ಕಾದಂಬರಿಕಾರ ತನ್ನ ಕಾಲದ ರಾಜಕೀಯ, ತನ್ನ ಕಾಲದ ಯುಗದ ಸತ್ಯವನ್ನು ಹೇಳುವುದೇ ಆಗಿರುತ್ತದೆ. ಕಾದಂಬರಿಯಲ್ಲಿ ಪೂರ್ಣತೆ ಕಾಣ್ತುತ್ತೇವೆ. ಕಾದಂಬರಿನ್ನು ಓದಿದಾಗ ಹೌದಲ್ಲಾ, ಇದು ನನ್ನದೇ ಜೀವನ ಅಂತ ಅನಿಸುತ್ತೆದೆ. ಈ ರೀತಿ ಬರೆಯುವ ಪರಂಪರೆ ಕುವೆಂಪು ಅವರಿಂದ ಆರಂಭವಾಯಿತು ಎಂದು ಅಂಕಣಕಾರ ಐ ಜೆ ಮ್ಯಾಗೇರಿ ಹೇಳಿದರು.
ಗದಗ ಜಿಲ್ಲೆಯ ಗಜೇಂದ್ರಗಡ ಪಟ್ಟಣದಲ್ಲಿ ಸಂಗಾತ ಪುಸ್ತಕ ಮಳಿಗೆಯಲ್ಲಿ ಹಮ್ಮಿಕೊಂಡಿದ್ದ ಸಂಗಾತ ಪುಸ್ತಕ ಹಾಗೂ ಬೆರಗು ಪ್ರಕಾಶನ ಸಹಯೋಗದಲ್ಲಿ ಪುಂಡಲೀಕ ಕಲ್ಲಿಗನೂರು ಅವರ ಮನೋಜನನಿ ಹಾಗೂ “ಅಪ್ಪನ ಲೆಕ್ಕ” ಕಾದಂಬರಿಗಳ ಅವಲೋಕನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಅಕ್ಷರ ಸಂಗಾತ ಸಾಹಿತ್ಯ ಪತ್ರಿಕೆಯ ಸಂಪಾದಕ ಟಿ ಎಸ್ ಗೊರವರ ಮಾತನಾಡಿ, “ಸಮಕಾಲೀನ ರಾಜಕೀಯವು ಸಾಹಿತ್ಯಕ್ಕೆ ಕಾಲು ಚಾಚುತ್ತಿದೆ. ಸಾಹಿತ್ಯ ವಲಯದಲ್ಲಿ ಅಬ್ಬರದ ಭಾಷಣ ಜನಪ್ರಿಯ ಭಾಷಣ ಹೆಚ್ಚಾಗಿದೆ. ಲೇಖಕನ ಕೃತಿಯನ್ನು ಹತ್ತಾರು ಜನರು ಓದುವುದರಿಂದ, ಹತ್ತಾರು ಗ್ರಹಿಕೆ ತಿಳಿಯುತ್ತದೆ. ಈ ರೀತಿ ಅವಲೋಕನವು ಓದುಗರಿಗೆ ಹೊಸ ನೋಟ ಕೊಡುತ್ತದೆ. ಹಾಗೆಯೇ ಲೇಖಕರಿಗೂ ಹೊಸ ದೃಷ್ಟಿಕೋನ ಬೆಳೆಯಲು ಸಾಧ್ಯ” ಎಂದು ತಿಳಿಸಿದರು.
“ಧಾರವಾಡದಂತಹ ಸಾಹಿತ್ಯ ವಲಯದಲ್ಲಿ ನಡೆಸಿದಂತೆ, ಗ್ರಾಮೀಣ ಪ್ರದೇಶಗಳಲ್ಲಿಯೂ ಸಾಹಿತ್ಯ ವಲಯ ಬೆಳೆಸಬೇಕು. ಆದ್ಯತೆ ಆಸಕ್ತಿ ಬೇರೆಯಾಗಿವೆ. ಇದರಿಂದ ಬದುಕಿನ ವಿಘಟನೆ ಹೆಚ್ಚಾಗಿವೆ. ಸಾಹಿತ್ಯ ಆರೋಗ್ಯಕರ ಬದುಕು. ಇಂತಹ ಹೊಸ ಆಲೋಚನೆಗಳು ಹೆಚ್ಚುತ್ತವೆ” ಎಂದು ಹೇಳಿದರು.
ಡಾ ಬಿ ವಿ ಕಂಬಳ್ಳಾಳ ವೈದ್ಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, “ಪುಂಡಲೀಕ ಕಲ್ಲಿಗನೂರು ಅವರ ಎರಡೂ ಕಾದಂಬರಿಗಳು ಸರಾಗವಾಗಿ ಓದಿಸಿಕೊಂಡು ಹೋಗುತ್ತವೆ. ಜತೆಗೆ ಕುತೂಹಲ ಹುಟ್ಟಿಸುವ ಕಾದಂಬರಿಗಳಾಗಿವೆ” ಎಂದರು.
ಅಂಕಣಕಾರ ಐ ಜೆ ಮ್ಯಾಗೇರಿ ಅವರು ಕಾದಂಬರಿ ಸಾಹಿತ್ಯ ಕುರಿತು ಮಾತನಾಡಿ, “ಕನ್ನಡ ಕಾದಂಬರಿ ಸಾಹಿತ್ಯ ಪರಂಪರೆ ವಿಶಿಷ್ಟವಾಗಿದೆ. ಕನ್ನಡದಲ್ಲಿ ಮುದ್ರಾಮಂಜೂಸನಿಂದ ಹಿಡಿದು ಇಲ್ಲಿಯವರೆಗೆ ಕನ್ನಡ ಕಾದಂಬರಿ ಪರಂಪರೆ ಬೆಳೆದುಕೊಂಡು ಬಂದಿದೆ. ವಡ್ಡರಾಧನೆ ಕಥೆಗಳು ಮಹಾಭಾರತ ಕಥೆಗಳನ್ನು ಅಂಟಿಕೊಂಡು ಬಂದಂತಹವುಗಳು” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ತುಮಕೂರು ಜಿಲ್ಲಾಡಳಿತ ನಿರ್ಲಕ್ಷ್ಯ; ರಾಜಕಾಲುವೆ ಹೂಳು ತೆಗೆಯಲು ಮುಂದಾದ ರೈತ
ಮನೋಜನನಿ ಹಾಗೂ ಅಪ್ಪನ ಲೆಕ್ಕ ಕಾದಂಬರಿಗಳ ಕುರಿತು ಕವಿಯತ್ರಿ ಶಿಲ್ಪಾ ಮ್ಯಾಗೇರಿ, ಕವಿ ಮೌನೇಶ ನವಲಹಳ್ಳಿ, ಪ್ರಬಂಧಕಾರರು ಮಹಾಂತೇಶ ಹಿರೇಕುರುಬರ, ಶಿಕ್ಷಕರು ಗಣೇಶ್ ಬುಟ್ಟಾನವರ, ಪ್ರಾದ್ಯಪಕರು ಬಿ ವಿ ಮುನವಳ್ಳಿ ಅವರು ಅವಲೋಕನ ಮಾಡಿದರು.
ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ ಬಿ ಎ ಕೆಂಚರೆಡ್ಡಿ, ಕೃತಿಕಾರರು ಪುಂಡಲೀಕ ಕಲ್ಲಿಗನೂರು ಹಾಗೂ ಸಾಹಿತ್ಯ ಆಸಕ್ತರು ಇದ್ದರು.
