ಗೋರಿಪಾಳ್ಯ-ಪಾಕಿಸ್ತಾನ ಹೇಳಿಕೆ; ನ್ಯಾಯಾಧೀಶರ ವಿರುದ್ಧ ‘ಗುಡ್ ಲೈಫ್ ಫೌಂಡೇಶನ್’ ಪ್ರತಿಭಟನೆ

Date:

Advertisements

ಹೈಕೋರ್ಟ್‌ ನ್ಯಾಯಾಧೀಶ ವೇದವ್ಯಾಸಾಚಾರ್ ಶ್ರೀಷಾನಂದ ಅವರು ಬೆಂಗಳೂರಿನಲ್ಲಿ ಮುಸ್ಲಿಂ ಸಮುದಾಯದ ಜನರು ಹೆಚ್ಚಾಗಿ ವಾಸಿಸುತ್ತಿರುವ ಗೋರಿಪಾಳ್ಯ ಪ್ರದೇಶವನ್ನು ಪಾಕಿಸ್ತಾನಕ್ಕೆ ಹೋಲಿಸಿ ಮಾತನಾಡಿರುವ ವಿಡಿಯೋ ವೈರಲ್ ಆಗಿದೆ. ಅವರ ಹೇಳಿಕೆಗೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ನ್ಯಾಯಾಧೀಶರೇ ಧಾರ್ಮಿಕ ದ್ವೇಷ ಬಿತ್ತುತ್ತಿದ್ದಾರೆ ಎಂಬ ಆರೋಪ ಮುನ್ನೆಲೆಗೆ ಬಂದಿದೆ. ನ್ಯಾಯಾಧೀಶರ ಹೇಳಿಕೆಯನ್ನ ಖಂಡಿಸಿ ಗುಡ್ ಲೈಫ್ ವೆಲ್‌ಫೇರ್ ಫೌಂಡೇಶನ್ ಸೆಪ್ಟೆಂಬರ್ 21ರ ಶನಿವಾರ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ನಡೆಸಿದೆ.

ಗುಡ್ ಲೈಫ್ ವೆಲ್‌ಫೇರ್ ಫೌಂಡೇಶನ್ ಅಧ್ಯಕ್ಷ ಸೈಯದ್ ವಹಾವದಿನ್ ಈದಿನ.ಕಾಮ್‌ ಜತೆಗೆ ಮಾತನಾಡಿದ್ದು, “ನಾನು ಬೆಂಗಳೂರಿನ ಗೋರಿಪಾಳ್ಯದಲ್ಲಿಯೇ ಹುಟ್ಟಿ ಬೆಳೆದಿದ್ದೇನೆ. ಕರ್ನಾಟಕ ಹೈಕೋರ್ಟ್‌ ನ್ಯಾಯಧೀಶ ಶ್ರೀಷಾನಂದ ಅವರು ಗೋರಿಪಾಳ್ಯ ಪಾಕಿಸ್ತಾನದಲ್ಲಿದೆ ಎಂದು ಹೇಳಿರುವುದು ನಮಗೆ ಬೇಜಾರಾಗಿದೆ. ಸುಪ್ರೀಂ ಕೋರ್ಟ್‌ ಕೂಡ ನ್ಯಾಯಾಧೀಶರ ಮೇಲೆ ‘ಸು ಮೋಟ್’ ಕೇಸ್ ದಾಖಲು ಮಾಡಿಕೊಂಡಿದೆ. ರಾಜಕೀಯ ಮುಖಂಡರು ಸೇರಿದಂತೆ ಕೆಲವರು ಪದೇಪದೇ ಗೋರಿಪಾಳ್ಯ, ಪಾದರಾಯನಪುರ ಹೆಸರನ್ನ ಬಳಕೆ ಮಾಡಿಕೊಂಡು ಸಮುದಾಯದ ನಿಂದನೆ ಮಾಡುತ್ತಿದ್ದಾರೆ. ಗೋರಿಪಾಳ್ಯದಲ್ಲಿ ನಾವು ಎಲ್ಲ ಜಾತಿ ಧರ್ಮದವರು ಜೊತೆಯಾಗಿ ಜೀವನ ಮಾಡುತ್ತಿದ್ದೇವೆ. ಅದನ್ನು ನ್ಯಾಯಾಧೀಶರಿಗೆ ತಿಳಿಸಲು ಪ್ರತಿಭಟನೆ ನಡೆಸುತ್ತಿದ್ದೇವೆ” ಎಂದರು.

