ಗದಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ ಎಸ್ ನೇಮಗೌಡರವರ ಹೆಸರಿನಲ್ಲಿ ನಕಲಿ ಫೇಸ್‌ಬುಕ್ ಖಾತೆ ತೆರೆದು ವಂಚನೆ ಮಾಡಲು ಯತ್ನಿಸಿರುವ ಘಟನೆ ನಡೆದಿದೆ.
ಗದಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಈ ಸಂಬಂಧ ಗದಗ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | 10 ವರ್ಷದ ಬಾಲಕನಿಂದ ಲೈಂಗಿಕ ಕಿರುಕುಳ; ವಿಡಿಯೋ ಹಂಚಿಕೊಂಡ ವ್ಲಾಗರ್
“ಸೈಬರ್ ವಂಚಕರು ಬಿ ಎಸ್ ನೇಮಗೌಡ ಐಪಿಎಸ್ ಎಂಬ ಹೆಸರಿನಲ್ಲಿ ಫೇಸ್‌ಬುಕ್ ಹಾಗೂ ಮೆಸೇಂಜರ್‌ನಲ್ಲಿ ನಕಲಿ ಖಾತೆ ತೆರೆದು, ಎಸ್‌ಪಿಯವರ ಫೋಟೊವನ್ನು ಹಾಕಿದ್ದರು. ವಾಟ್ಸ್ಆ್ಯಪ್ ಡಿಪಿಗೂ ಅವರ ಫೋಟೊ ಬಳಸಿ ಸಾರ್ವಜನಿಕರಿಗೆ ಮೋಸ ಮಾಡಲು ಯತ್ನಿಸಿದ್ದರೆಂದು ಗೊತ್ತಾಗಿದೆ. ಈ ಬಗ್ಗೆ ಎಚ್ಚರದಿಂದ ಇರಬೇಕು” ಎಂದು ಎಸ್‌ಪಿ ಬಿ ಎಸ್ ನೇಮಗೌಡ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.