ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಬಸ್ ವ್ಯವಸ್ಥೆಯ ಬೇಡಿಕೆ ಇಟ್ಟಿದ್ದರು. ಇದಕ್ಕೆ ಶಾಸಕ ಮಂಥರ್ ಗೌಡ ಸ್ಪಂದಿಸಿದ್ದು ವಿದ್ಯಾರ್ಥಿಗಳಿಗಾಗಿ ಬಸ್ ವ್ಯವಸ್ಥೆ ಮಾಡಿದ್ದಾರೆ. ಇದು ವಿದ್ಯಾರ್ಥಿಗಳು ಮತ್ತು ಗ್ರಾಮಸ್ಥರಿಗೆ ಸಂತಸ ತಂದಿದೆ.
ನೂತನ ಬಸ್ ಹಾರಂಗಿ, ಅತ್ತೂರು, ಸುಂದರನಗರ, ಚಿಕ್ಕತ್ತೂರು ಭಾಗದ ಗ್ರಾಮಸ್ಥರಿಗೆ ಅನುಕೂಲವಾಗುವಂತೆ, ಬೆಳಗ್ಗೆ 9.30ಕ್ಕೆ ಕುಶಾಲನಗರದಿಂದ ಹೊರಟು ಹಾರಂಗಿವರೆಗೆ ಪ್ರಯಾಣಿಸಲಿದೆ.
ಶಾಸಕ ಮಂಥರ್ ಗೌಡ ಬಸ್‌ಗೆ ಪೂಜೆ ಸಲ್ಲಿಸಿ ಪ್ರಯಾಣಕ್ಕೆ ಚಾಲನೆ ನೀಡಿದ್ದಾರೆ. ಈ ಸಂದರ್ಭದಲ್ಲಿ ವಿ.ಪಿ. ಶಶಿಧರ್, ಪ್ರಮೋದ್ ಮುತ್ತಪ್ಪ, ಜೋಸೆಫ್ ವಿಕ್ಟರ್ ಸೋನ್ಸ್, ಶಿವಶಂಕರ್, ಕಿರಣ್, ರಂಜನ್, ಡಿಗ್ರಿ ಕಾಲೇಜು ಉಪ್ಯಾಸಕರು, ವಿದ್ಯಾರ್ಥಿಗಳು ಇದ್ದರು.