ಶಾಲಾ ಕಾಲೇಜು ವಿದ್ಯಾರ್ಥಿನಿಯರ ಮೇಲಿನ ದೌರ್ಜನ್ಯ ಹೆಚ್ಚಾಗಿದ್ದು ಗಜೇಂದ್ರಗಡ ಸುತ್ತ ಮುತ್ತ ಬರುವ ಎಲ್ಲಾ ಶಾಲಾ ಕಾಲೇಜುಗಳಲ್ಲಿ ಹಾಗೂ ಹಾಸ್ಟೇಲುಗಳಲ್ಲಿ ಕಡ್ಡಾಯವಾಗಿ ಸಿ.ಸಿ. ಕ್ಯಾಮರಾಗಳನ್ನು ಆಳವಡಿಸಬೇಕು ಮತ್ತು ಕಡ್ಡಾಯವಾಗಿ ಸೆಕ್ಯುರಿಗಾರ್ಡಗಳನ್ನು ನೇಮಿಸಬೇಕು” ಎಂದು ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಸಂಚಾಲಕ ರಜಾಕ್ ಡಾಲಾಯತ ಒತ್ತಾಯಿಸಿದರು.
ಗದಗ ಜಿಲ್ಲೆಯ ಗಜೇಂದ್ರಗಡ ಪಟ್ಟಣದ ಸುತ್ತ ಮುತ್ತ ಇರುವ ಎಲ್ಲಾ ಶಾಲಾ ಕಾಲೇಜುಗಳಿಗೆ ಮತ್ತು ಹಾಸ್ಟೇಲ್ ಗಳಲ್ಲಿ ಸಿ. ಸಿ. ಕ್ಯಾಮರಾ, ಸೆಕ್ಯುರಿಟಿ ಗಾರ್ಡ ಹಾಗೂ ರಾತ್ರಿ ವೇಳೆ ಪೋಲೀಸ್ ಗಸ್ತು ಒದಗಿಸುವಂತೆ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ತಹಸೀಲ್ದಾರರಿಗೆ ಮನವಿ ಸಲ್ಲಿಸಿ ಮಾತನಾಡಿದರು.
“ಐಡಿ ಕಾರ್ಡ ಇಲ್ಲದವರನ್ನು ಶಾಲಾ ಕಾಲೇಜುಗಳಲ್ಲಿ ಪ್ರವೇಶಕ್ಕೆ ಅವಕಾಶ ಕೊಡಬಾರದು. ಅಂತವರು ಕಂಡುಬಂದಲ್ಲಿ ಕೂಡಲೇ ಪೋಲೀಸ್ ವಶಕ್ಕೆ ಅವರನ್ನು ಒಪ್ಪಿಸಬೇಕು. ರಾತ್ರಿ ವೇಳೆ ಶಾಲಾ ಕಾಲೇಜಿನ ಆವರಣಗಳಲ್ಲಿ ಅನೈತಿಕ ಚಟುವಟಿಕೆಗಳ ತಾಣಗಳಾಗುತ್ತಿದ್ದು, ಪೋಲೀಸ್ ಗಸ್ತು ಮಾಡಿ ಅಂತವರು ಕಂಡುಬಂದಲ್ಲಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು” ಎಂದು ಕರ್ನಾಟಕ ರಕ್ಷಣಾ ವೇದಿಕೆ ಗದಗ ಜಿಲ್ಲಾ ಘಟಕದ ವತಿಯಿಂದ ಒತ್ತಾಯಿಸುತ್ತೇವೆ ಎಂದರು.
ಈ ಸುದ್ದಿ ಓದಿದ್ದೀರಾ? ವಿಜಯಪುರ | ʼಸಮುದಾಯದ ಆರೋಗ್ಯ ಕಾಪಾಡುವಲ್ಲಿ ಆಶಾ ಕಾರ್ಯಕರ್ತೆಯರ ಪಾತ್ರ ಮುಖ್ಯʼ
ಮನವಿ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಮುಖಂಡರು ಅಶೋಕ ಒದೆಗೋಳ, ಪಾಷಾ ಗಂಗಾವತಿ, ಮುತ್ತು ಪೂಜಾರ, ಮಹೇಶ ಅರಳಿಗಿಡದ, ಕನಕಪ್ಪ ಮುಲಿಮನಿ, ರಾಹುಲ್ ಗುಡ್ಡದ, ಕಲ್ಮೇಶ ಬೆನ್ನೂರು, ಷರೀಫ್ ಡಾಲಾಯತ್, ಆಕಾಶ ಬಾರಿಮನಿ, ಭಾಷಾ ಕವಲೂರು, ಬಿಬಿಜಾನ್ ಮುಜಾವರ, ಅನೇಕರು ಉಪಸ್ಥಿತರಿದ್ದರು.
