ಗದಗ | ಖಾಸಗಿ ಶಾಲೆಗಳಿಗೆ ಸೆಡ್ಡು ಹೊಡೆದ ಹಳ್ಳಿಯ ಸರ್ಕಾರಿ ಶಾಲೆ

Date:

Advertisements

ಸರ್ಕಾರಿ ಕನ್ನಡ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ದೊರೆಯುವುದಿಲ್ಲವೆಂದು ಪೋಷಕರು ತಮ್ಮ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಸೇರಿಸಿ, ಶಿಕ್ಷಣವನ್ನು ಖರೀದಿಸುತ್ತಿದ್ದಾರೆ. ಖಾಸಗಿ ಶಾಲೆಗಳು ತಲೆ ಎತ್ತಿದಂತೆ, ಸರ್ಕಾರ ಶಾಲೆಗಳು ಮುಳುಗುತ್ತಿವೆ. ಇಂತಹ ಹೊತ್ತಿನಲ್ಲಿ, ಖಾಸಗಿ ಶಾಲೆಗಳಿಗೆ ಸೆಡ್ಡು ಹೊಡೆದು ತಲೆ ಎತ್ತಿ ಮರೆಯುತ್ತಿದೆ ಗದಗ ಜಿಲ್ಲೆಯ ಅಸುಂಡಿ ಗ್ರಾಮದ ಸರ್ಕಾರಿ ಶಾಲೆ.

ಖಾಸಗಿ ಶಾಲೆಗೆ ಸೆಡ್ಡು ಹೊಡೆದು ಸರ್ಕಾರಿ ಶಾಲೆ, ಅದರಲ್ಲೂ ಹಳ್ಳಿಯಲ್ಲಿರುವ ಶಾಲೆ ಅಭಿವೃದ್ಧಿ ಕಾಣುವುದು ಇವತ್ತಿನ ದಿನಗಳಲ್ಲಿ ಅಷ್ಟು ಸುಲಭವಲ್ಲ ಎಂಬ ಮಾತುಗಳಿವೆ. ಅಂತಹ ಮಾತಿಗೆ ಕಿವಿಗೊಡದೆ ನಿಂತಿದೆ ಅಸುಂಡಿ ಸರ್ಕಾರಿ ಶಾಲೆ. ಇಲ್ಲಿನ ಶಿಕ್ಷಕರು, ಎಸ್‌ಡಿಎಂಸಿ, ಪೋಷಕರು ಹಾಗೂ ಗ್ರಾಮಸ್ಥರು ಕಾಳಜಿ, ಶಿಸ್ತು, ಆತ್ಮವಿಶ್ವಾಸ, ಇಚ್ಛಾಸಕ್ತಿಯಿಂದಾಗಿ ಆ ಶಾಲೆ ರಾಜ್ಯ ಮಟ್ಟದಲ್ಲಿ ಗಮನ ಸೆಳೆಯುತ್ತಿದೆ.

ಎಲ್ಲಡೆಯಂತೆ ಅಸುಂಡಿ‌ ಗ್ರಾಮದಲ್ಲೂ ಜನರ ನಡುವೆ ರಾಜಕೀಯ ವೈಮನಸ್ಸುಗಳಿವೆ. ಆದರೂ, ಶಾಲೆಯ ಅಭಿವೃದ್ಧಿ ವಿಷಯದಲ್ಲಿ ಅವರೆಲ್ಲರೂ ಒಟ್ಟಾಗಿಒ ನಿಂತು ಶಾಲೆಯ‌ ಅಭಿವೃದ್ಧಿ ಕೆಲಸಕ್ಕೆ ಮುಂದಾಗುತ್ತಾರೆ. ಗ್ರಾಮ‌ ಪಂಚಾಯತಿ, ತಾಲೂಕು ಪಂಚಾಯತಿ, ಜಿಲ್ಲಾ ಪಂಚಾಯತಿಗಳಿಂದ ವಿಶೇಷ ಅನುದಾನ ಪಡೆದು ಸುಸಜ್ಜಿತ ಶೌಚಾಲಯಗಳನ್ನು ನಿರ್ಮಾಣ ಮಾಡಲಾಗಿದೆ. ವಿಶಾಲವಾದ ಪ್ರಾರ್ಥನಾ ಮಂದಿರ, ರಂಗ ಮಂದಿರ, ಕಂಪ್ಯೂಟರ್ ಕೊಠಡಿ, ಅಡುಗೆ ಕಟ್ಟಡ ಹೀಗೆ ಶಾಲೆಯ ಅಭಿವೃದ್ಧಿಗೆ ಸ್ವತಃ ಊರಿಗೆ ಊರೆ ನಿಂತು ಕೆಲಸ ಕಾರ್ಯಕಾರ್ಯಗಳನ್ನು ನಿರ್ವಹಿಸುತ್ತಿದೆ.