ವಕೀಲ್ ಅಕ್ಮಲ್ ಪಾಷಾ ಈದಿನ.ಕಾಮ್‌ ಜತೆಗೆ ಮಾತನಾಡಿ, “ನಾನು ಹುಟ್ಟಿ ಬೆಳೆದಿದ್ದು ಗೋರಿಪಾಳ್ಯದಲ್ಲಿ ನಾನು ವಕೀಲ್‌ ನಾದ ಬಳಿಕ ಗೋರಿಪಾಳ್ಯದಲ್ಲಿಯೇ ನನ್ನ ಆಫೀಸ್ ಮಾಡಿದ್ದೇನೆ. ಭಾರತದಲ್ಲಿರುವ ಯಾವುದೇ ಭಾಗ ಅಥವಾ ಜಮ್ಮು ಕಾಶ್ಮೀರ್‌ದಿಂದ ಕನ್ಯಾಕುಮಾರಿಯವರೆಗೆ ಪ್ರತಿಯೊಂದು ಪ್ರದೇಶವನ್ನು ಸಾಮಾಜಿಕವಾಗಿ, ಆರ್ಥಿಕವಾಗಿ ಅಭಿವೃದ್ಧಿ ಮಾಡಬೇಕಾದ ಹೊಣೆ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದ ಮೇಲೆ ಇರುತ್ತದೆ” ಎಂದು ಹೇಳಿದರು.

Advertisements

“ಗೋರಿಪಾಳ್ಯದಲ್ಲಿರುವ ಶೇ.60 ರಷ್ಟು ಜನರು ದಿನಕ್ಕೆ ₹300 ರಿಂದ ₹600 ದುಡಿಯಬಹುದು. ಆಟೋ ಓಡಿಸುವ ವ್ಯಕ್ತಿ ದಿನಕ್ಕೆ ಅಬ್ಬಬ್ಬಾ ಎಂದರೆ ₹1000 ದುಡಿಯಬಹುದು. ಆತ ಈ ದುಡ್ಡಿನಲ್ಲೇ ತನ್ನ ಇಡೀ ಕುಟುಂಬವನ್ನ ನೋಡಿಕೊಳ್ಳಬೇಕು. ಗೋರಿಪಾಳ್ಯದಲ್ಲಿರುವ ಜನರು ರೋಡ್‌ನಲ್ಲಿ ವ್ಯಾಪಾರ ಮಾಡುತ್ತಾರೆ. ಇಲ್ಲಾಂದ್ರೆ ಸಣ್ಣಪುಟ್ಟ ಕೆಲಸ ಮಾಡಿ ಜೀವನ ಮಾಡುತ್ತಾರೆ. ಗೋರಿಪಾಳ್ಯದಿಂದ ಕೆ.ಆರ್‌ ಮಾರುಕಟ್ಟೆಗೆ ಆಟೋದಲ್ಲಿ ತೆರಳೋದಕ್ಕೆ ಒಬ್ಬರಿಗೆ ₹45 ರಿಂದ ₹50 ಖರ್ಚಾಗುತ್ತೆ. ಹಾಗಾಗಿ, ಆ ಆಟೋದಲ್ಲಿ 5 ಜನ ಹೋದರೆ ತಪ್ಪಿಲ್ಲ ಅನ್ನೋದು ನನ್ನ ಅನಿಸಿಕೆ. ಇದು ಮೋಟಾರ್ ಆಕ್ಟ್‌ ಪ್ರಕಾರ ತಪ್ಪಿದ್ದರೇ, ಅಲ್ಲಿರುವ ಪೊಲೀಸ ಆಫೀಸರು ಕ್ರಮ ಕೈಗೊಳ್ಳಬೇಕು. ಹೀಗಾಗಿ, 300 ರಿಂದ 400 ದುಡಿಯುವವರು ದಿನಕ್ಕೆ 100 ಆಟೋಗೆ ಕೊಟ್ಟರೇ, ಅವರು ಹೇಗೆ ಜೀವನ ನಡೆಸಬೇಕು. ಇದೆಲ್ಲ ಪ್ರಶ್ನೇಗಳಿಗೆ ರಾಜ್ಯ ಸರ್ಕಾರ ಉತ್ತರಿಸಬೇಕು” ಎಂದು ಕೇಳಿದರು.

