ಗದಗ ಪಟ್ಟಣದ 20ನೇ ವಾರ್ಡ್‌ನಲ್ಲಿ ಮಳೆಗಾಗಿ ಸಾಂಪ್ರದಾಯಿಕ ಗುರ್ಜಿ ಪೂಜೆ ನೆರವೇರಿಸಿದ ರೈತ ಮಹಿಳೆಯರು, ಜನಪದ ಗೀತೆಗಳನ್ನು ಹಾಡುತ್ತ ವಾರ್ಡ್‌ನೊಳಗೆಲ್ಲ ಸಂಚರಿಸಿ ಪ್ರದರ್ಶನ ಮಾಡಿದರು.
“ಮಳೆಯಾದರೆ ರೈತರಿಗೆ, ದನ ಕರುಗಳಿಗೆ, ಜಾನುವಾರುಗಳಿಗೆ ಅನುಕೂಲವಾಗಲಿದೆ. ಹಾಗಾಗಿ ಮಳೆ ಬರಲಿ” ಎಂದು ಗುರ್ಜಿ ಪದಗಳನ್ನು ಹಾಡಿದರು.
ಈ ಸುದ್ದಿ ಓದಿದ್ದೀರಾ? ಗದಗ | ವಿದ್ಯಾರ್ಥಿ ದೆಸೆಯಲ್ಲೇ ಉತ್ತಮ ಭವಿಷ್ಯದ ಕನಸು ಕಾಣಬೇಕು: ದತ್ತಾತ್ರೇಯ ವಿ ಜೋಶಿ
ಈ ಸಂದರ್ಭದಲ್ಲಿ ಚಾಂದ್‌ಸಾಬ್ ಕೊಟ್ಟೂರು ಹಾಗೂ ಶರೀಫಜ್ಜನ ಗುಡಿ ಹತ್ತಿರ ಗುರು ಹಿರಿಯರು ಪಾಲ್ಗೊಂಡಿದ್ದರು. ಈ ವೇಳೆ ವಿಜಯಲಕ್ಷ್ಮೀ, ಗೌರಮ್ಮ, ಶೋಭಾ, ಬಸಮ್ಮ, ಶಾಂತಮ್ಮ, ಶಾರದಾ, ವಿದ್ಯಾರಾಣಿ, ಎಲ್ಲಮ್ಮ ಹುಂಬಿ, ಬಸವ್ವ, ಮಂಜವ್ವ, ತೇಜು, ದಾವಲಬಿ, ಸುವರ್ಣ, ಭಾರತಿ, ಸರಸ್ವತಿ, ಹರೀಶ, ಗಿರೀಶ, ಭೂಮಿಕಾ, ದ್ರಾಕ್ಷಾಯಣವ್ವ ಸೇರಿದಂತೆ ಇತರರು ಇದ್ದರು.





