ಗದಗ ಜಿಲ್ಲೆಯ ಮುಂಡರಗಿ ಪುರಸಭೆ ವ್ಯಾಪ್ತಿಯಲ್ಲಿ ಬರುವ ಎಸ್‌ಎಫ್‌ಸಿ ವಿಶೇಷ ಅನುದಾನ ಕಾಂಗ್ರೆಸ್ ವಾರ್ಡ್‌ಗಳಿಗೆ ಹಂಚಿಕೆಯಾಗದೆ ಅವೈಜ್ಞಾನಿಕವಾಗಿ ಬಳಕೆ ಮಾಡುತ್ತಿದ್ದು, ಜಿಲ್ಲಾ ಉಸ್ತುವಾರಿ ಸಚಿವರು ತನಿಖೆಗೆ ಒಳಪಡಿಸಬೇಕು ಎಂದು ಪುರಸಭೆ ಸದಸ್ಯ ಸಂತೋಷ್ ಹಿರೇಮನಿ ಮನವಿ ಮಾಡಿದರು.
ಪತ್ರಿಕೆ ಹೇಳಿಕೆ ನೀಡಿರುವ ಅವರು, “ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಅನುದಾನವನ್ನು ಸರಿಸಮವಾಗಿ ಹಂಚಿಕೆ ಮಾಡಿ, ಪ್ರತಿ ವಾರ್ಡ್‌ಗಳಿಗೆ ನ್ಯಾಯ ಒದಗಿಸಬೇಕು. ಮುಂಡರಗಿ ಪುರಸಭೆ ವ್ಯಾಪ್ತಿಯಲ್ಲಿ ಬರುವ ಶಿರೋಳ ಗ್ರಾಮದ ಹತ್ತಿರವಿರುವ 25 ಎಕರೆ ಜಮೀನಿನ ಹಕ್ಕುಪತ್ರ ಬಹುಬೇಗನೆ ಬಡವರಿಗೆ ಹಂಚಿಕೆ ಆಗಬೇಕು. ಸುಮಾರು ವರ್ಷಗಳಾದರೂ ಬಡವರು ನೆಲೆಗೊಳ್ಳಲು ಆಶ್ರಯ ಇಲ್ಲದಂತಾಗಿದೆ” ಎಂದು ಬೇಸರ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ? ಗದಗ | ದಲಿತ ಚಳವಳಿ- 50; ನ.23, 24ರಂದು ಸಮಾವೇಶ ನಡೆಸಲು ನಿರ್ಧಾರ
“ಜಿಲ್ಲಾಧಿಕಾರಿಯವರು ಮತ್ತು ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಂಡು ಬಡವರಿಗೆ ವೈಜ್ಞಾನಿಕವಾಗಿ ಮೀಸಲಾತಿ ಪ್ರಕಾರ ಹಂಚಿಕೆಯಾಗಬೇಕು. ಒಂದು ವೇಳೆ ಕ್ರಮ ಕೈಗೊಳ್ಳದಿದ್ದರೆ ಪುರಸಭೆ ಎದುರು ಹೋರಾಟ ಕೈಗೊಳ್ಳಲಾಗುವುದು” ಎಂದು ಮುಂಡರಗಿ ಪುರಸಭೆ ಸದಸ್ಯ ಸಂತೋಷ್ ಹಿರೇಮನಿ ಎಚ್ಚರಿಕೆ ನೀಡಿದರು.