ಈ ಸುದ್ದಿ ಓದಿದ್ದೀರಾ? ಕರ್ನಾಟಕ ಹೈಕೋರ್ಟ್ ನ್ಯಾಯಾಧೀಶರಿಂದ ಮತ್ತೊಂದು ಅಸಹ್ಯಕರ ಹೇಳಿಕೆ: ವ್ಯಾಪಕ ಖಂಡನೆ

ಸಫಾಯಿ ಕರ್ಮಚಾರಿ ಕಾವಲು ಸಮಿತಿಯ ವಿನೋದ ಕುಮಾರ್ ಈದಿನ.ಕಾಮ್‌ ಜತೆಗೆ ಮಾತನಾಡಿ, “ನ್ಯಾಯಾಧೀಶರು ನೀಡಿದ ಹೇಳಿಕೆಯಲ್ಲಿ ತಪ್ಪಿಲ್ಲ. ಆದರೆ, ಅವರು ಹೇಳಿಕೆ ನೀಡುವ ಮೊದಲು ವಾಸ್ತವ ಸ್ಥಿತಿಗತಿಯ ಬಗ್ಗೆ ಯೋಚಿಸಬೇಕಿತ್ತು. ಅದು ಅವರಿಗೆ ತಿಳಿದು ಇಲ್ಲ. ಈಗ ನ್ಯಾಯಾಧೀಶರೇ, ಆಟೋದಲ್ಲಿ 5-6 ಜನ ಕುಳಿತುಕೊಂಡು ಹೋಗುತ್ತಾರೆ ಎಂದು ಹೇಳುತ್ತಾರೆ. ಅದು ಮೋಟಾರ್ ಆಕ್ಟ್‌ ಪ್ರಕಾರ ತಪ್ಪಿದೆ. ಆದರೆ, ಟ್ರಾಫಿಕ್ ಪೊಲೀಸರು ಯಾಕೆ ದುಡ್ಡು ತಗೋತಾರೆ, ಅದನ್ನ ಯಾಕೆ ಪ್ರಶ್ನೆ ಮಾಡುವುದಿಲ್ಲ. ಯಾಕೆ? ಉನ್ನತ ಹುದ್ದೆಯಲ್ಲಿರುವವರು ಸಾಮಾಜಿಕವಾಗಿ, ಆರ್ಥಿಕವಾಗಿ ಮಾತನಾಡಬೇಕು ಅದು ಬಿಟ್ಟು ಜಾತಿ ಬಗ್ಗೆ ಧರ್ಮಗಳ ಬಗ್ಗೆ ಮಾತಾಡಬಾರದು ಅದು ತಪ್ಪಿದೆ” ಎಂದರು.

ಈದಿನ 2
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

ಬೀದರ್‌ | ಬೆಳೆ ಹಾನಿ : ಹೆಕ್ಟೇರ್‌ಗೆ ₹50 ಸಾವಿರ ಪರಿಹಾರಕ್ಕೆ ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಬೆಳೆ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ....

Download Eedina App Android / iOS

X