“ಹದಿನೈದು ದಿನಗಳಿಂದ ಸೋನಮ್ ವಾಂಗ್ಚುಕ್ ಅವರು ಹೋರಾಟ ಮಾಡುತ್ತಿದ್ದಾರೆ. ಈ ದೇಶದಲ್ಲಿ ಭಗತ್ ಸಿಂಗ್ ನಂತವರು ಹುಟ್ಟಕೊಂಡಿದ್ದಾರೆ. ಅಂದು ಕಿವಿ ಕೇಳದ ಸರಕಾರಗಳು, ಸಾಮ್ರಾಜ್ಯ ಶಾಹಿ ಆಡಳಿತದ ಕಾಲದಲ್ಲಿಯೂ ಕಿವಿ ಕೇಳದವರ ವಿರುದ್ದ ಹೋರಾಟ ಕಟ್ಟಿದವರು ಭಗತ್ ಸಿಂಗ್ ನವರು. ಅಂತಹ ಭಗತ್ ಸಿಂಗ್ ಅವರ ಮಕ್ಕಳು ನಾವು, ಈ ನೆಲದಲ್ಲಿ ಇದ್ದೇವೆ. ಈ ದೇಶಕ್ಕೆ ಸಂವಿಧಾನ ಕೊಟ್ಡ ಅಂಭೇಡ್ಕರವರ ಮಕ್ಕಳು ನಾವು, ಬಸವಣ್ಣನ ಮಕ್ಕಳು ನಾವು. ಇಂತವರ ಮಕ್ಕಳಾದ ನಾವು ಈ ದೇಶವನ್ನು ಹೈಜಾಕ್ ಮಾಡಲು ಬಿಡುವುದಿಲ್ಲ. ಈ ದೇಶದ ಪ್ರಜಾಪ್ರಭುತ್ವವನ್ನು ಅಳಿಸಿ ಹಾಕಲು ಬಿಡುವುದಿಲ್ಲ” ಎಂದು ಕಿಡಿಕಾರಿದರು.
ಗದಗ ಪಟ್ಟಣದ ಗಾಂಧಿ ವೃತ್ತದ ಬಳಿ ಸಮಾನತೆಗಾಗಿ ನಾವು ಸಂಘಟನೆ ಸಹಯೋಗದಲ್ಲಿ ವಿಜ್ಞಾನಿ, ಪರಿಸರವಾದಿ ಸೊನಮ್ ವಾಂಗ್ಚುಕ್ ಮತ್ತು ವಿದ್ಯಾರ್ಥಿಗಳು ನಡೆಸಿರುವ ಉಪವಾಸ ಸತ್ಯಾಗ್ರಹ ಬೆಂಬಲಿಸಿ ಹಾಗೂ ಕೇಂದ್ರ ಸರ್ಕಾರದ ಸರ್ವಾಧಿಕಾರಿ ಧೋರಣೆ ಖಂಡಿಸಿ ಧರಣಿ ಸತ್ಯಾಗ್ರಹದಲ್ಲಿ ಅವರು ಮಾತನಾಡಿದರು.
“ಗಂಗಾ ನದಿಯನ್ನು ಶುದ್ಧೀಕರಿಸಬೇಂದು ನೂರಾ ಹದಿನೆಂಟು ದಿನ ಉಪವಾಸ ಮಾಡುತ್ತಲೇ ಜೆ ಡಿ ಅಗರವಾಲಾ ಸಾವನ್ನಪ್ಪಿದರೂ ಅವರೂ ಕಿವಿಗೊಡಲಿಲ್ಲ. ಈ ದೇಶಕ್ಕೆ ಸ್ವಾತಂತ್ರ್ಯ ಕೊಟ್ಟ ಮಹಾತ್ಮ ಗಾಂಧಿಯನ್ನೇ ಕೊಂದವರನ್ನು ಆರಾಧಿಸುವವರನ್ನು ಕಟ್ಟಿಕೊಂಡಿರುವ ಸಂಸದರ ಕೇಂದ್ರ ಸರಕಾರ, ಇವತ್ತು ಈ ಬೇಡಿಕೆಗಳನ್ನು ಈಡೇರಿಸುವ ವಿಶ್ವಾಸ ಇಲ್ಲ” ಎಂದರು.
ಸಾಮಾಜಿಕ ಹೋರಾಟಗಾರರು ಎಸ್ ಆರ್ ಹಿರೇಮಠ ಅವರು ಮಾತನಾಡಿ, “ಈ ಕೇಂದ್ರ ಸರಕಾರಕ್ಕೆ ಕಿಂಚಿತ್ತು ಪ್ರಜಾಪ್ರಭುತ್ವದ ಮೇಲೆನ ಜವಾಬ್ದಾರಿ ಇದ್ದರೆ, ತಕ್ಷಣವೇ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಕೊಡಬೇಕು. ಕೇಂದ್ರ ಸರಕಾರ ನಮ್ಮ ದೇಶದ ಯುವಕರೊಂದಿಗೆ ಚರ್ಚೆ, ಸಂವಾದ ಮಾಡಿ, ನ್ಯಾಯಯುತವಾದ ಪರಿಹಾರ ಕಂಡುಕೊಂಡು ಈ ವ್ಯವಸ್ಥೆಯನ್ನು ಸರಿಪಡಿಸಬೇಕು” ಎಂದು ಒತ್ತಾಯಿಸಿದರು.
