ಗದಗ | ಉನ್ನತ ಅಭ್ಯಾಸ ಗೈದು ಊರಿನ ಕೀರ್ತಿ ಹೆಚ್ಚಿಸಬೇಕು: ಜಿ. ವಿ. ಹಿರೇಮಠ

Date:

Advertisements

“ಮಕ್ಕಳಲ್ಲಿ ಬೌದ್ಧಿಕ, ಮಾನಸಿಕ, ವೈಜ್ಞಾನಿಕ ಮನೋಭಾವ, ಸಾಮಾಜಿಕ ನಾಯಕತ್ವ, ಸಮಾಜ ಸೇವಾ ಗುಣ ಹೆಚ್ಚುವ ಕಾರ್ಯವಾಗಬೇಕು. ಉನ್ನತ ಅಭ್ಯಾಸ ಗೈದು ಊರಿನ ಕೀರ್ತಿ ಹೆಚ್ಚಿಸಬೇಕು. ಜೊತೆಗೆ ನಮ್ಮ ಭಾಗದ ಸಹ್ಯಾದ್ರಿ ಕಪ್ಪತಗುಡ್ಡವನ್ನು ನಾವೆಲ್ಲರೂ ರಕ್ಷಿಸಬೇಕಾಗಿದ್ದು, ಇದರ ಮಹತ್ವ ಇಡೀ ರಾಜ್ಯಕ್ಕೆ ಸಾರಬೇಕಾಗಿದೆ” ಎಂದು ಜಿ. ವಿ. ಹಿರೇಮಠ ಹೇಳಿದರು.

ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಡಂಬಳ ಗ್ರಾಮದ ತೊಂಟದಾರ್ಯ ಕಲಾಭವನದಲ್ಲಿ ಸರ್ವೋದಯ ಶೈಕ್ಷಣಿಕ ಸಾಂಸ್ಕೃತಿಕ ಹಾಗೂ ವಿವಿಧೋದ್ದೇಶಗಳ ಸಂಸ್ಥೆ ಡಂಬಳ, ಮಾನಸ ಜ್ಞಾನಾಮೖತ ತರಬೇತಿ ಕೇಂದ್ರ, ವೈಚಾರಿಕ ಸಾಹಿತ್ಯ ವೇದಿಕೆ, ಪರಿವರ್ತನಾ ಕಲಾ ತಂಡ ಉದ್ಘಾಟನೆ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

“ಪ್ರಗತಿಪರ ಚಿಂತಕರು ಗುಡದಪ್ಪ ತಳಗೇರಿ’ಯವರು ಸಮಾಜಮುಖಿ ಕಾರ್ಯಗಳು ಕಪ್ಪತಗುಡ್ಡದ ರಕ್ಷಣೆ, ಶೈಕ್ಷಣಿಕ ಸೇವೆ, ಪರಿಸರ ರಕ್ಷಣೆ ಇತ್ಯಾದಿ ಸಾಮಾಜಿಕ ಕಾರ್ಯಗಳನ್ನು  ಮಾಡುತ್ತಿರುವುದು ನಿಜಕ್ಕೂ ಶ್ಲಾಘನೀಯ” ಎಂದರು.

Advertisements

ಕವಿಗಳು,ಪ್ರಗತಿಪರ ಚಿಂತಕರು, ಸಂಸ್ಥೆಯ ಕಾರ್ಯದರ್ಶಿ ಗುಡದಪ್ಪ ತಳಗೇರಿ ಪ್ರಾಸ್ತಾವಿಕ ಮಾತನಾಡಿ, “ಸಂಸ್ಥೆಯ ಉದ್ದೇಶಗಳು ಸಾಮಾಜಮುಖಿ ಕಾರ್ಯಗಳಿಗೆ ಸದಾ ನಿಲ್ಲುತ್ತದೆ. ಊರಿನಲ್ಲಿ ಶೈಕ್ಷಣಿಕ ಪ್ರಗತಿ ಹೆಚ್ಚಿಸುವ ಕಾರ್ಯ ಆಗಬೇಕಾಗಿದೆ. ಪಾಲಕರು ಮಕ್ಕಳಲ್ಲಿ ಆತ್ಮವಿಶ್ವಾಸ, ಭರವಸೆ ತುಂಬಿ ಈ ದೇಶಕ್ಕಾಗಿ ಸೇವೆ ಮಾಡುವ ಸಾಧಕರನ್ನಾಗಿ ಮಾಡಲು ಶ್ರಮಿಸಬೇಕಾಗಿದೆ” ಎಂದರು.

