ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಪಿಎಸ್ಐ ನಾಗರಾಜ್ ಗಡದ ಅವರಿಗೆ ಜಯ ಕರ್ನಾಟಕ ಜನಪರ ವೇದಿಕೆ ವತಿಯಿಂದ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ರಾಜ್ಯ ಉಪಾಧ್ಯಕ್ಷರು ಹಾಲಪ್ಪ ವರವಿ, “ಸಮಾಜವನ್ನು ಸುವ್ಯವಸ್ಥಿತವಾಗಿ ಇರಲು ಪೊಲೀಸರ ಪಾತ್ರ ಬಹಳ ಮುಖ್ಯ” ಎಂದರು.
ಸನ್ಮಾನದಲ್ಲಿ ಜಿಲ್ಲಾ ಗೌರವಾಧ್ಯಕ್ಷರಾದ ಸದಾನಂದ ನಂದಣ್ಣೆವರ್, ಲಕ್ಷ್ಮೇಶ್ವರ ತಾಲೂಕ್ ಅಧ್ಯಕ್ಷ ಮಾಲತೇಶ್ ರಗಟಿ, ಕಾರ್ಯಧ್ಯಕ್ಷರಾದ ನಿಂಗಪ್ಪ ರಗಟಿ, ಸಿದ್ದಪ್ಪ ಹಡಗಲಿ, ಮಂಜು ಗಾಣಿಗೇರ, ಕುಮಾರ್ ಬೆಟಗೇರಿ, ಮಾದೇವಪ್ಪ ಅಕ್ಕಿ, ಜಗದೀಶ್ ಗುಂಜಳ, ಮಹಮ್ಮದ್ ಅಲಿ ಸನದಿ, ನಾಗೇಶಲಮಾಣಿ, ಇಮಾಮಸಾಬ ಆದರಹಳ್ಳಿ ಇನ್ನು ಅನೇಕ ಕಾರ್ಯಕರ್ತರು ಹಾಜರಿದ್ದರು .