ಗದಗ | ನಿರಂತರ ಕೃಷಿ ಕಾಯಕ ಮಾಡುವವರಿಗೆ ಬಡತನವಿಲ್ಲ: ಭೀರಪ್ಪ ವಗ್ಗಿ

Date:

Advertisements

“ನಿರಂತರವಾಗಿ ಕೃಷಿ ಕಾಯಕ ಮಾಡುವ ಮನೋತ್ಸರ್ಯ ರೈತರಿಗೆ ಬಡತನವಿಲ್ಲ. ಎಂದು ವಿಜಯಪುರ ಜಿಲ್ಲೆ ಇಂಡಿ ತಾಲೂಕ ಸಾಂಬಾದ ಬಿಲೇನಿಯರ್ ಫಾರ್ಮರ್ ಆಪ್ ಇಂಡಿಯಾ ಖ್ಯಾತಿಯ ರೈತ ಭೀರಪ್ಪ ವಗ್ಗಿ ಹೇಳಿದರು. 

ಗದಗ ಪಟ್ಟಣದಲ್ಲಿ ದುರ್ಗಾದೇವಿ ಕೋ-ಆಪ್ ಕ್ರೆಡಿಟ್ ಲಿ ಸೊಸೈಟಿಯ ೨೦೨೫ ನೇ ಸಾಲಿನ ೨೧ನೆ ವರ್ಷದ ವಾರ್ಷಿಕ ಸಭೆಯಲ್ಲಿ ದುರ್ಗಾದೇವಿ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಿದ ರೈತರ ಸಮ್ಮಾನ ಸಮಾರಂಭ ಕಾರ್ಯಕ್ರಮದಲ್ಲಿ ಸತ್ಕಾರ ಸ್ವೀಕರಿ ಅವರು ಮಾತನಾಡಿದರು.

“ನನಗೆ ಕೃಷಿ ವಿಜ್ಞಾನಿಯ ವಿಜ್ಞಾನಿಯಂಬ ಪ್ರಶಸ್ತಿಯನ್ನು ದುರ್ಗಾದೇವಿ ಕೋ-ಆಪ್ ಕ್ರೆಡಿಟ್ ಸೊಸಾಯಿಟಿಯವರು ನೀಡಿದ್ದೀರಿ. ಇದಕ್ಕೆ ನಾನು ಅರ್ಹ ಹೌದೋ ಅಲ್ಲ ಎಂಬುದು ನನಗೆ ತಿಳಿಯುತ್ತಿಲ್ಲ. ಭೂತಾಯಿಯ ಸೇವೆ ಮಾಡಲೇಂದೇ ಈ ಭವದಲ್ಲಿ ಬಂದಿದ್ದೇನೆ ಉಸಿರಿರುವರೆಗೂ ದುಡಿಯುದೊಂದೇ ನನ್ನ ಕಾಯಕ. ಪ್ರಾಮಾಣಿಕವಾಗ ಭೂತಾಯಿ ಮಡಿಲಲ್ಲಿ ಕೆಲಸ ಮಾಡಿದ ರೈತರಿಗೆ ದುಃಖ ಎಂಬುದಿಲ್ಲ” ಎಂದರು.

Advertisements

“ಯಾವದೋ ಕಾರಣ ತೋರಿ ನನಗೆ ಒಳ್ಳೆಯದಾಗಿಲ್ಲ ಎಂದು ರೈತರು ಎಂದು ಹೇಳಬಾರದು. ಮನುಷ್ಯನಿಗೆ ಅಸಾಧ್ಯವಾದದ್ದು ಎನೂ ಇಲ್ಲ ಎಂಬುದಕ್ಕೆ ನಾನೇ ಸಾಕ್ಷಿ. ಕೇವಲ ೩ ಎಕರೆ ಜಮೀನಿನಲ್ಲಿ ದುಡಿದೆ ಶ್ರಮಪಟ್ಟೆ, ಹೆದರಿಲಿಲ್ಲ, ಧೃತಿಗೆಡಲಿಲ್ಲ, ದೇವರ ಕೃಪೆ ಭೂತಾಯಿಯ ಒಲುಮೆ ಈಗ ನಾನು ೧೨೫ ಎಕರೆ ಜಮೀನುದಾರ ಎಂದು ಹೇಳಿಕೊಳ್ಳಲು ನನಗೆ ತುಂಬಾ ಹೆಮ್ಮೆ ಅನಿಸುತ್ತದೆ. ಈ ನಿಟ್ಟಿನಲ್ಲಿ ರೈತರು ದುಡಿಮೆಯಲ್ಲಿ ಮಗ್ನರಾಗಬೇಕು. ಭೂತಾಯಿ ನಮ್ಮನ್ನೆಂದೂ ಕೈ ಬಿಡುವುದಿಲ್ಲ” ಎಂದರು.

