ಗುಬ್ಬಿ | ಹೇಮಾವತಿ ಹೋರಾಟವನ್ನು ಪ್ರತಿಷ್ಠೆಯಾಗಿ ಪರಿಗಣಿಸಬೇಡಿ : ಡಿಸಿಎಂಗೆ ಬಿ.ವೈ.ವಿಜಯೇಂದ್ರ ಎಚ್ಚರಿಕೆ

Date:

Advertisements

ತುಮಕೂರು ಜಿಲ್ಲೆಯ ರೈತರ ಜೀವನಾಡಿ ಹೇಮಾವತಿ ನೀರು ಉಳಿವಿಗೆ ಹೋರಾಟ ಮಾಡುತ್ತಿರುವ ರೈತರ ಆಕ್ರೋಶವನ್ನು ಪ್ರತಿಷ್ಠೆಯಾಗಿ ಪರಿಗಣಿಸದೆ ರೈತರೊಟ್ಟಿಗೆ ಹಾಗೂ ಸರ್ವ ಪಕ್ಷಗಳ ಸಭೆ ಮೂಲಕ ರೈತರಿಗೆ ನ್ಯಾಯ ಒದಗಿಸಬೇಕು. ಹಗುರವಾಗಿ ತಿಳಿದುಕೊಂಡಲ್ಲಿ ಸರ್ಕಾರ ಪತನಗೊಳ್ಳುವುದು ಖಚಿತ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಎಚ್ಚರಿಕೆ ನೀಡಿದರು.

ಗುಬ್ಬಿ ತಾಲ್ಲೂಕಿನ ಕಡಬ ಹೋಬಳಿ ಸಂಕಾಪುರ ಗ್ರಾಮದ ಬಳಿ ಹೇಮಾವತಿ ಲಿಂಕ್ ಕೆನಾಲ್ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಅವರು ಸಾವಿರಾರು ರೈತರು ಕಾಮಗಾರಿಯ ಸ್ಥಳಕ್ಕೆ ಮುತ್ತಿಗೆ ಹಾಕಿ ಐತಿಹಾಸಿಕ ಹೋರಾಟ ನಡೆಸಿದ್ದಾರೆ. ರೈತರ ಬದುಕಿನ ಹಕ್ಕು ಪ್ರತಿಪಾದಿಸುವುದು ನಡೆದಿದೆ. ಇಲ್ಲಿ ಯಾವ ರಾಜಕಾರಣ ನಡೆದಿಲ್ಲ. ರೈತರನ್ನು ಬೆದರಿಸಿ ಎಫ್ಐಆರ್ ಮಾಡುತ್ತಾ ಬೆದರಿಸಿದ್ದಾರೆ. ಈ ನಡುವೆ ಡಿಸಿಎಂ ಶಿವಕುಮಾರ್ ಅವರು ಕಾಮಗಾರಿ ನಿಲ್ಲಿಸುವುದಿಲ್ಲ ಎಂದು ಹೇಳಿದ್ದಾರೆ. ರೈತರನ್ನು ಕೆಣಕಿ ದರ್ಪ ತೋರುವುದು ಸರಿ ಇಲ್ಲ. ರೈತರ ಸಹನೆ ಕಟ್ಟೆ ಒಡೆಯುವ ಮುನ್ನ ಎಚ್ಚೆತ್ತುಕೊಳ್ಳಿ ಎಂದು ತಿಳಿಸಿದರು.

ಪಾಳೆಗಾರಿಕೆ ನಡೆಸದೆ ರೈತರ ಬಗ್ಗೆ ಗೌರವ ಇಟ್ಟುಕೊಳ್ಳಿ. ಮುಖ್ಯಮಂತ್ರಿಗಳು ಈ ಹೇಮಾವತಿ ವಿಚಾರದಲ್ಲಿ ಮೌನ ವಹಿಸದೆ ರೈತರಿಗೆ ನ್ಯಾಯ ಒದಗಿಸಿ. ಕೂಡಲೇ ಸರ್ವಪಕ್ಷಗಳ ಸಭೆ ನಡೆಸಿ. ಯಾವುದೂ ಒಂದು ತಾಲ್ಲೂಕಿಗೆ ಎಂದು ಹೇಳಿ ಜಿಲ್ಲೆಯ ಎಲ್ಲಾ ತಾಲ್ಲೂಕಿಗೆ ಅನ್ಯಾಯ ಮಾಡಬೇಡಿ. ಅಧಿಕಾರಿಗಳ ಅಮಲಿನಲ್ಲಿ ಮಠಾಧೀಶರನ್ನು, ರೈತ ಹೋರಾಟಗಾರರ ವಿರುದ್ಧ ಕೇಸ್ ದಾಖಲಿಸುವ ಅಧಿಕಾರ ದುರ್ಬಳಕೆ ಮಾಡಿದ ಸರ್ಕಾರಕ್ಕೆ ರೈತರೇ ಉತ್ತರ ನೀಡುತ್ತಾರೆ. ತಾಳ್ಮೆ ಕಳೆದುಕೊಂಡಲ್ಲಿ ಸರ್ಕಾರ ಉರುಳುತ್ತದೆ ಎಂದ ಅವರು ಗೃಹಮಂತ್ರಿಗಳು ಜಿಲ್ಲಾ ಉಸ್ತುವಾರಿ ಸಚಿವರು ಆಗಿರುವ ಕಾರಣ ಕೂಡಲೇ ಸರ್ವಪಕ್ಷಗಳ ಸಭೆ ಸೇರಿಸಿ ರೈತ ಮುಖಂಡರೊಟ್ಟಿಗೆ ಚರ್ಚಿಸಿ ರೈತಪರ ತೀರ್ಮಾನ ಕೈಗೊಳ್ಳಿ. ಇಲ್ಲವಾದಲ್ಲಿ ಮುಂದಿನ ಉಗ್ರ ಹೋರಾಟಕ್ಕೆ ರೈತರು ಸಜ್ಜಾಗುತ್ತಾರೆ. ಅವರ ಶಕ್ತಿ ಪರೀಕ್ಷಿಸಿ ಅವನತಿ ಹೊಂದಬೇಡಿ ಎಂದು ಎಚ್ಚರಿಸಿದರು.

