ಕೊಡಗು ಜಿಲ್ಲೆ ಕುಶಾಲನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಕ್ರಮ ಗಾಂಜಾ ಮಾರಾಟ, ಸರಬರಾಜಿನ ಎರಡು ಪ್ರತ್ಯೇಕ ಪ್ರಕರಣಗಳನ್ನು ಭೇದಿಸಿರುವ ಪೊಲೀಸರು ಒಟ್ಟು ಐವರನ್ನು ವಶಕ್ಕೆ ಪಡೆದಿದ್ದಾರೆ.
ಕುಶಾಲನಗರ ಪೊಲೀಸ್ ಠಾಣಾ ವ್ಯಾಪ್ತಿಯ ಕುಶಾಲನಗರ ಬೈಚನಹಳ್ಳಿ ಜಾತ್ರೆ ಮೈದಾನದಲ್ಲಿ ನಿಷೇಧಿತ ಗಾಂಜಾ ಮಾರಾಟ ಮಾಡುತ್ತಿದ್ದ ಬೈಚನಹಳ್ಳಿ ನಿವಾಸಿ ಪ್ರಮೋದ್ ಕುಮಾರ್ (34) ಮತ್ತು ರಾಧಕೃಷ್ಣ ಬಡಾವಣೆ ನಿವಾಸಿ ದರ್ಶನ್ (21) ಇಬ್ಬರನ್ನು ವಶಕ್ಕೆ ಪಡೆದು,ಇವರಿಂದ 25 ಗ್ರಾಂ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ.
ಕುಶಾಲನಗರ ಬೈಚನಹಳ್ಳಿ ರೈತ ಸಹಕಾರ ಭವನದ ಸಮೀಪ ನಿಷೇಧಿತ ಗಾಂಜಾವನ್ನು ಬಳಕೆ ಮಾಡುತ್ತಿದ್ದ ಆರೋಪದಲ್ಲಿ ಬೈಚನಹಳ್ಳಿ ನಿವಾಸಿ ರವಿಕುಮಾರ್ (22), ನಿಖಿಲ್ ಕುಮಾರ್ (24) ಮತ್ತು ಯೋಗಾನಂದ ಬಡಾವಣೆಯ ನಿವಾಸಿ ಶರತ್ ನಾಯಕ್ (25) ಎಂಬುವವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಸೋಮವಾರಪೇಟೆ ಪೊಲೀಸ್ ಉಪವಿಭಾಗದ ಡಿಎಸ್ಪಿ ಡಿ.ವಿ. ಗಂಗಾಧರಪ್ಪ ನೇತೃತ್ವದಲ್ಲಿ, ಕುಶಾಲನಗರ ವೃತ್ತ ನಿರೀಕ್ಷಕ ಬಿ ಜಿ ಪ್ರಕಾಶ್, ಸಬ್ ಇನ್ಸ್ ಪೆಕ್ಟರ್ ಗೀತಾ ಮತ್ತು ಸಿಬ್ಬಂದಿಗಳ ತಂಡ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಸುದ್ದಿ ಓದಿದ್ದೀರಾ? ಮೈಸೂರು | ಶಿಲಾಫಲಕದ ಮೇಲೆ ಮೂಡಿದ ‘ಸಂವಿಧಾನ ಪೀಠಿಕೆ’
ಪ್ರತ್ಯೇಕ ಪ್ರಕರಣಗಳನ್ನು ಪತ್ತೆಹಚ್ಚಿ, ಆರೋಪಿಗಳನ್ನು ವಶಕ್ಕೆ ಪಡೆಯಲು ಶ್ರಮಿಸಿದ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳನ್ನು ಜಿಲ್ಲಾ ಪೊಲೀಸ್ ಅಧೀಕ್ಪಕ ಕೆ ರಾಮರಾಜನ್ ಅಭಿನಂದಿಸಿದ್ದಾರೆ.