“ಅಕಾಲಿಕ ಮಳೆ, ಅತೀವೃಷ್ಟಿ, ಅನಾವೃಷ್ಟಿಯ ಮದ್ಯದಲ್ಲೂ ನಮ್ಮ ದೃಷ್ಟಿ ಮಾತ್ರ ದುಡಿಮೆಯತ್ತ ಇರಬೇಕು. ದೇವರ ಕೃಪೆ ಇದ್ದೆ ಇರುತ್ತದೆ. ಧೃತಿಗೆಡದೆ ಕೃಷಿ ಕಾರ್ಯ ಮಾಡಿದರೆ ಒಂದಿಲ್ಲೊಂದು ದಿನ ಗೆಲುವು ಖಚಿತ” ಎಂದು ರೈತ ಭೀರಪ್ಪ ತಮ್ಮ ಅನುಭವ ಮತ್ತು ಮನದಾಳದ ಮಾತನ್ನು ಹಂಚಿಕೊಂಡು, ಸತ್ಕರಿಸಿ ಗೌರವಿಸಿದ ಶ್ರೀ ದುರ್ಗಾದೇವಿ ಕೋ-ಆಪ್ ಕ್ರೆಡಿಟ್ ಸೊಸಾಯಿಟಿಯ ಎಲ್ಲ ಬಳಗದವರಿಗೂ ಅಭಿನಂದಿಸಿದರು.

ಗದಗ ಸಮೀಪದ ಕಳಸಾಪೂರ ಗ್ರಾಮದ ರಮೆಶ ಚವ್ಹಾಣ ಹಾಗೂ ಗದುಗಿನ ಹನುಮಂತಪ್ಪ ಕೋಟೆಣ್ಣವರ ಅವರಿಗೂ ಈ ಸಂದರ್ಭದಲ್ಲಿ ಸತ್ಕರಿಸಿ ಅವರೀರ್ವರಿಗೂ ಕ್ರಿಮಿನಾಶಕ ಸಿಂಪಡಿಸುವ ಪಂಪ್‌ನ್ನು ಸೊಸಾಯಿಟಿಯವರು ರೈತರಿಗೆ ಕೊಡುಗೆಯಾಗಿ ನೀಡಿದರು.

