ಗುಬ್ಬಿ | ಹೇಮಾವತಿ ಹೋರಾಟಕ್ಕೆ ಸಂಸದ ವಿ.ಸೋಮಣ್ಣ ಆಗಮಿಸುವಂತೆ ರೈತರಿಂದ ಒಕ್ಕೊರಲಿನ ಒತ್ತಾಯ

Date:

Advertisements

ತುಮಕೂರು ಜಿಲ್ಲೆಯ ರೈತರಿಗೆ ಬದುಕು ಕಟ್ಟಿಕೊಟ್ಟ ಹೇಮಾವತಿ ನೀರು ಮತ್ತೊಂದು ಜಿಲ್ಲೆಗೆ ಹರಿಸಿಕೊಳ್ಳಲು ಸಿದ್ಧವಾದ ಅವೈಜ್ಞಾನಿಕ ಪೈಪ್ ಲೈನ್ ಕಾಮಗಾರಿ ವಿರೋಧದ ನಡುವೆ ಅಧಿಕಾರ ಬಳಸಿ ನಡೆಸುತ್ತಿರುವುದನ್ನು ವಿರೋಧಿಸಿ ಇದೇ ತಿಂಗಳ 31 ರಂದು ನಡೆಯುವ ಸಾವಿರಾರು ರೈತರ ಬೃಹತ್ ಪ್ರತಿಭಟನೆಯಲ್ಲಿ ಸಂಸದ ವಿ.ಸೋಮಣ್ಣ ಆಗಮಿಸಿ ಕಾಮಗಾರಿ ಸ್ಥಗಿತಗೊಳಿಸಲು ಮುಂದಾಗಬೇಕು ಎಂದು ರೈತರು ಒಕ್ಕೊರಲಿನ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಹೇಮಾವತಿ ಎಕ್ಸ್ ಪ್ರೆಸ್ ಲಿಂಕ್ ಕೆನಾಲ್ ವಿರೋಧ ಸಮಿತಿ ನಡೆಸಿದ ಪ್ರತಿಭಟನಾ ಪೂರ್ವಭಾವಿ ಸಭೆಯಲ್ಲಿ ರೈತ ಸಂಘ ಹಾಗೂ ಹಲವು ರಾಜಕೀಯ ಮುಖಂಡರ ಮುಂದೆ ನಡೆದ ಚರ್ಚೆಯಲ್ಲಿ ನಮ್ಮ ಪರ ಸಂಸದರು ನಿಲ್ಲಲೇಬೇಕು. ಹಾಗಾಗಿ ಈ ಹೋರಾಟದಲ್ಲಿ ಪಾಲ್ಗೊಂಡು ರೈತರಿಗೆ ಧೈರ್ಯ ತುಂಬುವ ಕೆಲಸ ಮಾಡಲಿ ಎಂದು ಮನವಿ ಮಾಡಿದರು.

ಸಭೆಯನ್ನುದ್ದೇಶಿಸಿ ಬಿಜೆಪಿ ಮುಖಂಡ ದಿಲೀಪ್ ಕುಮಾರ್ ಮಾತನಾಡಿ ತಾಲ್ಲೂಕಿನ ಪ್ರತಿ ಗ್ರಾಮ ಪಂಚಾಯಿತಿ ಪ್ರವಾಸ ಕೈಗೊಂಡು ಮನೆಯಿಂದ ಒಬ್ಬರಂತೆ ರೈತರು ಹೋರಾಟಕ್ಕೆ ಬರುವಂತೆ ಮನವಿ ಮಾಡಲಾಗುತ್ತಿದೆ. ಹೋಬಳಿ ಮಟ್ಟದ ಮುಖಂಡರನ್ನು ಒಗ್ಗೂಡಿಸಿ ಪಂಚಾಯಿತಿ ಪ್ರವಾಸ ಎರಡು ದಿನದಲ್ಲಿ ನಡೆಸುತ್ತೇವೆ. ರೈತರು ಉದಾಸೀನತೆ ತೋರಬೇಡಿ. ಅಲ್ಲಲ್ಲೇ ನಿಂತು ನೆಗೆಟಿವ್ ಮಾತುಗಳನ್ನಾಡಬೇಡಿ. ಹೋರಾಟವನ್ನು ಎಬಿಸಿ ಎಂದು ಮೂರು ಭಾಗದಲ್ಲಿ ನಡೆಸಬೇಕಿದೆ. ಇಲ್ಲಿ ಎಲ್ಲರೂ ಮುಖಂಡರೇ ಆಗಬೇಕು. ಸಾವಿರಾರು ರೈತರನ್ನೂ ಅರೆಸ್ಟ್ ಮಾಡಲಿ. ಮಠಾಧೀಶರು, ಶಾಸಕರು ಬರಲಿದ್ದಾರೆ. ಮುಖಂಡರ ಗೃಹ ಬಂಧನ ಮಾಡುವ ಪ್ರಯತ್ನ ನಡೆದರೆ ಉಳಿದ ರೈತರು ತಾಲ್ಲೂಕಿನ ಹೆದ್ದಾರಿಯನ್ನು ಎಲ್ಲೆಂದರಲ್ಲಿ ಬಂದ್ ಮಾಡಿ ಬಿಸಿ ಮುಟ್ಟಿಸಬೇಕು ಎಂದು ಕರೆ ನೀಡಿದರು.