ಡಿವಿಪಿ ಜಿಲ್ಲಾಧ್ಯಕ್ಷ ಸುರೇಶ್ ಛಲವಾದಿ ಮಾತನಾಡಿ, “ಶಿಕ್ಷಣ ಉಳ್ಳವರ ಸ್ವತ್ತು ಆಗುತಿದ್ದು, ಇತ್ತೀಚೆಗೆ ಅತೀ ಹೆಚ್ಚು ಪ್ರವೇಶ ಫೀ ಮಾಡಿ ಬಡವರನ್ನು ಶೈಕ್ಷಣಿಕವಾಗಿ ಹಿಂದುಳಿಯಲು ಕಾರಣವಾಗುತ್ತಿದೆ. ಈ ಸಂಧರ್ಭದಲ್ಲಿ ಅತೀ ಹೆಚ್ಚು ಫಲಾಪೇಕ್ಷವಿಲ್ಲದೇ ಗುಡದಪ್ಪರವರು ವಿದ್ಯಾರ್ಥಿಗಳ ಶಿಕ್ಷಣವನ್ನು ನೀಡಿ  ಭವಿಷ್ಯದಲ್ಲಿ ಸಾಮಾಜಿಕ, ಶೈಕ್ಷಣಿಕ, ಸಾಂಸ್ಕೃತಿಕ, ವೈಚಾರಿಕ, ದೈಹಿಕ ಬಲಗೊಳಿಸಲು ಯತ್ನಿಸುತ್ತಿದ್ದಾರೆ” ಎಂದು ಹೇಳಿದರು.

ಈ ಸಂಸ್ಥೆಯ ಅಂಗವಾದ ಮಾನಸ ಜ್ಞಾನಾಮೃತ ತರಬೇತಿ ಕೇಂದ್ರದಿಂದ ಬೇಶಿಗೆ ಶಿಬಿರದಲ್ಲಿ ಪಾಲ್ಗೊಂಡು, ಎಸ್ ಎಸ್ ಎಲ್ ಸಿಹಾಗೂ ಪಿಯುಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಪಡೆದ ವಿಧ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಬಹುಮಾನ ವಿತರಿಸಲಾಯಿತು. ಉಪನ್ಯಾಸಕರು ಕಾವೇರಿ ಭೋಲಾ, ಶ್ರೀ ಮಲ್ಲಿಕಾರ್ಜುನ ಮಡಿವಾಳರು ಮಾತನಾಡಿದರು. ಎಂ ಸಿ ಕಟ್ಟಿಮನಿ ಅವರು ಲೋಗೋ ಬಿಡುಗಡೆಗೊಳಿಸಿದರು.

ಈ ಸುದ್ದಿ ಓದಿದ್ದೀರಾ? ಹಾವೇರಿ | ಕರ್ತವ್ಯ ಲೋಪ ಎಸಗಿದ್ದಕ್ಕೆ ಪಿಡಿಒ ಅಮಾನತು

ಈ ಸಂಧರ್ಭದಲ್ಲಿ ಸಂಸ್ಥೆಯ ಅಧ್ಯಕ್ಷರು ಶ್ರೀಮತಿ ಕೆಂಚವ್ವ ಕೆಂಚಪ್ಪ ತಳಗೇರಿ, ಅಶೋಕ ತಳಗೇರಿ, ಮಾಜಿ ಸೈನಿಕರು ವಾಸಪ್ಪ ಕಾಶಬೋವಿ ಸಂಜಿವಮೂರ್ತಿ, ಶಶಿಕುಮಾರ್ ಭಾವಿಮನಿ, ಸಂಜೀವ ಮೂರ್ತಿ, ಗವಿಸಿದ್ದಪ್ಪ ಹಾದಿಮನಿ, ಅಶೋಕ ಮಾನೆ, ಮುದಕೇಶ ತಳಗೇರಿ, ಗವಿಯಪ್ಪ ಮಠದ, ಹನಮಂತ ಎಂ, ಮಲ್ಲಿಕಾರ್ಜುನ ಗೌಡಣ್ಣವರ, ಶಿವಾನಂದ ಬಂಡಿ, ಕುಮಾರ ಗೌಡಣ್ಣವರ, ಮಂಜುನಾಥ ಸಿದ್ದಣ್ಣವರ, ಮಂಜುನಾಥ ನವಲಗುಂದ, ವಿನಾಯಕ ಕುದುರಿ, ಮುತ್ತುರಾಜ ಬಿಂಕದಕಟ್ಟಿ, ಸುರೇಶ್ ತಲ್ಲೂರ, ಇನ್ನೂ ಅನೇಕರು ಉಪಸ್ಥಿತರಿದ್ದರು.

ಈದಿನ 1
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

ಬೀದರ್‌ | ಬೆಳೆ ಹಾನಿ : ಹೆಕ್ಟೇರ್‌ಗೆ ₹50 ಸಾವಿರ ಪರಿಹಾರಕ್ಕೆ ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಬೆಳೆ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ....

Download Eedina App Android / iOS

X