ಗುಬ್ಬಿ | ಸಿನಿಮಾ ಯಶಸ್ವಿಗೆ ಹಾಸ್ಯ ಲೇಪನ ಅತ್ಯಗತ್ಯ : ಹಿರಿಯ ನಟ ದೊಡ್ಡಣ್ಣ

Date:

Advertisements

ಸಿನಿಮಾಗಳಲ್ಲಿ ನಾಯಕ ನಟರಷ್ಟೇ ಪ್ರಾಮುಖ್ಯತೆ ಹಾಸ್ಯ ನಟರಿಗೆ ಆದ್ಯತೆ ತಂದುಕೊಟ್ಟ ಹೆಗ್ಗಳಿಕೆ ಹಾಸ್ಯದಲ್ಲೇ ಮೇರು ನಟ ನರಸಿಂಹರಾಜು ಅವರಿಗೆ ಸಲ್ಲಬೇಕು ಎಂದು ಹಿರಿಯ ನಟ ದೊಡ್ಡಣ್ಣ ಅಭಿಪ್ರಾಯಪಟ್ಟರು.

ಗುಬ್ಬಿ ಪಟ್ಟಣದ ಡಾ.ಗುಬ್ಬಿ ವೀರಣ್ಣ ರಂಗ ಮಂದಿರದಲ್ಲಿ ನಾಟಕ ಆಕಾಡೆಮಿ ಹಾಗೂ ಡಾ.ಗುಬ್ಬಿ ವೀರಣ್ಣ ಟ್ರಸ್ಟ್ ಸಂಯುಕ್ತಾಶ್ರಯದಲ್ಲಿ ಹಾಸ್ಯಬ್ರಹ್ಮ ನರಸಿಂಹರಾಜು ಅವರ ಜನ್ಮ ಶತಮಾನೋತ್ಸವ ಅಂಗವಾಗಿ ಆಯೋಜಿಸಿದ್ದ ನಾಟಕೋತ್ಸವ ಉದ್ಘಾಟಿಸಿ ಮಾತನಾಡಿದ ಅವರು ಹಾಸ್ಯ ಲೇಪನ ಇಲ್ಲದ ಸಿನಿಮಾಗಳಿಗೆ ಯಶಸ್ಸು ಸಿಗುವುದಿಲ್ಲ. ನಾಯಕ ನಟರಂತೆ ಹಾಸ್ಯ ನಟರ ಕಾಲ್ ಶೀಟ್ ಪಡೆಯುವ ಸಮಯ ಸೃಷ್ಟಿಸಿದ್ದು ನರಸಿಂಹರಾಜು ಅವರು ಎಂಬುದು ಎಲ್ಲರಿಗೂ ತಿಳಿದ ವಿಷಯ ಎಂದರು.

ಸಿನಿಮಾಗಳ ಮೂಲ ರಂಗಭೂಮಿ ನಟರನ್ನು ಸೃಷ್ಟಿಸಿತ್ತು. ಇಂತಹ ಮಹತ್ತರ ಜವಾಬ್ದಾರಿ ನಿರ್ವಹಿಸಿದ್ದ ಹೆಗ್ಗಳಿಕೆ ಗುಬ್ಬಿ ವೀರಣ್ಣ ಅವರ ಕಂಪೆನಿಗೆ ಸಲ್ಲಬೇಕು. ಮೇರು ಕಲಾವಿದರ ಹಿಂಡು ಕನ್ನಡ ಚಂದನವನಕ್ಕೆ ಕೊಡುಗೆ ನೀಡಿದ ಗುಬ್ಬಿ ವೀರಣ್ಣ ಅವರ ಗರಡಿಯಲ್ಲಿ ಪಳಗಿದ ನರಸಿಂಹರಾಜು ಅವರು ಡಾ.ರಾಜ್ ಕುಮಾರ್ ಅವರ ಸಮಕಾಲೀನರಾಗಿ ಸುಧೀರ್ಘ ಕಾಲ ಸೇವೆ ಸಲ್ಲಿಸಿದರು. ಇಂದಿನ ಆಧುನಿಕತೆಗೆ ರಂಗಕಲೆ ಸೊರಗದಂತೆ ಕಾಪಾಡುವುದು ಅವಶ್ಯವಿದೆ ಎಂದ ಅವರು ಗುಬ್ಬಿ ವೀರಣ್ಣ ಅವರನ್ನು ಯಜಮಾನರು ಎಂದು ಕರೆಯುತ್ತಿದ್ದ ಕಾಲದಲ್ಲಿ ನಟರ ಕಷ್ಟ ಸುಖ ಅರಿತಿದ್ದ ಗುಬ್ಬಿ ಕಂಪೆನಿ ಶತಮಾನ ಕಂಡ ಅಪರೂಪದ ನಾಟಕ ರಂಗ ಕಂಪೆನಿಯಾಗಿದೆ ಎಂದರು.