Advertisements
1001531699

ವಿಧಾನ ಪರಿಷತ್ ಸಭಾ ಸದಸ್ಯ ಸಿ.ಟಿ.ರವಿ ಮಾತನಾಡಿ ರೈತರ ವಿರೋಧದ ಮಧ್ಯೆ ಮತ್ತೇ ಕಾಮಗಾರಿ ಆರಂಭಿಸಿದರೆ ನೀರು ಬೆಂಕಿ ಆಗುವುದು ಖಂಡಿತ. ರೊಚ್ಚಿಗೆದ್ದ ರೈತರ ಪ್ರವಾಹ ತಡೆಯೋದು ಕಷ್ಟ. ನೀವು ಕೊತ್ವಾಲ್ ಇರಬಹುದು. ಆದರೆ ತುಮಕೂರು ಜಿಲ್ಲೆಯ ರೈತರು ಈ ಕೊತ್ವಾಲ್ ಗೆ ಹೆದರೋದಿಲ್ಲ. ಕಾಮಗಾರಿ ಸ್ಥಗಿತಗೊಳಿಸಿ ಎಲ್ಲಾ ಹೋರಾಟಗಾರ ಮೇಲಿನ ಕೇಸ್ ವಾಪಸ್ ಪಡೆಯಬೇಕು. ಬಂಧಿಸಿರುವ ಮುಖಂಡರನ್ನು ಬಿಡುಗಡೆ ಮಾಡಿ ಸರ್ವಪಕ್ಷದ ಸಭೆ ಆಯೋಜಿಸಿ ಈ ಕಾಮಗಾರಿಯ ಸ್ಪಷ್ಟ ಉದ್ದೇಶವನ್ನು ರೈತರಿಗೆ ತಿಳಿಸಬೇಕು. ಇಲ್ಲವಾದಲ್ಲಿ ರೈತರು ಮುಂದುವರೆದು ನಡೆಸುವ ಹೋರಾಟ, ಅನಾಹುತಕ್ಕೆ ಸರ್ಕಾರವೇ ನೇರ ಹೊಣೆ ಹೊರಬೇಕು ಎಂದು ತಿಳಿಸಿದರು.

ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಮಾತನಾಡಿ ವೈಜ್ಞಾನಿಕ ಲಿಂಕ್ ಕೆನಾಲ್ ಕಾಮಗಾರಿ ಎಂಬುದು ಈ ಸ್ಥಳ ಪರಿಶೀಲನೆಯಲ್ಲೇ ತಿಳಿಯುತ್ತದೆ. ಜಿಲ್ಲೆಯ ಶಾಸಕರ ಸಭೆ ನಡೆಸಿ ಚರ್ಚೆ ಮಾಡಬೇಕಿದೆ. ಸಮಾಲೋಚನೆ ಮಾಡಿ ಒಂದು ತೀರ್ಮಾನ ಮಾಡಬೇಕಿದೆ. ಪ್ರಶ್ನೆ ಮಾಡಿದ ರೈತರನ್ನು ಬೆದರಿಸುವ ಧೋರಣೆ ಮಾಡಿರುವ ಸರ್ಕಾರ ಕಾನೂನು ಬಾಹಿರವಾಗಿ ಕೆಲಸ ನಡೆಸಿದೆ ಎಂಬ ಅಂಶ ನಿಜ ಎನಿಸಿದೆ. ಈ ಎಲ್ಲಾ ಧೋರಣೆ ಬಿಟ್ಟು ರೈತರಿಗೆ ನ್ಯಾಯ ಕೊಡಿ. ಇಲ್ಲವಾದಲ್ಲಿ ರೈತರೇ ಕಾನೂನು ಕೈಗೆತ್ತಿಕೊಂಡು ಹೋರಾಟ ನಡೆಸುತ್ತಾರೆ ಎಂದರು.