ಹಿರಿಯ ಸಾಹಿತಿಗಳಾದ ಐ. ಕೆ. ಕಮ್ಮಾರ ಅವರು ಭೀರಪ್ಪ ಅವರ ಪರಿಚಯ ಮಾಡಿದರು. ಸೊಸಾಯಿಟಿ ಅಧ್ಯಕ್ಷ ಎಂ. ಎಸ್. ಪಾಟೀಲ, ರಮೇಶ ಹಾಗೂ ಹನಮಂತಪ್ಪ ಅವರನ್ನು ಪರಿಚಯಿಸಿದರು. ವೇದಿಕೆ ಮೇಲೆ ದುರ್ಗಾದೇವಿ ಕೋ-ಆಪ್ ಸೊಸಾಯಿಟಿ ಅಧ್ಯಕ್ಷ ಎಂ. ಎಸ್. ಪಾಟೀಲ, ಉಪಾಧ್ಯಕ್ಷ ಎಸ್. ಕೆ. ತಗ್ಗಿನಮಠ ನಿರ್ದೇಶಕ ವ್ಹಿ. ಸಿ. ಬಳ್ಳೊಳ್ಳಿ, ಎಸ್. ಜಿ. ರೇವಣಕರ, ವ್ಹಿ. ಜಿ. ಬೆಟದೂರ, ಆರ್. ಸಿ. ಹೊನ್ನಗುಡಿ, ಆರ್. ಡಿ. ರಾಯ್ಕರ, ಎಸ್. ಎಸ್. ಚವ್ಹಾಣ, ಜೆ. ಎನ್. ಬ್ಯಾಟಿ, ಶ್ರೀಮತಿ ಎಲ್. ಟಿ. ಬೇಂದ್ರೆ, ಶ್ರೀಮತಿ ಎಸ್. ಆರ್. ಉಮಚಗಿ, ಕಾರ್ಯನಿರ್ವಾಹಣೆ ಅಧಿಕಾರಿಗಳಾದ ಬಸವರಾಜ ಕೋರಿ ಉಪಸ್ಥಿತರಿದ್ದರು ಶಾಲಾ ಮಕ್ಕಳಿಂದ ಪ್ರಾರ್ಥನೆಗೀತೆ ಜರುಗಿತು. ಶ್ರೀಮತಿ ವಿಜಯಲಕ್ಷ್ಮಿ ಹೂಗಾರ ಸ್ವಾಗತಿಸಿದರು. ದೀಪಾ ಗೋಟೂರ, ಕಾರ್ಯಕ್ರಮ ನಿರೂಪಿಸಿದರು. ಆರ್. ಡಿ. ರಾಯ್ಕರ ವಂದಿಸಿದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಶಿರಸಿ | ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದ ಬೈಕ್; ಸ್ಥಳದಲ್ಲಿಯೇ ಯುವಕನ ದಾರುಣ ಸಾವು

ಶಿರಸಿ ಮಾರಿಕಾಂಬಾ ಸರ್ಕಾರಿ ಪ್ರೌಢಶಾಲಾ ಮುಂಭಾಗದಲ್ಲಿ ಇಂದು ಮಧ್ಯಾಹ್ನ ಸಂಭವಿಸಿದ ಭೀಕರ...

ಬೀದರ್‌ | ಸರ್ಕಾರಿ ಶಾಲೆ ಉಳಿದರೆ ಕನ್ನಡ ಉಳಿಯಲು ಸಾಧ್ಯ : ಸುಭಾಷ ರತ್ನ

ಗಡಿ ಭಾಗದ ಜಿಲ್ಲೆಗಳಲ್ಲಿ ಕನ್ನಡ ಸರ್ಕಾರಿ ಶಾಲೆಗಳು ಉಳಿದರೆ ಮಾತ್ರ ಬಡಮಕ್ಕಳಿಗೆ...

ತಾಳಿಕೋಟೆ | ಬೀಡಾಡಿ ದನಗಳಿಗೆ ರಸ್ತೆಗಳೇ ಆಶ್ರಯ ತಾಣಗಳು; ಪರ್ಯಾಯ ವ್ಯವಸ್ಥೆಗೆ ಸಾರ್ವಜನಿಕರ ಒತ್ತಾಯ

ವಿಜಯಪುರದ ತಾಳಿಕೋಟೆ ನಗರದ ರಸ್ತೆಗಳೇ ಬೀಡಾಡಿ ದನಗಳ ಆಶ್ರಯ ತಾಣಗಳಾಗಿವೆ. ರಾಜ್ಯ...

ರಾಯಚೂರು | ನವಜಾತ ಶಿಶು ಪತ್ತೆ : ಜಿಲ್ಲೆಯಲ್ಲಿ ಮೂರು ಪ್ರಕರಣಗಳು

ಮಸ್ಕಿ ತಾಲ್ಲೂಕಿನ ತೊರಣದಿನ್ನಿ ಪ್ರಾಥಮಿಕ ಆರೋಗ್ಯ ಕೇಂದ್ರದ ಹಿಂಭಾಗದಲ್ಲಿ ನವಜಾತ ಶಿಶುವಿನ...

Download Eedina App Android / iOS

X