ರಾಜ್ಯದಲ್ಲಿ ವಕ್ಫ್ ಹೆಸರಿನಲ್ಲಿ ಜನರ ಹಾಗೂ ಮಠಾಧೀಶರ ಆಸ್ತಿಯ ಮೇಲೆ ಕಣ್ಣು ಹಾಕಿರುವುದು ಖಂಡನಿಯವಾಗಿದ್ದು, ಇದಕ್ಕೆ ಸರ್ಕಾರವೇ ಹೊಣೆಯಾಗಿದೆ. ಕೂಡಲೇ ವಕ್ಫ್ ಕಾಯ್ದೆಯನ್ನು ತಿದ್ದುಪಡಿ ಮಾಡಿ ಜನಸಾಮಾನ್ಯರ, ಮಠಮಾನ್ಯಗಳ ಆಸ್ತಿಯನ್ನು ಕೈಬಿಡಬೇಕು. ಹಾಗೂ ಚಳಿಗಾಲದ ಅಧಿವೇಶನದಲ್ಲಿ ರೈತರಿಗೆ ಬೆಂಬಲ ಬೆಲೆ ಘೋಷಿಸಬೇಕು” ಎಂದು ಕರ್ನಾಟಕ ರೈತಸೇನೆ ಉಪಾಧ್ಯಕ್ಷ ಶಿವಲಿಂಗಪ್ಪ ಭೂಪಳಾಪುರ ಆಗ್ರಹಿಸಿದರು.
ಗದಗ ಜಿಲ್ಲೆಯ ರೋಣ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕರ್ನಾಟಕ ರೈತಸೇನೆ ವತಿಯಿಂದ ವಕ್ಫ್ ಕಾಯ್ದೆ ತಿದ್ದುಪಡಿ ಹಾಗೂ ಬೆಂಬಲ ಬೆಲೆ ಘೋಷಣೆ ಮಾಡುವಂತೆ ಒತ್ತಾಯಿಸಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
“ರಾಜ್ಯದಲ್ಲಿ ರೈತ ಸಂಘಟನೆಗಳು ಸೇರಿ ಅನೇಕರು ವಕ್ಫ್ ವಿರುದ್ಧವಾಗಿ ಪ್ರತಿಭಟನೆಗಳು ನಡೆದಿವೆ. ರಾಜ್ಯದಲ್ಲಿ ವಕ್ಫ್ ಜನಸಾಮಾನ್ಯರ ಆಸ್ತಿಯಲ್ಲೂ ವಕ್ಫ್ ಎಂದು ಹೆಸರು ಕಾಣುತ್ತಿರುವುದು ಜನರಲ್ಲಿ ಆತಂಕ ಸೃಷ್ಟಿ ಮಾಡುತ್ತಿದೆ. ಹಾಗಾಗಿ ವಕ್ಫ್ ಕಾಯ್ದೆಯನ್ನು ತಿದ್ದುಪಡಿ ಮಾಡಬೇಕು” ಎಂದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಒಳಮೀಸಲಾತಿ ಜಾರಿಗೆ ಆಗ್ರಹಿಸಿ ವರುಣಾದಿಂದ ವಿಧಾನಸೌಧದವರೆಗೆ ಪಾದಯಾತ್ರೆ; ಸರ್ಕಾರಕ್ಕೆ ಎಚ್ಚರಿಕೆ
“ರೈತರು ಬೆಳೆದ ಬೆಳೆಗಳಿಗೆ ಮಾರುಕಟ್ಟೆಯಲ್ಲಿ ಸರಿಯಾದ ಬೆಲೆ ಸಿಗುತ್ತಿಲ್ಲ. ರೈತರ ಬೆಳೆನಷ್ಟದ ಪರಿಹಾರ ಬಂದಿರುವುದಿಲ್ಲ. ಕೂಡಲೇ ಬೆಳೆಪರಿಹಾರ ಬಿಡುಗಡೆ ಮಾಡಬೇಕು. ಚಳಿಗಾಲದ ಅಧಿವೇಶನದಲ್ಲಿ ಕನಿಷ್ಠ ಬೆಂಬಲ ಬೆಲೆಯನ್ನು ಘೋಷಿಸಬೇಕು” ಎಂದು ಶಿವಲಿಂಗಪ್ಪ ಒತ್ತಾಯಿಸಿದರು.
ಪತ್ರಿಕಾಗೋಷ್ಠಿಯಲ್ಲಿ ರೈತ ಮುಖಂಡರಾದ ಮಹೇಶ್ ವಿಠ್ಠಪ್ಪನವರ, ವೀರಬಸಪ್ಪ ಅಂದಾನಪ್ಪನವರ, ಆನಂದ್ ಮಲ್ಲಾಪುರ, ಮಂಜುನಾಥ್ ಮಾಳವಾಡ, ವೀರಯ್ಯ ಸುರೇಬಾನ, ಕಲ್ಲನಗೌಡ ಪಾಟೀಲ್, ವೀರಪ್ಪ ನಾಶಿಪುಡಿ ಸೇರಿದಂತೆ ಬಹುತೇಕರು ಇದ್ದರು.