Advertisements
1000817523

ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷ ಕೆ.ವಿ.ನಾಗರಾಜಮೂರ್ತಿ ಮಾತನಾಡಿ ಅಭಿನಯ ಮೂಲಕ ಸಮಾಜಕ್ಕೆ ಉತ್ತಮ ಸಂದೇಶ ನೀಡುತ್ತಿದ್ದ ಕಲಾವಿದರು ಅರವತ್ತರ ದಶಕದಲ್ಲಿದ್ದರು. ಇಂತಹ ಮೇರು ನಟರ ಮಧ್ಯೆ ಹಾಸ್ಯ ಮೂಲಕ ಸಂದೇಶ ನೀಡಿದ್ದ ನರಸಿಂಹರಾಜು ನಾಯಕ ನಟರನ್ನು ಮೀರಿಸಿ ಬೆಳೆದು ಹೆಮ್ಮರವಾಗಿದ್ದರು. ಹಾಸ್ಯ ನಟರ ಪರಂಪರೆಯಲ್ಲಿ ಬಾಲಣ್ಣ, ಮುಸರಿ, ದೀರೇಂದ್ರ ಗೋಪಾಲ್ ಸೇರಿದಂತೆ ಇಂದಿನ ದೊಡ್ಡಣ್ಣ, ಸಾಧು ಕೋಕಿಲ ವರೆಗೆ ಬೆಳೆದಿದೆ. ನೋವು ನಲಿವು ಕಂಡ ಹಾಸ್ಯ ನಟರ ಮಧ್ಯೆ ಕನ್ನಡ ಚಿತ್ರರಂಗ ಬೆಳೆದಿದೆ. ಈ ಬೆಳವಣಿಗೆಯಲ್ಲಿ ಗುಬ್ಬಿ ವೀರಣ್ಣನವರ ಕೊಡುಗೆ ಅಪಾರ ಎಂದರು.

ನಟಿ ಸುಧಾ ನರಸಿಂಹರಾಜು ಮಾತನಾಡಿ ನನ್ನ ತಂದೆಯ ಜನ್ಮ ಶತಮಾನೋತ್ಸವ ಆಚರಣೆ ಅವರ ವೃತ್ತಿ ಬದುಕು ಕಟ್ಟಿಕೊಟ್ಟ ಗುಬ್ಬಿಯಲ್ಲಿ ನಡೆದಿರುವುದು ನಮಗೆ ಹೆಮ್ಮೆ ತಂದಿದೆ. ನನ್ನ ತಂದೆಯಿಂದ ಹಲವು ವಿಚಾರ ಕಲಿತಿದ್ದೇನೆ. ಗುಬ್ಬಿ ವೀರಣ್ಣ ಅವರ ಗರಡಿಯಲ್ಲಿ ಕಲಿತು ನಮಗೂ ಅದೇ ಶಿಕ್ಷಣ ನೀಡಿದ್ದರು. ಈ ಸಮಯ ಅವರ ಸವಿ ನೆನಪು ಅಭಿಮಾನಿಗಳಿಗೆ ತಲುಪಿದೆ ಎಂದು ತಮ್ಮ ಬಾಲ್ಯದ ದಿನಗಳನ್ನು ಸ್ಮರಿಸಿದರು.

ಇದೇ ಸಂದರ್ಭದಲ್ಲಿ ಆಳ್ವಾಸ್ ರಂಗ ಅಧ್ಯಯನ ಕೇಂದ್ರ ಕಲಾವಿದರು ಚಾರು ವಸಂತ ಎಂಬ ನಾಟಕ ಪ್ರದರ್ಶಿಸಿದರು.

ವೇದಿಕೆಯಲ್ಲಿ ಹಿರಿಯ ನಟ ಡಿಂಗ್ರಿನಾಗರಾಜ್, ಪಪಂ ಅಧ್ಯಕ್ಷೆ ಮಂಗಳಮ್ಮ ರಾಜಣ್ಣ, ಉಪಾಧ್ಯಕ್ಷೆ ಮಮತಾ ಶಿವಪ್ಪ, ಸದಸ್ಯ ಜಿ.ಸಿ.ಕೃಷ್ಣಮೂರ್ತಿ, ನಾಟಕ ಅಕಾಡೆಮಿ ಸದಸ್ಯ ಸಂಚಾಲಕ ಉಗಮ ಶ್ರೀನಿವಾಸ್, ಗುಬ್ಬಿ ವೀರಣ್ಣ ಟ್ರಸ್ಟ್ ಸದಸ್ಯ ರಾಜೇಶ್ ಗುಬ್ಬಿ ಇತರರು ಇದ್ದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

ಬೀದರ್‌ | ಬೆಳೆ ಹಾನಿ : ಹೆಕ್ಟೇರ್‌ಗೆ ₹50 ಸಾವಿರ ಪರಿಹಾರಕ್ಕೆ ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಬೆಳೆ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ....

Download Eedina App Android / iOS

X