Advertisements

ಜೆಡಿಎಸ್ ಮುಖಂಡ ಬಿ.ಎಸ್.ನಾಗರಾಜು ಮಾತನಾಡಿ ಚುನಾವಣೆ ಬಂದಾಗ ಪಕ್ಷ ಚಟುವಟಿಕೆ ಸಾಮಾನ್ಯವಾಗಿ ನಡೆಯುತ್ತದೆ. ಆದರೆ ಈ ಹೋರಾಟ ಹೇಮಾವತಿ ನೀರಿಗಾಗಿ ನಡೆಸಬೇಕಿದೆ. ನಮ್ಮ ಬದುಕು ಉಳಿವಿನ ಪ್ರಶ್ನೆಯಾಗಿದೆ. ಇಲ್ಲಿ ಪಕ್ಷಾತೀತ, ಜಾತ್ಯತೀತ ನಿಲುವು ಕಾಣುತ್ತಿದೆ. ವೈ.ಕೆ.ರಾಮಯ್ಯ ಅವರ ಹೋರಾಟದ ಮಾದರಿಯಲ್ಲಿ ಸಾವಿರಾರು ರೈತರು ನಮ್ಮ ನೀರಿನ ಹಕ್ಕು ಪ್ರತಿಪಾದಿಸಬೇಕು. ಪೊಲೀಸರ ಬಗ್ಗೆ ಭಯ ಬೇಕಿಲ್ಲ. ಅರೆಸ್ಟ್, ಕೇಸ್ ಏನೇ ಎದುರಾದರೂ ನಿಮ್ಮೊಂದಿಗೆ ನಾವು ಇರುತ್ತೇವೆ ಎಂದು ಧೈರ್ಯ ತುಂಬಿದ ಅವರು ತೋಟ ಜಮೀನು ಅಳತೆಯಲ್ಲಿ ಒಂದಿಂಚು ಬಿಡದ ರೈತರು ನಮ್ಮ ನೀರು ಬೇರೆಯವರು ಕಿತ್ತುಕೊಂಡರೆ ಸುಮ್ಮನೆ ಇರಬೇಕಿದೆಯೇ, ಹಾಗಾಗಿ ರೈತರು ಒಗ್ಗೂಡಿ ಹೋರಾಟಕ್ಕೆ ಪ್ರತಿ ಪಂಚಾಯಿತಿಯಿಂದ ಒಂದು ಸಾವಿರದಂತೆ ಸಂಖ್ಯೆಯಲ್ಲಿ ಆಗಮಿಸಲು ಮನವಿ ಮಾಡಿದರು.

ರೈತ ಸಂಘದ ತಾಲ್ಲೂಕು ಅಧ್ಯಕ್ಷ ಕೆ.ಎನ್. ವೆಂಕಟೇಗೌಡ ಮಾತನಾಡಿ ಇನ್ನೆರಡು ದಿನದಲ್ಲಿ ರೈತರು ತಮ್ಮ ಊರಲ್ಲಿ ಒಗ್ಗಟ್ಟು ಪ್ರದರ್ಶನ ಮಾಡಬೇಕು. ಸರ್ಕಾರ ಏನಾದರೂ ಮಾಡಲಿ. ನಮ್ಮ ನೀರು ನಾವು ಉಳಿಸಿಕೊಳ್ಳಬೇಕು. ಅರೆಸ್ಟ್ ಮಾಡಿದರೆ ಮಾಡಲಿ. ಒಟ್ಟಾಗಿ ಸಾವಿರಾರು ರೈತರನ್ನು ಎಲ್ಲಿ ತುಂಬುತ್ತಾರೆ ಎಂಬುದು ನೋಡೋಣ. ಮಂಡ್ಯ ಜಿಲ್ಲೆಯ ಮಾದರಿಯಲ್ಲಿ ಹೋರಾಟ ಮಾಡೋಣ. ಹೆಣ್ಣು ಮಕ್ಕಳು ಹಾಗೂ ವಿದ್ಯಾರ್ಥಿಗಳು ರಸ್ತೆಗಿಳಿದು ಪ್ರತಿಭಟನೆ ಮಾಡಬೇಕಿದೆ. ಈ ಹೋರಾಟಕ್ಕೆ ಸಂಸದರು ಅತೀ ಬುದ್ಧಿವಂತಿಕೆ ತೋರದೆ ರೈತರೊಂದಿಗೆ ಕುಳಿತು ಹೋರಾಟ ನಡೆಸಬೇಕು ಎಂದು ಆಗ್ರಹಿಸಿದರು.

