ಕೊಡಗು ಜಿಲ್ಲೆ ಸೋಮವಾರ ಪೇಟೆ ತಾಲ್ಲೂಕು ಶನಿವಾರ ಸಂತೆಯಲ್ಲಿ ಆಟೋದಲ್ಲಿ ಮಲಗಿರುವಾಗ ಚಾಲಕ ಪ್ರಾಣ ಬಿಟ್ಟಿರುವ ಘಟನೆ ನಡೆದಿದೆ.
ಶನಿವಾರ ಸಂತೆ ಗುಂಡೂರಾವ್ ಬಡಾವಣೆಯ ನಿವಾಸಿ ಮಂಜುನಾಥ್ (50) ತಮ್ಮ ಸ್ವಂತ ಆಟೋದಲ್ಲಿ ಮಲಗಿದ್ದ ವೇಳೆ ಪ್ರಾಣ ಬಿಟ್ಟಿದ್ದಾರೆ.
ಮೂಲತಃ ಸಿದ್ದಲಿಂಗಪುರದವರಾದ ಮಂಜುನಾಥ್ ಸರಿ ಸುಮಾರು 15 ವರ್ಷಗಳಿಂದ ಆಟೋ ಚಾಲಕರಾಗಿ ವೃತ್ತಿ ನಡೆಸುತಿದ್ದು,ಶನಿವಾರ ಸಂತೆ ಭಾಗದಲ್ಲಿ ಆಟೋ ಓಡಿಸುತಿದ್ದರು.ಮೃತರು ವಿವಾಹಿತರಾಗಿದ್ದು ಕುಟುಂಬದ ಮನಸ್ತಾಪದಿಂದ ದೂರ ಉಳಿದಿದ್ದು, ತಮ್ಮ ದೈನಂದಿನ ಕೆಲಸ ಮುಗಿಸಿ ಆಟೋದಲ್ಲಿ ಮಲಗುತಿದ್ದರು ಎಂದು ತಿಳಿದು ಬಂದಿದೆ.
ಎಂದಿನಂತೆ ನಿನ್ನೆ ಆಟೋ ಓಡಿಸಿ, ರಾತ್ರಿ ವೇಳೆ ಆಟೋದಲ್ಲಿ ಮಲಗಿದ್ದಾರೆ. ಬೆಳಗ್ಗೆ ಇತರೆ ಸಹ ಆಟೋ ಚಾಲಕರು ಬಂದು ನೋಡಿದಾಗ ಮೃತಪಟ್ಟಿರುವುದು ಕಂಡು ಬಂದಿದೆ. ಕೂಡಲೆ ಪೊಲೀಸ್
ಠಾಣೆಗೆ ಮಾಹಿತಿ ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಕೊಡಗು | ಶಿಕ್ಷಣದಿಂದ ಜ್ಞಾನ; ಶ್ರಮದಿಂದ ಬದುಕು : ಸಾಹಿತಿ ಉಳುವಂಗಡ ಕಾವೇರಿ ಉದಯ
ಸ್ಥಳಕ್ಕೆ ಆಗಮಿಸಿದ ಶನಿವಾರ ಸಂತೆ ಪೊಲೀಸ್ ಠಾಣೆ ಅಧಿಕಾರಿಗಳು ಪರಿಶೀಲನೆ ನಡೆಸಿ,ಪ್ರಕರಣ ದಾಖಲಿಸಿಕೊಂಡಿದ್ದಾರೆ.
