ಸಿಡಿಲು ಬಡಿದು ಹೊಲದಲ್ಲಿ ಕಟ್ಟಿದ ಎರಡು ಎತ್ತುಗಳು ಸಾವನ್ನಪ್ಪಿರುವ ದುರ್ಘಟನೆ ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಉಂಡೇನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಅಕಾಲಿಕ ಮಳೆ ಸುರಿಯುತ್ತಿದ್ದು, ಗುಡುಗು-ಸಿಡಿಲು ಕೂಡ ಹೆಚ್ಚಾಗಿದೆ. ಉಂಡೇನಹಳ್ಳಿ ಗ್ರಾಮದ ಹನಮಂತಪ್ಪ ಲಮಾಣಿ ಅವರು ತಮ್ಮ ಹೊಲದಲ್ಲಿ ಮರದ ಕೆಳಗೆ ಎತ್ತುಗಳನ್ನು ಕಟ್ಟಿದ್ದರು. ಅವುಗಳಿಗೆ ಸಿಡಿಲು ಬಡಿದಿದ್ದು, ಸಾವನ್ನಪ್ಪಿವೆ.
ಎತ್ತುಗಳು ಸುಮಾರು ಒಂದೂವರೆ ಲಕ್ಷ ಬೆಲೆ ಬಾಳುತ್ತಿದ್ದವು ಎಂದು ಹೇಳಲಾಗಿದ್ದು, ಎತ್ತುಗಳನ್ನು ಕಳೆದುಕೊಂಡ ರೈತ ಹಣಮಂತಪ್ಪ ಕಂಗಾಲಾಗಿದ್ದಾರೆ.
ವರದಿ : ಮಲ್ಲೇಶ ಮಣ್ಣಮ್ಮನವರ, ಸಿಟಿಜನ್ ಜರ್ನಲಿಸ್ಟ್ ಲಕ್ಷ್ಮೇಶ್ವರ