“ಬಹುತೇಕ ನಗರಗಳಲ್ಲಿ ಅತ್ಯಂತ ಸುಂದರವಾದ ಸುಸಜ್ಜಿತ ಉದ್ಯಾನವನಗಳು ಉಳ್ಳವರು, ಉದ್ದಿಮೆದಾರರು, ವ್ಯಾಪಾರಸ್ಥರು, ನೌಕರಸ್ಥರು ಇರುವ ಜಾಗದಲ್ಲಿ ಕಾಣಲು ಸಿಗುತ್ತವೆ. ಮದ್ಯಮ ಸಮುದಾಯ, ಬಡವರು ಇರುವ ಜಾಗದಲ್ಲಿ ಕಾಣಲು ಕಾಣಲು ಸಾಧ್ಯವಿದೆ” ಎಂದು ಕಾಂಗ್ರೆಸ್ ಪ. ಜಾತಿ ವಿಭಾಗದ ಅಧ್ಯಕ್ಷ ಬಸವರಾಜ ಎಂ ಕಡೇಮನಿ ಹೇಳಿದರು.
ಗದಗ ಪಟ್ಟಣದಲ್ಲಿ ಪತ್ರಿಕಾ ಹೇಳಿಕೆಯಲ್ಲಿ ಮಾತನಾಡಿದ ಅವರು “ಗದಗ-ಬೆಟಗೇರಿ ಅವಳಿ ನಗರದ 16, 17, 18 ನೇ ವಾರ್ಡಿನಲ್ಲಿ ಬರುವ ಜವುಳ ಗಲ್ಲಿ, ಡೋರ ಗಲ್ಲಿ, ಖಾಗದಗೆರೆ ಓಣಿ, ಗಂಗಾಪೂರ ಪೇಟೆ, ಡಿ ಸಿ ಮಿಲ್ ಹಾಗೂ ಮ್ಯಾಗೇರಿ ಓಣಿಗಳಗೆಲ್ಲ ಸುಸಜ್ಜಿತ ಉದ್ಯಾನವನ ನಿರ್ಮಾಣವಾಗಿದೆ. ಇದರಿಂದ ಸ್ಲಂ ನಿವಾಸಿಗಳಿಗೆ, ಬಡ ಜನರು, ಮಕ್ಕಳಿಗೆ ಹೆಚ್ಚು ಅನುಕೂಲವಾಗಲಿದೆ” ಎಂದರು.
“ಈ ಗಲ್ಲಿಗಳ ಮಧ್ಯ ಭಾಗದಲ್ಲಿ ಹರಿದು ಹೋಗುವ ದೊಡ್ಡ ನಾಲಾದ ಮೇಲೆ ಕಾಂಕ್ರೀಟ್ ಹಾಕಿ ಅದರ ಮೇಲೆ ಉದ್ಯಾನವನ ನಿರ್ಮಿಸಲಾಗಿದೆ. ಮಹಿಳೆಯರಿಗೆ ವಾಯುವಿಹಾರಕ್ಕಾಗಿ, ಮಕ್ಕಳ ಆಟೋಟಗಳಿಗಾಗಿ ಸುಸಜ್ಜಿತವಾದ ಗಾರ್ಡನ್ ನಿರ್ಮಾಣವಾಗಿದ್ದು, ಜನಸಾಮಾನ್ಯರಿಗೆ ಅನುಕೂಲವಾಗಿದೆ” ಎಂದರು.
“ಗದಗ ಜಿಲ್ಲಾ ಉಸ್ತುವಾರಿ ಸಚಿವರು ಎಚ್ ಕೆ ಪಾಟೀಲ್ ಅವರ ದೂರ ದೃಷ್ಟಿ ಹೊಂದಿದದ್ದು, ಈ ಭಾಗದ ಬಡಜನರ ಮೇಲೆ ಇದೆ ಹೆಚ್ಚು ಕಾಳಜಿ ಇದೆ. ಸ್ಲಂ ಪ್ರದೇಶಗಳನ್ನು ಸಹ ಪರಿವರ್ತನೆ ಮಾಡಿ ಅಲ್ಲಿ ಎಲ್ಲ ರೀತಿಯ ಸೌಲಭ್ಯಗಳನ್ನು ಕಲ್ಪಿಸಿದ ಕೀರ್ತಿ ಸಚಿವರಿಗೆ ಸಲ್ಲುತ್ತದೆ” ಎಂದು ಹೇಳಿದರು.
