ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ದೊಡ್ಡೂರು ಗ್ರಾಮ ವ್ಯಾಪ್ತಿಯಲ್ಲಿ ಬರುವ ಹಳ್ಳವು ಶುಕ್ರವಾರ ರಾತ್ರಿ ಸುರಿದ ಭಾರಿ ಮಳೆಯಿಂದಾಗಿ ಹಳ್ಳದ ಮೆಲ್ಭಾಗಕ್ಕೆ ನೀರು ಆವರಿಸಿಕೊಂಡ ಪರಿಣಾಮ ಸಂಚಾರ ಸ್ಥಗಿತಗೊಂಡಿದೆ.
ರಾಜ್ಯದ ಹಲವೆಡೆ ನಿರಂತರ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಲಕ್ಷ್ಮೇಶ್ವರ ಭಾಗದಲ್ಲಿಯು ಭಾರಿ ಮಳೆ ಸುರಿದ ಪರಿಣಾಮ, ದೊಡ್ಡೂರು ಹಳ್ಳದ ಮೆಲ್ಭಾಗಕ್ಕೆ ನೀರು ನುಗ್ಗಿ ವಾಹನಗಳ ಸಂಚಾರಕ್ಕೆ ತೊಂದರೆಯಾಗಿದೆ. ತಾಲೂಕಿನ ಬೆಳ್ಳಟ್ಟಿ, ಬಾಲೆಹೊಸೂರ, ಸೂರಣಗಿ ಗ್ರಾಮಗಳ ಕಡೆಗೆ ಹೋಗುವ ಮುಖ್ಯ ಮಾರ್ಗ ಮತ್ತು ರೈತರ ಹೊಲಗಳಿಗೆ ಹೋಗುವ ಮುಖ್ಯರಸ್ತೆಯಾಗಿದ್ದು, ಬಹುತೇಕ ಸಂಚಾರಕ್ಕೆ ತೊಂದರೆ ಉಂಟಾಗಿದೆ.
ಹಲವು ವರ್ಷಗಳಿಂದ ಈ ಹಳ್ಳ ಉಕ್ಕಿ ಬರುವ ಸಮಸ್ಯೆ ಎದುರಾಗುತ್ತಿದ್ದು, ಈ ಹಿಂದೆ ಸರಕಾರಿ ಬಸ್ಸು ಮುಳುಗಡೆಯಾಗಿ ರಾಜ್ಯ ಸುದ್ದಿಯಾಗಿತ್ತು. ರೈತರ ಎತ್ತು ಹಾಗೂ ಚಕ್ಕಡಿ ಮುಳುಗಿದ್ದೂ ಉಂಟು. ಇಷ್ಟೆಲ್ಲಾ ಸಮಸ್ಯೆಗಳಾದರೂ ಇಲ್ಲಿಯವರೆಗೂ ಈ ಮೇಲ್ಸೇತುವೆ ಸಮಸ್ಯೆ ಜಲ್ವಂತ ಸಮಸ್ಯೆಯಾಗಿ ಉಳದಿದೆ. ಮತ್ತು ಅಧಿಕಾರಿ ವರ್ಗ, ಶಾಸಕರು, ಸರ್ಕಾರವೂ ಕಣ್ಮುಚ್ಚಿಕೊಂಡು ಕುಳಿತಿದೆ. ಸಮಸ್ಯೆ ಪರಿಹಾರಕ್ಕೆ ಮೇಲ್ಸೇತುವೆ ಕಟ್ಟಲು ಮುಂದಾಗುತ್ತಿಲ್ಲ ಎಂದು ಸ್ಥಳಿಯರು ಆಕ್ರೋಶ ವ್ಯಕ್ತಪಡಿಸುತ್ತಾರೆ.
ಇದನ್ನು ಓದಿದ್ದೀರಾ? ಹಾವೇರಿ | ಆಕಾಶದತ್ತ ಚಿಗರಿತಲೇ ಬೇರು, ಮುತ್ತಾಯಿತಲೇ ಪರಾಕ್: ಕಾರ್ಣಿಕ ನುಡಿ
ಇನ್ನು ಈ ಭಾಗದ ಅಧಿಕಾರಿಗಳಾಗಲಿ, ಶಾಸಕರಾಗಲಿ ಅಥವಾ ಸರಕಾರವಾಗಲಿ ಮೇಲ್ಸೇತುವೆ ಕಟ್ಟಿಸುವ ಕಡೆಗೆ ಗಮನ ಹರಿಸುವರೆ? ಜನಸಾಮಾನ್ಯರ ಸಮಸ್ಯೆ ಬಗೆಹರಿಸುವರೆ? ಎಂದು ಕಾದುನೋಡಬೇಕಿದೆ.
ವರದಿ: ಮಲ್ಲೇಶ ಮಣ್ಣಮ್ಮನವರ. ಸಿಟಿಜನ್ ಜರ್ನಲಿಸ್ಟ್.