ಈ ಸಂದರ್ಭದಲ್ಲಿ ಶಾಸಕರಾದ ಬಿ.ಸುರೇಶಗೌಡ, ಜಿ.ಬಿ.ಜ್ಯೋತಿ ಗಣೇಶ್, ಧೀರಜ್ ಮುನಿರಾಜು, ಮಾಜಿ ಶಾಸಕ ಎಂ.ಡಿ.ಲಕ್ಷ್ಮೀನಾರಾಯಣ್, ಬಿಜೆಪಿ ಜಿಲ್ಲಾಧ್ಯಕ್ಷ ರವಿ ಹೆಬ್ಬಾಕ, ಮುಖಂಡರಾದ ಎಸ್.ಡಿ.ದಿಲೀಪ್ ಕುಮಾರ್. ಬಿ.ಎಸ್.ನಾಗರಾಜ್, ಜಿ.ಎನ್.ಬೆಟ್ಟಸ್ವಾಮಿ, ಪಿ.ಬಿ.ಚಂದ್ರಶೇಖರ ಬಾಬು, ಬ್ಯಾಟರಂಗೇಗೌಡ, ಎನ್.ಸಿ.ಪ್ರಕಾಶ್, ಎಚ್.ಟಿ.ಭೈರಪ್ಪ, ಬಿಜೆಪಿ ತಾಲ್ಲೂಕು ಅಧ್ಯಕ್ಷ ಬಲರಾಮಯ್ಯ, ಬಿ.ಎಸ್.ಪಂಚಾಕ್ಷರಿ ಇತರರು ಇದ್ದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬಾಗೇಪಲ್ಲಿ | ನೋಟಿಸ್ ನೀಡದೇ ಕೆಲಸದಿಂದ ತೆಗೆದ ಗಾರ್ಮೆಂಟ್ ಫ್ಯಾಕ್ಟರಿ; ಪ್ರತಿಭಟನೆಗಿಳಿದ ಮಹಿಳಾ ನೌಕರರು

ಬಾಗೇಪಲ್ಲಿ ತಾಲೂಕಿನ ಹೊರವಲಯದ ರಾಷ್ಟ್ರೀಯ ಹೆದ್ದಾರಿ ನಾರೇಪಲ್ಲಿ ಟೋಲ್ ಗೇಟ್ ಬಳಿ...

ಧಾರವಾಡ | ಹಾಳುಬಿದ್ದ ಸಂಶಿ ಎಪಿಎಂಸಿ; ವಾರದ ಸಂತೆ ಸ್ಥಳಾಂತರಿಸಲು ಒತ್ತಾಯ

ಸರ್ಕಾರದ ಮಟ್ಟದಲ್ಲಿ ಆಗುವ ಯೋಜನೆಗಳ ಅನುಷ್ಠಾನ ಮಾಡುವಲ್ಲಿ ನಿರ್ಲಕ್ಷ್ಯ ವಹಿಸುವುದರಿಂದ ಇತ್ತ...

ಹಾಸನ | ಕ್ಯೂಬಾ ದೇಶದ ಸಮಗ್ರ ಅಭಿವೃದ್ಧಿಯಲ್ಲಿ ಫಿಡೆಲ್ ಕ್ಯಾಸ್ಟ್ರೋ ಕೊಡುಗೆ ಅಪಾರ: ಬರಹಗಾರ ರವಿಕುಮಾರ್

ಕೃಷಿ ಪ್ರಧಾನವಾಗಿರುವ ಪುಟ್ಟ ಕ್ಯೂಬಾ ದೇಶವನ್ನು ಎಲ್ಲಾ ಕ್ಷೇತ್ರದಲ್ಲಿ ಅಭಿವೃದ್ಧಿ ಹೊಂದುವಂತೆ...

ಕುಶಾಲನಗರ | ಕೊಡಗು ಪ್ರವೇಶ ನಿರ್ಬಂಧ; ಪುನೀತ್ ಕೆರೆಹಳ್ಳಿಯನ್ನು ಹೊರಹಾಕಿದ ಪೊಲೀಸರು

ಕೊಡಗು ಜಿಲ್ಲೆ, ಕುಶಾಲನಗರಕ್ಕೆ ಆಗಮಿಸಿದ್ದ ರಾಷ್ಟ್ರ ರಕ್ಷಣಾ ಪಡೆಯ ಸಂಸ್ಥಾಪಕ ಪುನೀತ್...

Download Eedina App Android / iOS

X