“ಭಾರತ ಪರಂಪರೆಯ ಸಮೃದ್ಧ ಆರೋಗ್ಯದ ಸಾಧನೆಯಿಂದ ಯೋಗವು ನಮ್ಮ ಜೀವನ ಶೈಲಿಯಾಗಬೇಕು. ಪ್ರಕೃತಿದತ್ತ ಆಹಾರ ವಿಹಾರದೊಂದಿಗೆ ಉತ್ತಮ ಬದುಕು ಕಟ್ಟಿಕೊಳ್ಳುವಂತಾಗಬೇಕು” ಎಂದು ಮುಂಡರಗಿ ಪುರಸಭೆಯ ಉಪಾಧ್ಯಕ್ಷ ನಾಗೇಶ ಹುಬ್ಬಳ್ಳಿ ಹೇಳಿದರು.
ಗದಗ ಜಿಲ್ಲೆಯ ಮುಂಡರಗಿ ಪಟ್ಟಣದ ರಾಮೇನಹಳ್ಳಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅನ್ಮೋಲ್ ಯೋಗ ಸಂಸ್ಥೆ ಸಹಯೋಗದಲ್ಲಿ ವಿಶ್ವ ಯೋಗ ದಿನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
“ಸರ್ಕಾರಿ ಶಾಲೆಯಲ್ಲಿ ಯೋಗದ ಬಗ್ಗೆ ಇಷ್ಟೊಂದು ಆಸಕ್ತಿಯಿಂದ ಮಕ್ಕಳನ್ನು ಯೋಗಾಭ್ಯಾಸದಲ್ಲಿ ತೊಡಗಿಸಿರುವುದು ಶ್ಲಾಘನೀಯ. ಮಕ್ಕಳಿಗೆ ಯೋಗ ಮಾಡಿ ರೋಗದಿಂದ ದೂರವಾಗಲು ಕರೆ ನೀಡಿದರು.
ಕಾರ್ಯಕ್ರಮದ ಮುಖ್ಯ ಅತಿಥಿ ಅನ್ಮೋಲ್ ಯೋಗ ಕೇಂದ್ರ ಹಾಗೂ ಮುಂಡರಗಿ ತಾಲೂಕಾ ಆಯುಷ್ ವೈದ್ಯರ ಸಂಘದ ಅಧ್ಯಕ್ಷ ಡಾ. ಚಂದ್ರಕಾಂತ ಇಟಗಿ ಮಾತನಾಡಿ, “ಯೋಗ ಮತ್ತು ಆಯುರ್ವೇದ ಚಿಕಿತ್ಸೆಗಳು ಉತ್ತಮ ಜೀವನಕ್ಕೆ ಕೈದೀವಿಗೆಗಳಿದ್ದಂತೆ. ಮಕ್ಕಳು ಬಾಲ್ಯದಿಂದಲೇ ಉತ್ತಮ ಆರೋಗ್ಯಶೈಲಿ ರೂಢಿಸಿಕೊಳ್ಳಬೇಕು” ಎಂದರು.
ಮಕ್ಕಳಿಗಾಗಿ ಯೋಗಾಸನ ಸ್ಪರ್ಧೆ: ಅನ್ಮೋಲ್ ಯೋಗ ಕೆಂದ್ರದಿಂದ ನಡೆಸಿದ್ದ ಯೋಗ ಸ್ಪರ್ದೆಯಲ್ಲಿ ವಿಜೇತ ಮಕ್ಕಳಿಗೆ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು.
ಮೇಘಾ ಉಮೇಶ ದಂಡಿನ ಪ್ರಥಮ, ಸಾಕ್ಷಿ ಮಂಜುನಾಥ ಬಾಲಾಪುರ ದ್ವಿತಿಯ, ಕೊಟ್ರೇಶ ಜಿತೇಂದ್ರ ಬಾಗಳಿ ತೃತಿಯ ಸ್ಥಾನ ಪಡೆದರು. ರಶ್ಮಿ ಯಲ್ಲಪ್ಪ ಕುರಿ, ಹುಲಿಗೆಮ್ಮ ರಾಮಪ್ಪ ತ್ಯಾಪಿ, ನಹಾರಿಕಾ ಜಿತೇಂದ್ರ ಬಾಗಳಿ ಸಮಾಧಾನಕರ ಬಹುಮಾನ ಪಡೆದರು.
ಡಾ. ಮಂಗಳಾ ಚಂದ್ರಕಾಂತ ಇಟಗಿಯವರ ನಿರ್ದೇಶನದಲ್ಲಿ ನಿರ್ಮಾಣಗೊಂಡ ರಾಮೇನಹಳ್ಳಿ ಶಾಲಾ ಮಕ್ಕಳಿಂದ ಕಲಾತ್ಮಕ ಯೋಗ ಪ್ರದರ್ಶನಗೊಂಡಿತು. ಮುಖ್ಯ ಶಿಕ್ಷಕರಾದ ಡಾ. ನಿಂಗು ಸೊಲಗಿ ಪ್ರಾಸ್ತಾವಿಕವಾಗಿ ಮಾತನಾಡಿ ಯೋಗಾಭ್ಯಾಸ ನಡೆಸಿಕೊಟ್ಟರು. ಎಸ್.ಡಿ.ಎಂ.ಸಿ ಅಧ್ಯಕ್ಷ ಮಹೇಶ ಬಾಗಳಿ ಅಧ್ಯಕ್ಷತೆವಹಿಸಿದ್ದರು. ಶಿಕ್ಷಕರಾದ ಪಿ.ಎಂ.ಲಾಂಡೆ ಸ್ವಾಗತಿಸಿದರು, ಬಿ.ಎಚ್. ಹಲವಾಗಲಿ ವಂದಿಸಿದರು.
ಕಾರ್ಯಕ್ರಮದಲ್ಲಿ ವೈದ್ಯರಾದ ಅರವಿಂದಹಂಚಿನಾಳ, ದಾನಿಗಳಾದ ನಿವೃತ್ತ ಸೈನಿಕ ಪರಶುರಾಮ ಜಂಬಗಿ, ಹಿರಿಯರಾದ ಯಲ್ಲಪ್ಪ ಜಂಬಗಿ, ಎಂ.ಆರ್. ಗುಗ್ಗರಿ, ಶ್ರೀಮತಿ ಪಿ.ಎ. ಗಾಡದ, ಶಿವಲೀಲಾ ಅಬ್ಬಿಗೇರಿ, ಅಶೋಕ ಕೋಳಿ, ಸಂತೋಷ ಚೌಡಕಿ, ಉಮೇಶ ದಂಡೀನ ಮೊದಲಾದವರು ಉಪಸ್ಥಿತರಿದ್ದರು.