Advertisements

ಇಲ್ಲಿನ ವಿಶಾಲ ಆವರಣ, ಪರಿಸರ, ಕಲಿಕೆ ಎಲ್ಲವನ್ನು ಪರಿಗಣಿಸಿ ಈ ಶಾಲೆಯನ್ನು 2005ರಲ್ಲಿ ಅಂದಿನ ಶಿಕ್ಷಣಾಧಿಕಾರಿ ಎ.ಎನ್ ನಾಗರಹಳ್ಳಿ ಅವರು ಕುವೆಂಪು ಮಾದರಿ ಕನ್ನಡ ಶಾಲೆಯನ್ನಾಗಿ ಘೋಷಿಸಿದ್ದರು. ಸರ್ಕಾರದಿಂದ ವಿಶೇಷ ಅನುದಾನ ಬಿಡುಗಡೆ ಮಾಡಿಸಿದ್ದರು. ಶಾಲೆಯ ಮುಖ್ಯೋಪಾಧ್ಯಾಯರು, ಶಿಕ್ಷಕರು ಹಾಗೂ ಎಸ್‌ಡಿಎಂಸಿ ಸದಸ್ಯರು ಸೇರಿ ಸಮಿತಿ ರಚಿಸಿಕೊಂಡು, ಶಾಲೆಯ ಅಭಿವೃದ್ಧಿಗಾಗಿ ಅನುದಾನವನ್ನು ಬಳಕೆ ಮಾಡಿ, ಶಾಲೆಯ ಸುತ್ತಲು ಕಾಂಪೌಂಡ್, ವಿಶಾಲವಾದ ರಂಗಮಂದಿರ, ಪ್ರಾರ್ಥನಾ ಮಂದಿರಗಳನ್ನು ಕಟ್ಟಿದ್ದರು.

ಶಾಲೆ1

ಶಾಲೆಯಲ್ಲಿ ಉತ್ತಮ ಪರಿಸರ

ಸುಮಾರು 10 ವರ್ಷಗಳ ಹಿಂದೆ ಗ್ರಾಮ ಪಂಚಾಯತಿಯವರು ಹಳ್ಳಿಗಳಿಗೆ ಕೊಟ್ಟು ಉಳಿದ ಸಾಗ್ವಾನಿ ಗಿಡಗಳನ್ನು ತಂದು ಶಿಕ್ಷಕರು ಶಾಲೆಯ ಆವರಣದಲ್ಲಿ ನೆಟ್ಟಿದ್ದರು. ಇಂದು ಅವುಗಳು ಎತ್ತರವಾಗಿ ಬೆಳೆದು ಮಕ್ಕಳು ಗಿಡಮರಗಳ ನೆರಳಿನಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ. ಶಾಲೆಯ ಶಿಕ್ಷಕರು ಊರಿನ ಜನರ ಸಹಾಯದಿಂದ ಶಾಲೆಯ ಆವರಣದಲ್ಲಿ 750ಕ್ಕೂ ಹೆಚ್ಚು ಗಿಡ ಮರಗಳನ್ನು ಬೆಳೆಸಿದ್ದಾರೆ. ಇದರಿಂದ ಮಕ್ಕಳಿಗೆ ಉತ್ತಮ ಶಿಕ್ಷಣದ ಜೊತೆಗೆ ಕೃಷಿಯ ಚಟುವಟಿಕೆ ವಿಧಾನ ಕಲಿಯುವುದರೊಂದಿಗೆ ಪರಿಸರ ಕಾಳಜಿ ಮಕ್ಕಳಲ್ಲಿ ಮೂಡಿದೆ.