“ಪ್ರಜಾಪ್ರಭುತ್ವದ ಮೂಲ ತತ್ವಗಳ ಆಧಾರದ ಮೇಲೆ ಸ್ವಾತಂತ್ರ ಹೋರಾಟದಲ್ಲಿ ಇಡೀ ಜಗತ್ತಿಗೆ ದಾರಿ ಮಾಡಿಕೊಟ್ಟಿದ್ದೇವೆ. ಕೇಂದ್ರ ಸರಕಾರ ಪ್ರಜಾಪ್ರಭುತ್ವದ ಮೂಲ ತತ್ವಗಳನ್ನು ಗಾಳಿಗೆ ತೂರಿದವರಿಗೆ 2022ರಲ್ಲಿ ಸಿಂಪಲ್ ಮೆಜಾರಿಟಿ ಬರಲಿಲ್ಲ. ಇವರ ಹಿಂದೆ ಇರುವ ಆರ್.ಎಸ್.ಎಸ್ ಹಾದಿಯಲ್ಲಿ ಹೊರಟಿರುವ ಸರಕಾರ ಸಿದ್ಧಾಂತದಲ್ಲಿ ನಮ್ಮ ಯುವಕರ ಮೇಲೆ ಕಾಳಜಿ ಇಲ್ಲ” ಎಂದರು.
“ಇವತ್ತು ದೇಶದಲ್ಲಿ ಬಡತನ, ಅಪೌಷ್ಟಿಕತೆ ಉಂಟಾಗುತ್ತಿದೆ. ಬ್ರಿಟಿಷರ್ ಅವಧಿ 1824ರಲ್ಲಿದ್ದ ಅಸಮಾನತೆಗಳು ಮತ್ತೆ ಇವತ್ತು ಬಂದಿವೆ. ಈ ದೇಶದ ಬೆನ್ನೆಲುಬುಗಳಾದ ಬಡವರು, ಆದಿವಾಸಿಗಳು, ದಲಿತರು ಮಹಿಳೆಯರು ಈ ದೇಶವನ್ನು ಕಟ್ಟಿದವರವರನ್ನು ನಿರ್ಲಕ್ಷ್ಯ ಮಾಡುತ್ತಿದ್ದಾರೆ. ಇದನ್ನು ನಾವೆಲ್ಲರೂ ಖಂಡಿಸೋಣ” ಎಂದರು.
ಧರಣಿ ಸತ್ಯಾಗ್ರಹ ಉದ್ದೇಶಿಸಿ ಬಿ ಎಸ್ ಸೊಪ್ಪಿನ, ಲೆನೇಟ್, ಜಿ.ಬಿ.ಪಾಟೀಲ್, ಅಶೋಕ ಬರಗುಂಡಿ, ಡಾ. ರಾಮಚಂದ್ರ ಹಂಸನೂರು, ಅನ್ವರ್ ಬಾಗೇವಾಡಿ, ಡಾ.ಡಿ.ವಿಗವಾನಿ ಮಾತನಾಡಿದರು.
ಧರಣಿ ಸತ್ಯಾಗ್ರಹದಲ್ಲಿ ಎಸ್.ಎನ್. ಬಳ್ಳಾರಿ, ಶೇಖಣ್ಣ ಕವಳಿಕಾಯಿ, ಬಸವರಾಜ ಕಡೆಮನಿ, ಆನಂದ ಶಿಂಗಾಡಿ, ಮಾರ್ತಾಂಡಪ್ಪ ಹಾದಿಮನಿ, ಮಹೇಶ ಹಿರೇಮಠ, ಗಣೆಶ ಹುಬ್ಬಳ್ಳಿ ದಾದಾಪೀರ ಕಲೆಗಾರ, ಬಾಲರಾಜ ಅರಬರ, ನಾಗರಾಜ ಗೋಕಾವಿ, ರಮೇಶ ಚಲವಾದಿ, ಶಿವಾನಂದ ತಮ್ಮನ್ನವರ, ಪರಶು ಕಾಳೆ, ಅನಿಲ್ ಕಾಳೆ, ಶ್ರಿಕಾಂತ ಮಳಲಿ, ಮುತ್ತು ಬಿಳಿಯಲಿ ಸೇರಿದಂತೆ ಎಲ್ಲ ಸಮಾನ ಮನಸ್ಕ ಸಂಘಟನೆಗಳು, ಹೋರಾಟದ ಗೆಳೆಯರು, ಸಮಾನತೆ ಮತ್ತು ಪ್ರಜಾಪ್ರಭುತ್ವದ ಪ್ರೇಮಿಗಳು ಪಾಲ್ಗೊಂಡಿದ್ದರು.




