ವತ್ರಿಕ ಮುಷ್ಕರಕ್ಕೆ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ತಾಲೂಕಾಧ್ಯಕ್ಷ ಬಾಲು ರಾಠೋಡ ಕರೆ ನೀಡಿದರು.
ಗದಗ ಜಿಲ್ಲೆಯ ಗಜೇಂದ್ರಗಡ ತಾಲ್ಲೂಕಿನ ಸೂಡಿ ಗ್ರಾಮ ಪಂಚಾಯಿತಿ ಎದುರು ಉದ್ಯೋಗ ಖಾತ್ರಿ ಅಡಿಯಲ್ಲಿ ಉದ್ಯೋಗ ಕೊಡುವಂತೆ ಆಗ್ರಹಿಸಿ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘ ತಾಲೂಕ ಸಮಿತಿ ಪ್ರತಿಭಟನೆ ನಡೆಸಿ ಪಿಡಿಒ ಅವರಿಗೆ ಮನವಿ ಸಲ್ಲಿಸಿ ಮಾತನಾಡಿದರು.
“ಕೇಂದ್ರ ಸರ್ಕಾರ ಅಧಿಕಾರಕ್ಕೆ ಬಂದು ಹನ್ನೊಂದು ವರ್ಷಗಳು ಕಳೆದಿವೆ. ದ್ಯೋಗ ಖಾತ್ರಿ ಯೋಜನೆಯು ವರ್ಷದಿಂದ ವರ್ಷಕ್ಕೆ ಹಣಕಾಸು ಕಡಿತ ಮಾಡುತ್ತಾ ಬರುತ್ತಿದೆ. ಈ ಮಹತ್ವದ ಯೋಜನೆಯನ್ನು ನಾಶ ಮಾಡುವ ಉದ್ದೇಶ ಹೊಂದಿದೆ. ಈ ವರ್ಷದ ಬಜೆಟ್ ನಲ್ಲಿ 50 ಸಾವಿರ ಕೋಟಿಗೂ ಹೆಚ್ಚುವರಿ ಹಣ ಕಡಿತ ಮಾಡಿದೆ. ‘ಜನತೆಗೆ ಉದ್ಯೋಗ ಸೃಷ್ಟಿಸಲಾಗಿದೆ’ ಎಂದು ಸುಳ್ಳು ಹೇಳುವ ಚಾಳಿ ಮುಂದುವರೆಸಿದೆ. ಎಂದು ಕಿಡಿಕಾರಿದರು.
“ರಾಜ್ಯ ಸರ್ಕಾರದಿಂದಲ್ಲೂ ಸರಿಯಾದ ರೀತಿಯಲ್ಲಿ ಕೂಲಿಕಾರರಿಗೆ ಕೆಲಸ ನೀಡಲು ಇಚ್ಚಾಸಕ್ತಿ ಕಡಿಮೆ ಆಗಿದೆ . ಶಾಸಕರು ಜಿ. ಎಸ್. ಪಾಟೀಲರು ತಮ್ಮದೇ ಆಡಳಿತ ಹೊಂದಿರುವ ಗ್ರಾಮ ಪಂಚಾಂಗಗಳಲ್ಲಿ ನೂರು ಮಾನವ ದಿನಗಳ ಕೆಲಸವನ್ನು ಕೂಲಿಕಾರರಿಗೆ ಕೊಡಿಸಲು ಗ್ರಾಮ ಪಂಚಾಯಿತಿಗಳಿಗೆ ಸೂಚಿಸುವ ಮಾತುಗಳನ್ನು ಆಡದೆ ಭ್ರಷ್ಟಾಚಾರದಲ್ಲಿ ತೋಡಗಿರುವದು ಕಾಣುತ್ತಿದೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಗ್ರಾಮ ಘಟಕ ಅಧ್ಯಕ್ಷರಾದ ಬಸವರಾಜ ಬಾರಕೇರ ಮಾತನಾಡಿ “ನಮ್ಮ ಸೂಡಿ ಪಂಚಾಯಿತಿಯಲ್ಲಿ ಮೂರು ವರ್ಷಗಳ ಹಿಂದೆ ಕೆಲಸ ಕೊಡದಿದ್ದಾಗ ಕೂಲಿಕಾರರ ಸಂಘದಿಂದ ಹೋರಾಟ ಮಾಡಿ ಕೆಲಸ ಪಡೆದುಕೊಂಡಿದ್ದೆವೆ. ಆದರೆ ಈ ವರ್ಷ ಯಾವುದೇ ರೀತಿಯ ಕೆಲಸ ಕೊಡದೆ ಬ್ರಷ್ಟಾಚಾರದಲ್ಲಿ ಪಂಚಾಯಿತಿ ಮುಳುಗಿದೆ. ಹಾಗಾಗಿ ನಾವು ಮತ್ತೆ ಹೋರಾಟದ ಮೂಲಕವೇ ಕೆಲಸವನ್ನು ಪಡೆದು ಆಡಳಿತದ ಭ್ರಷ್ಟಾಚಾರ ಬಯಲಿಗೆ ತರುತ್ತೆವೆ” ಎಂದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಕಾಳಸಂತೆಯಲ್ಲಿ ಪಡಿತರ ಅಕ್ಕಿ ಸಾಗಣೆ ;ವಾಹನ ಜಪ್ತಿ ಮೂವರ ಬಂಧನ
ಪಿ ಡಿ ಓ ಅಧಿಕಾರಿಗಳು ಮನವಿ ಸ್ವೀಕರಿಸಿ, “ನಿಮ್ಮ ಕೂಲಿ ಕೆಲಸದ ಬಗ್ಗೆ ಎಂಟು ದಿನಗಳಲ್ಲಿ ಕೂಲಿಕಾರರ ವಿಶೇಷ ಸಭೆ ಕರೆದು ಸಮಸ್ಯೆಗಳನ್ನು ಚರ್ಚಿಸಿ ಕೆಲಸವನ್ನು ಕೋಡುತ್ತೆವೆ” ಎಂದರು.
ಈ ಪ್ರತಿಭಟನೆಯಲ್ಲಿ ಪರಸುರಾಮ ಕೋಟಿ, ಮಂಜುನಾಥ ಆಲೂರ, ಗೀತಾ ರಾಠೋಡ, ಮಮತಾ ನಧಾಪ, ಬೀಬಿಜಾನ ನಧಾಪ, ಶರಣಮ್ಮ, ನಾಗರಾಜ್ ಬಾರಕೇರ, ಲಿಂಗರಾಜ ಕುಂಬಾರ, ಶ್ರೀಧರ ಸೋಬಾನದ, ಬಸವರಾಜ ಎ ಬಾರಕೇರ, ಬಸು ಹಾದಿಮನಿ ಇನ್ನೂ ಅನೇಕರು ಉಪಸ್ಥಿತರಿದ್ದರು.