ಪಠ್ಯೇತರ ಚಟುವಟಿಕೆಗಳಿಗೆ, ಕ್ರೀಡೆಗೆ ಪ್ರೋತ್ಸಾಹ

ಈ ಶಾಲೆಯ ಮಕ್ಕಳಿಗೆ ಶಿಕ್ಷಕರು ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ‌ ಮಕ್ಕಳನ್ನು ಪ್ರೋತ್ಸಾಹಿಸುತ್ತಾರೆ. ಮಕ್ಕಳಿಗೆ ಕೃಷಿ, ಪರಿಸರ ಕಾಳಜಿ, ಅಭಿನಯ, ಕ್ರೀಡೆ, ಸ್ಪರ್ಧಾತ್ಮಕ ಮನೋಭಾವ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಅಸಕ್ತಿ ಮೂಡಿಸುತ್ತಾರೆ. ಶಾಲೆಯ ಮಕ್ಕಳು ಕಬಡ್ಡಿ, ಕೊ ಕೊ, ಹಾಕಿ ಹಾಗೂ ಓಟ ಕ್ರೀಡೆಗಳಲ್ಲಿ ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಸಾಧನೆ ಮಾಡಿದ್ದಾರೆ. ಬಂಗಾರದ ಪದಕ ಪಡೆದ ಅಂತರ್ ರಾಷ್ಟ್ರೀಯ ಕುಸ್ತಿ ಪಟು ಪ್ರೇಮಾ ಹುಚ್ಚಣ್ಣವರ್ ಕೂಡ ಇದೇ ಶಾಲೆಯಲ್ಲಿ‌ ಕಲಿತದ್ದು, ಸರಕಾರಿ ಕನ್ನಡ ಶಾಲೆಯ ಹೆಮ್ಮೆ.

ಕಂಪ್ಯೂಟರ್ ಮುಲಕ ವಿದ್ಯಾರ್ಥಿಗಳಿಗರ ಶಿಕ್ಷಣ

ಈ ಶಾಲೆಯಲ್ಲಿ ಕಂಪ್ಯೂಟರ್ ಕೊಠಡಿ ಇದ್ದು ಅದರಲ್ಲಿ ಹದಿನೈದು ಕಂಪ್ಯೂಟರ್ ಒಳಗೊಂಡಿದೆ. ಕಂಪ್ಯೂಟರ್ ಮೂಲಕ ಶಿಕ್ಷಣವನ್ನು ಮಕ್ಕಳು ಕಲಿಯುತ್ತಾರೆ. ವಿಜ್ಞಾನ, ಸಮಾಜ ವಿಜ್ಞಾನ, ಗಣಿತ ಎಲ್ಲ ವಿಷಯಗಳನ್ನು ಕಂಪ್ಯೂಟರ್, ಪ್ರೊಜೆಕ್ಟ್ ಮೂಲಕ ಮಕ್ಕಳಿಗೆ ಶಿಕ್ಷಣ ಒದಗಿಸಲಾಗುತ್ತದೆ. ಇದರಿಂದ ಮಕ್ಕಳು ಆಸಕ್ತಿಯಿಂದ ಕಲಿಯುತ್ತಾರೆ ಎಂದು ವಿಜ್ಞಾನ ಶಿಕ್ಷಕರು ವಿ ಎಲ್ ಶಾಂತಗೇರಿ ಹೇಳುತ್ತಾರೆ.

ಮಕ್ಕಳು ಬೆಳೆಸಿದ ತರಕಾರಿಗಳೇ ಬಿಸಿಯೂಟಕ್ಕೆ ಬಳಕೆ

ಶಾಲೆಯ ಆವರಣದಲ್ಲಿ ಶಿಕ್ಷಕರ ಸಹಾಯದಿಂದ ವಿದ್ಯಾರ್ಥಿಗಳೇ ತರಕಾರಿ ಗಿಡಗಳನ್ನು ಬೆಳೆಸಿ, ಪೋಷಿಸುತ್ತಿರುವುದು ಮಕ್ಕಳಲ್ಲಿ ಖುಷಿ ತಂದಿದೆ. ವಿದ್ಯಾರ್ಥಿಗಳು ಬೆಳೆಸಿದ ತರಕಾರಿಗಳನ್ನು ಬಿಸಿಯೂಟಕ್ಕೆ ಬಳಸಿ ಅಡುಗೆ ತಯಾರಿಸಲಾಗುತ್ತಿದೆ.