ಜೆಡಿಎಸ್ ಮುಖಂಡ ಕಳ್ಳಿಪಾಳ್ಯ ಲೋಕೇಶ್ ಮಾತನಾಡಿ ಜಿಲ್ಲೆಗೆ ಮರಣ ಶಾಸನವಾದ ಈ ಲಿಂಕ್ ಕೆನಾಲ್ ಕಾಮಗಾರಿ ಅವೈಜ್ಞಾನಿಕ ಹಾಗೂ ಅಕ್ರಮವಾಗಿದೆ. ಬೇರೆ ಜಿಲ್ಲೆಗೆ ನೀರು ಹರಿದರೆ ಅತೀ ಹೆಚ್ಚು ನಷ್ಟ ಗುಬ್ಬಿ ತಾಲ್ಲೂಕು ರೈತರಿಗೆ ಆಗಲಿದೆ. ಮುಖ್ಯನಾಲೆಯಿಂದ ನೀರು ಹರಿಸುವುದು ಕಾನೂನು ಬಾಹಿರ. ತಾಂತ್ರಿಕ ಸಮಸ್ಯೆಯಿಂದ ಕೂಡಿದ ಪೈಪ್ ಲೈನ್ ಕಾಮಗಾರಿಗೆ ಅಧಿಕಾರಿಗಳ ರಕ್ಷಣೆ ಸಿಕ್ಕಿರುವುದು ರೈತ ವಿರೋಧಿ ನೀತಿ ಆಗಿದೆ. ಕುಣಿಗಲ್ ತಾಲ್ಲೂಕು ಉಳಿಸಲು ಉಳಿದ ಏಳು ತಾಲ್ಲೂಕು ಬರಡು ಮಾಡುವ ಈ ಯೋಜನೆ ಕೈ ಬಿಡಬೇಕು. ಮುಂದಿನ ದಿನದಲ್ಲಿ ಕೃಷಿ ತೊರೆಯುವ ಕಾಲ ಬರುವ ಮುನ್ನ ರೈತರು ಎಚ್ಚೆತ್ತು ಹೋರಾಟಕ್ಕೆ ತಂಡೋಪತಂಡವಾಗಿ ಆಗಮಿಸಬೇಕು ಎಂದು ಕರೆ ನೀಡಿದರು.

ಬಿಜೆಪಿ ಮುಖಂಡ ಎಚ್.ಟಿ.ಭೈರಪ್ಪ ಮಾತನಾಡಿ ಜಿಲ್ಲೆಗೆ ಹೇಮಾವತಿ ನೀರು ತರಲು ವೈ.ಕೆ.ರಾಮಯ್ಯ ಅವರ ನೇತೃತ್ವದ ಹೋರಾಟ ತಿಂಗಳುಗಟ್ಟಲೆ ನಡೆದಿತ್ತು. ಅಂತಹ ಹೋರಾಟ ಮತ್ತೊಮ್ಮೆ ನಡೆಸಬೇಕಿದೆ. ಕಾಂಗ್ರೆಸ್ ಇಡೀ ಜಿಲ್ಲೆಯ ನೀರನ್ನು ಕಸಿಯುತ್ತಿದೆ. ಜಿಲ್ಲೆಯ ಇಬ್ಬರು ಸಚಿವರು ವಿರೋಧಿಸಬೇಕಿದೆ. ಚುನಾಯಿತ ಪ್ರತಿನಿಧಿಗಳು ಸಹ ಪಕ್ಷ ಬೇದ ಬಿಟ್ಟು ಹೋರಾಟಕ್ಕೆ ಬಂದು ನಮ್ಮ ರೈತರನ್ನು ಉಳಿಸಬೇಕು ಎಂದು ಕರೆ ನೀಡಿದರು.