ಶಾಲೆಯ ಕುರಿತು ಈದಿನ.ಕಾಮ್‌ ಜೊತೆ ಮಾತನಾಡಿದ ಶಾಲೆಯ ದೈಹಿಕ ಶಿಕ್ಷಕ ವಸಂತ ಕಲಕಂಬಿ, “ನಾನು ಮೂವತ್ತು ವರ್ಷಗಳಿಂದ ಈ ಶಾಲೆಯ ಶಿಕ್ಷಕನಾಗಿ‌ ಸೇವೆ ಮಾಡುತ್ತಿರುವೆ. ಆಗ ಇಲ್ಲೆ ಯಾವುದೇ ಕಾಂಪೌಂಡ, ಗಿಡ ಮರಗಳು ಇರಲಿಲ್ಲ. ಶಾಲೆಯ ಕಟ್ಟಡಕ್ಕೆ ತಗೆದಿದ್ದು ದೊಡ್ಡ ದೊಡ್ಡ ಕಲ್ಲಿ ಗಣಿಗಳಿಂದ ತುಂಬಿತ್ತು, ಶಾಲೆಯ ಎಸ್.ಡಿ.ಎಮ್.ಸಿ ಸದಸ್ಯರು, ಗ್ರಾಮ ಪಂಚಾಯತಿ, ಗ್ರಾಮಸ್ಥರ ಸಹಕಾರದಿಂದ ತಗ್ಗನ್ನು ಮುಚ್ಚಿಸಿ ಶಾಲೆಯ ಸುತ್ತ ಗಿಡ ಮರಗಳನ್ನು ನೆಟ್ಟು, ಇಷ್ಟು ಎತ್ತರ ಬೆಳೆಸಿದ್ದೇವೆ. ಇದರ ಜೊತೆಗೆ ಮಕ್ಕಳು ನಮ್ಮೋಂದಿಗೆ ಜೊತೆ ಆಗಿದ್ದಾರೆ. ಇದರಿಂದ ಮಕ್ಕಳಿಗೆ ಪಠ್ಯದ ಜೊತೆಗೆ ಉತ್ತಮ ಪರಿಸರಲ್ಲಿ ಶಿಕ್ಷಣ ಪಡೆಯುವುದು ಮುಖ್ಯ. ಅಷ್ಟೇ ಅಲ್ಲ ಈ ಶಾಲೆಯಲ್ಲಿ ಮಕ್ಕಳಿಗೆ ವಿಶಾಲವಾದ ಆಟದ ಮೈದಾನ ಇದೆ. ಇಲ್ಲಿಯ ವಿದ್ಯಾರ್ಥಿಗಳು ಕ್ರೀಡೆಗಳಲ್ಲಿ ರಾಜ್ಯ ರಾಷ್ಟ್ರ ಮಟ್ಟದಲ್ಲಿ ಹೆಸರು ಮಾಡಿದ್ದು, ಈ ಶಾಲೆಯ ಹೆಮ್ಮೆ ಎಂದು‌ ಹೇಳುತ್ತಾರೆ.

ಮುಖ್ಯೋಪಾಧ್ಯಾಯರು ಬಿ.ಡಿ ಮಾದರ ಮಾತನಾಡಿ, “ನಾನು ಮೂರು ವರ್ಷಗಳಿಂದ ಸೇವೆ ಮಾಡುತ್ತಿರುವೆ. ಇಲ್ಲಿಯ ಉತ್ತಮ‌ ಕಲಿಕೆಯಿಂದ ವರ್ಷದಿಂದ ವರ್ಷಕ್ಕೆ ಮಕ್ಕಳ ಸಂಖ್ಯೆ ಹೆಚ್ಚಾಗುತ್ತಿದೆ. ಇನ್ನೂ ಈ ಶಾಲೆಯನ್ನು ಉತ್ತಮ ಸರಕಾರಿ ಶಾಲೆಯನ್ನಾಗಿ ಮಾಡುವ ಕನಸು ನಮ್ಮದಾಗಿದೆ ಎಂದು ಹೇಳಿದರು.

ಈ ಸುದ್ದಿ ಓದಿದ್ದೀರಾ?: ಅಡಿಕೆ ಬೆಳೆ | ಎಲೆಚುಕ್ಕೆ ರೋಗಕ್ಕಿಲ್ಲ ಮದ್ದು

ಗ್ರಾಮ ಪಂಚಾಯತಿ ಮಾಜಿ ಉಪಾಧ್ಯಕ್ಷ ಎಚ್.ಕೆ ಭೂಮಕ್ಕನವರ ಮಾತನಾಡಿ, “ಶಾಲೆ ಅಭಿವೃದ್ಧಿಗಾಗಿ ಸ್ಥಳಿಯ ಮಟ್ಟದಿಂದ ಹಿಡಿದು ಜಿಲ್ಲಾ ಪಂಚಾಯತಿ ವರೆಗೆ ಅನುದಾನ ಪಡೆದು ಮಕ್ಕಳಿಗೆ ಉತ್ತಮ ಶಿಕ್ಷಣ ಪಡೆಯವಲ್ಲಿ ಸಹಕಾರ ನೀಡಿದ್ದಾರೆ. ಪ್ರತಿಯೊಬ್ಬ ಮಗು ಕೂಡ ಶಿಕ್ಷಣದಿಂದ ವಂಚಿತ ಆಗಬಾರದೆಂಬ ಉದ್ದೇಶ ಇಟ್ಟುಕೊಂಡು ಶಾಲೆಗೆ, ಮಕ್ಕಳಿಗೆ ಕಲಿಕೆಗೆ ಗ್ರಾಮದ ಜನರು ಒಗ್ಗಟ್ಟಾಗಿ ನೀಲ್ಲುತ್ತೇವೆ” ಎಂದು ಹೇಳಿದ್ದಾರೆ.

ಮತ್ತಷ್ಟು ಅಭಿವೃದ್ಧಿಗೆ ಬೇಕಿದೆ ಅನುದಾನ

ಮಳೆಗಾಲ ಆರಂಭವಾಗಿದ್ದರಿಂದ ಶಾಲೆಯ ಹಳೆಯ ಕಟ್ಟಡದ ಮೇಲ್ಚಾವಣಿಯ ಹಂಚುಗಳು ಸಡಿಲಗೊಂಡು ಮಳೆಯ ನೀರು ಶಾಲೆಯ ಒಳಗಡೆಯೇ ಮಳೆ ನೀರು ಬೀಳುತ್ತಿದೆ. ಇದರಿಂದ ಮಕ್ಕಳ ಪುಸ್ತಕಗಳು ನೀರಿನಿಂತ ತೇವ ಅಸಗುತ್ತವೆ. ಸರಕಾರದವರು ಇದನ್ನು ಗಮನ ಹರಿಸಿ ಸರಿಪಡಿಸಬೇಕು. ಎರಡು ಎಕರೇ ವಿಶಾಲವಾದ ಆಟದ ಮೈದಾನದ ಸುತ್ತ ಕುಳಿತುಕೊಂಡು ಆಟ ನೋಡಲು ಗ್ಯಾಲರಿ, ಪ್ರತಿ ತರಗತಿಗಳಿಗೂ ಸ್ಮಾರ್ಟ್ ಬೋರ್ಡ್, ಹಾಗೂ ಮಕ್ಕಳು ವಿಜ್ಞಾನವನ್ನು ಆಟದ ಮೂಲಕ, ಪ್ರಯೋಗದ ಮೂಲಕ ಕಲಿಯಬೆದಕು ಹಾಗಾಗಿ ವಿದ್ಯಾರ್ಥಿಗಳಿಗೆ ವಿಜ್ಞಾನ ಪಾರ್ಕ್ ಇವೆಲ್ಲವನ್ನು ಸರಕಾರದಿಂದ ಮಾಡಬೇಕು ಇದರಿಂದ ಇನ್ನೂ ಮಕ್ಕಳಲ್ಲಿ ಉತ್ತಮ ಶಿಕ್ಷಣ ನೀಡುವುದಕ್ಕೆ ಸಾಧ್ಯ ಆಗುತ್ತದೆ ಎಂದು ಶಿಕ್ಷಕರು ಹೇಳುತ್ತಾರೆ.