ಈ ಸಂದರ್ಭದಲ್ಲಿ ಮುಖಂಡರಾದ ಜಿ.ಎನ್. ಬೆಟ್ಟಸ್ವಾಮಿ, ಹೊನ್ನಗಿರಿಗೌಡ, ಯೋಗಾನಂದಕುಮಾರ್, ಅ.ನ.ಲಿಂಗಪ್ಪ, ಸಾಗರನಹಳ್ಳಿ ವಿಜಯಕುಮಾರ್, ಜಿ.ಆರ್.ಶಿವಕುಮಾರ್, ಬಿ.ಎಸ್.ಪಂಚಾಕ್ಷರಿ, ಸಿ.ಆರ್.ಶಂಕರಕುಮಾರ್, ಜಿ.ಡಿ.ಸುರೇಶಗೌಡ, ಕಾಡಶೆಟ್ಟಿಹಳ್ಳಿ ಸತೀಶ್, ರೈತಸಂಘದ ಶಿವಕುಮಾರ್, ಸಿ.ಜಿ.ಲೋಕೇಶ್, ಅಜ್ಜಪ್ಪ, ಬ್ಯಾಟರಂಗೇಗೌಡ, ಪಾರ್ಥಸಾರಥಿ, ಎನ್.ಬಿ.ರಾಜಶೇಖರ್, ಎಪಿಕೆ ರಾಜು ಇತರರು ಇದ್ದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ತೆಂಗಿನಕಾಯಿ ಕಳ್ಳತನ ಆರೋಪ: ವ್ಯಕ್ತಿಯ ಹತ್ಯೆ; ಆರೋಪಿಗಳ ಬಂಧನ

ತೆಂಗಿನಕಾಯಿ ಕಳ್ಳತನ ಮಾಡಿದ್ದಾನೆ ಎಂಬ ಕಾರಣಕ್ಕೆ ವ್ಯಕ್ತಿಯನ್ನು ಹತ್ಯೆ ಮಾಡಿರುವ ಘಟನೆ...

ಗದಗ | ಒಳಮೀಸಲಾತಿ ಅಂಗೀಕಾರ ಸ್ವಾಗತಾರ್ಹ: ಬಸವರಾಜ ಕಡೇಮನಿ

"ಒಳಮೀಸಲಾತಿ ಜಾರಿಗಾಗಿ ಒತ್ತಾಯಿಸಿ ಮೂವತ್ತೈದು ವರ್ಷಗಳ ನಿರಂತರ ಹೋರಾಟದ ಫಲದಿಂದ ರಾಜ್ಯ...

ಸಕಲೇಶಪುರ | ವ್ಯಸನಮುಕ್ತ ರಾಜ್ಯ ಆಂದೋಲನಕ್ಕೆ ಸರ್ಕಾರ ಸಂಪೂರ್ಣ ಬೆಂಬಲ ನೀಡಬೇಕು: ಬಿ ಆರ್‌ ಪಾಟೀಲ್

ವ್ಯಸನಮುಕ್ತ ರಾಜ್ಯ ಆಂದೋಲನಕ್ಕೆ ಸರ್ಕಾರ ಸಂಪೂರ್ಣವಾಗಿ ಬೆಂಬಲ ನೀಡಿದಾಗ ಮಾತ್ರ ವ್ಯಸನವನ್ನು...

ಚಿಕ್ಕಮಗಳೂರು l ಸಭಾಧ್ಯಕ್ಷರೇ ಮಲೆನಾಡಿನ ಸಮಸ್ಯೆ ಬಗ್ಗೆ ಚರ್ಚಿಸಲು ಅವಕಾಶ ಕಲ್ಪಿಸಿ; ಹೆಚ್.ಡಿ ತಮ್ಮಯ್ಯ

ಮಲೆನಾಡಿನಲ್ಲಿ ಕಾಡುತ್ತಿರುವ ಕಾಡು-ಪ್ರಾಣಿ-ಮಾನವ ಸಂಘರ್ಷದಿಂದ ಜನಜೀವನ ಅಸ್ತವ್ಯಸ್ಥವಾಗಿದೆ. ಇಂತಹ ಗಂಭೀರ ಸಮಸ್ಯೆಗಳ...

Download Eedina App Android / iOS

X