ಅಸುಂಡಿ ಎಂಬ ಹಳ್ಳಿಯ ಸರಕಾರಿ ಕನ್ನಡ ಶಾಲೆ ಅಭಿವೃದ್ಧಿ ಆಗಬೇಕಾದರೆ ಒಳ್ಳೆಯ ಶಿಕ್ಷಕ, ಒಳ್ಳೆಯ ಭೋದನೆಯ ಜೊತೆಗೆ ಸ್ಥಳೀಯವಾಗಿರು ಎಸ್.ಡಿ.ಎಮ್‌.ಸಿ ಸದಸ್ಯರು, ಗ್ರಾಮ ಪಂಚಾಯತಿ, ಗ್ರಾಮಸ್ಥರ ಸಹಕಾರ ವಿದ್ದರೆ ಖಾಸಗಿ ಶಾಲೆಗಳಿಗಿಂತಲು ಉತ್ತಮ ಗುಣಮಟ್ಟದ ಶಿಕ್ಷಣ ಕೊಡಲು ಸಾಧ್ಯ ಎನ್ನುವ ಮಾತಿಗೆ ಅಸುಂಡಿ ಗ್ರಾಮದ ಕುವೆಂಪು ಮಾದರಿ‌ ಕನ್ನಡ ಶಾಲೆ ಉತ್ತಮ ಉದಾಹರಣೆ ಆಗಿದೆ. ಇದನ್ನೆ ಎಲ್ಲ ಕನ್ನಡ ಶಾಲೆಗಳಲ್ಲಿ ಅಳವಡಿಸಿಕೊಂಡಿದ್ದೆ ಆದರೆ ಖಾಸಗಿ ಶಾಲೆಗಳು ಮುಚ್ಚುವ ಸಂದರ್ಭ ಬಂದು ಕನ್ನಡ ಶಾಲೆಗಳು ಉನ್ನತ ಮಟ್ಟಕ್ಕೆ ಏರಲು ಸಾಧ್ಯವಾಗುತ್ತದೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಶರಣಪ್ಪ ಎಚ್ ಸಂಗನಾಳ
ಶರಣಪ್ಪ ಎಚ್ ಸಂಗನಾಳ
ಗದಗ ಜಿಲ್ಲೆಯ ರೋಣ ತಾಲೂಕಿನ ಸವಡಿ ಗ್ರಾಮದವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ. ಧ್ವನಿ ಶೈಕ್ಷಣಿಕ ಸಂಪನ್ಮೂಲ ಕೇಂದ್ರದಲ್ಲಿ ಒಂದಷ್ಟು ಕಾಲ ಕೆಲಸ. ಸದ್ಯ 'ಈ ದಿನ.ಕಾಮ್'ನಲ್ಲಿ ಮೀಡಿಯಾ ಕೋಆರ್ಡಿನೇಟರ್. ಓದು, ಪಕ್ಷಿ ವೀಕ್ಷಣೆ, ಕೃಷಿಯಲ್ಲಿ ಆಸಕ್ತಿ.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉಡುಪಿ | ಮಹೇಶ್‌ ಶೆಟ್ಟಿ ತಿಮರೋಡಿ ಬೆಂಬಲಿಗರ ಕಾರು ಪೊಲೀಸ್‌ ಅಧೀಕ್ಷರಕ ಕಾರಿಗೆ ಡಿಕ್ಕಿ !

ಬೆಳ್ತಂಗಡಿಯ ಸೌಜನ್ಯ ಪರ ಹೋರಾಟಗಾರ ಮಹೇಶ್‌ ಶೆಟ್ಟಿ ತಿಮರೋಡಿಯವರನ್ನು ಬ್ರಹ್ಮಾವರ ಪೊಲೀಸ್...

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

Download Eedina App Android / iOS

X